ಮುಳ್ಳೂರು, ಜೂ. ೧೫: ಸಮೀಪದ ಶನಿವಾರಸಂತೆ ಪಟ್ಟಣದ ಕಸ ವಿಲೇವಾರಿಗೆ ಪಕ್ಕದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ದುಂಡಳ್ಳಿ ಗ್ರಾಮದ ಊರೂಡುವೆಗೆ ಸೇರಿದ ೨.೫೦ ಎಕರೆ ಜಾಗವನ್ನು ಕಳೆದ ೪ ವರ್ಷಗಳ ಹಿಂದೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಆದೇಶದಂತೆ ಗುರುತಿಸಲಾಗಿತ್ತು. ಆದೇಶದಂತೆ ಸ್ಥಳದಲ್ಲಿ ಕಸ ವಿಲೇವಾರಿ ಮಾಡಲು ಶನಿವಾರಸಂತೆ ಗ್ರಾ.ಪಂ.ಗೆ ೨ ಎಕರೆ ಮತ್ತು ದುಂಡಳ್ಳಿ ಗ್ರಾ.ಪಂ.ಗೆ ಅರ್ಧ ಎಕರೆ ಜಾಗವನ್ನು ನೀಡುವಂತೆ ಸೂಚಿಸಲಾಗಿತ್ತು. ದುಂಡಳ್ಳಿ ಗ್ರಾ.ಪಂ.ಯವರು ಕಸ ವಿಲೇವಾರಿ ಘಟಕವನ್ನು ನಿರ್ಮಿಸಿ ಈಗಾಗಲೇ ಈ ಘಟಕದೊಳಗೆ ಘನ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ಶನಿವಾರಸಂತೆ ಗ್ರಾ.ಪಂ.ಯಿAದ ದುಂಡಳ್ಳಿ ಗ್ರಾ.ಪಂ.ಯ ಕಸ ವಿಲೇವಾರಿ ಘಟಕದ ಪಕ್ಕದಲ್ಲಿ ರೂ. ೧೧ ಲಕ್ಷ ವೆಚ್ಚದಲ್ಲಿ ಕಸ ವಿಲೇವಾರಿ ಘಟಕದ ಘನ ವಸ್ತುಗಳ ಸಂಗ್ರಹ ಕಟ್ಟಡವನ್ನು ನಿರ್ಮಿಸಲಾಗಿದೆ ಹಾಗೂ ಇದೆ ಸ್ಥಳದಲ್ಲಿ ಅಧಿಕೃತವಾಗಿ ಕಸ ವಿಲೇವಾರಿ ಮಾಡುವ ಸಲುವಾಗಿ ಸಿದ್ಧತೆ ಮಾಡಲಾಗಿತ್ತು. ನೂತನ ಶಾಸಕರಿಂದ ಕಸ ವಿಲೇವಾರಿ ಘಟಕವನ್ನು ಉದ್ಘಾಟಿಸುವ ಸಲುವಾಗಿಯೂ ಸಿದ್ಧತೆ ನಡೆದಿತ್ತು. ಆದರೆ ಈಗ ಪಕ್ಕದ ದುಂಡಳ್ಳಿ ಗ್ರಾಮಸ್ಥರು ಶನಿವಾರಸಂತೆ ಗ್ರಾ.ಪಂ.ಯವರು ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕದ ಕಾಮಗಾರಿಯನ್ನು ಪೂರ್ಣಗೊಳಿಸುವವರೆಗೂ ಕಸ ವಿಲೇವಾರಿ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನಮ್ಮ ಗ್ರಾ.ಪಂ.ಯ ಕಸ ವಿಲೇವಾರಿ ಘಟಕದ ಪಕ್ಕದಲ್ಲೆ ಶನಿವಾರಸಂತೆ ಗ್ರಾ.ಪಂ.ಯ ಕಸ ವಿಲೇವಾರಿ ಘಟಕ ಇರುವುದರಿಂದ ಶನಿವಾರಸಂತೆ ಪಟ್ಟಣ ಆಗಿರುವ ಹಿನ್ನೆಲೆ ಪ್ರತಿದಿನ ಒಂದೆರೆಡು ಟ್ರಾö್ಯಕ್ಟರ್‌ನಷ್ಟು ಹಸಿ, ಒಣ ತ್ಯಾಜ್ಯಗಳನ್ನು ಇದೆ ಸ್ಥಳದಲ್ಲಿ ವಿಲೇವಾರಿ ಮಾಡುವ ಸಾಧ್ಯತೆ ಇರುತ್ತದೆ. ಈ ಘಟಕದ ಆಸುಪಾಸಿನಲ್ಲಿ ಮನೆಗಳಿವೆ. ಈ ಕಾರಣದಿಂದ ಶನಿವಾರಸಂತೆ ಗ್ರಾ.ಪಂ.ಯವರು ಕಸ ವಿಲೇವಾರಿ ಮಾಡುವ ಜಾಗದ ಸುತ್ತಲೂ ಕಸ ತ್ಯಾಜ್ಯ ಹಾರಿಹೋಗದಂತೆ ತಡೆಗೋಡೆ ನಿರ್ಮಿಸಬೇಕು ಹಾಗೂ ಉಭಯ ಗ್ರಾ.ಪಂ.ಗಳಿAದ ಈಗಾಗಲೇ ನಿರ್ಮಿಸಿರುವ ಘನ ತ್ಯಾಜ್ಯ ವಸ್ತುಗಳ ಸಂಗ್ರಹ ಕಟ್ಟಡಕ್ಕೆÀ ಮತ್ತು ಕಸ ವಿಲೇವಾರಿ ಮಾಡಲು ಅಗತ್ಯ ಇರುವ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸಿಕೊಡುವಂತೆ ದುಂಡಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಸ ವಿಲೇವಾರಿ ಜಾಗದ ಕುರಿತಾದ ಉಭಯ ಗ್ರಾ.ಪಂ.ಗಳ ವಿವಾದದ ಹಿನ್ನೆಲೆ ಗುರುವಾರ ಶನಿವಾರಸಂತೆ ಕಂದಾಯ ಅಧಿಕಾರಿಗಳು, ಭೂ ಮಾಪನ ಇಲಾಖೆ ಅಧಿಕಾರಿಗಳು, ಉಭಯ ಗ್ರಾ.ಪಂ.ಗಳ ಅಧ್ಯಕ್ಷರು, ಸದಸ್ಯರು, ಪಿಡಿಓ ಮತ್ತು ಗ್ರಾ.ಪಂ.ಗಳ ಸಿಬ್ಬಂದಿ ಮತ್ತು ಉಭಯ ಗ್ರಾ.ಪಂ.ಗಳ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ದುಂಡಳ್ಳಿ ಗ್ರಾಮಸ್ಥರು ನಮ್ಮ ಗ್ರಾಮದಲ್ಲಿ ಶನಿವಾರಸಂತೆ ಗ್ರಾ.ಪಂ.ಯವರು ಕಸ ವಿಲೇವಾರಿ ಮಾಡಲು ಅಡ್ಡಿ ಇರುವುದಿಲ್ಲ. ಆದರೆ ವೈಜ್ಞಾನಿಕ ರೀತಿಯಲ್ಲಿ ತಡಗೋಡೆ ನಿರ್ಮಿಸಿ ಮತ್ತು ನಮ್ಮ ಗ್ರಾಮದ ಆಸುಪಾಸಿನ ನಿವಾಸಿಗಳಿಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿಕೊಂಡ ನಂತರ ನೀವು ಇಲ್ಲಿ ಕಸ ವಿಲೇವಾರಿ ಮಾಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್, ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯ ಎನ್.ಎ. ಆದಿತ್ಯ ಗೌಡ, ಪಿಡಿಓ ಮೇದಪ್ಪ, ಕಾರ್ಯದರ್ಶಿ ದೇವರಾಜ್, ಸಿಬ್ಬಂದಿ ವಸಂತ್, ದುಂಡಳ್ಳಿ ಗ್ರಾ.ಪಂ. ಸದಸ್ಯೆ ಜಾನಕಿ, ಮಾಜಿ ಅಧ್ಯಕ್ಷ ಸುಬ್ರಮಣ್ಯ, ಪ್ರಮುಖರಾದ ಕೆ.ಟಿ. ಹರೀಶ್ ಶನಿವಾರಸಂತೆ ಆರ್‌ಐ ಮಂಜುನಾಥ್, ಗ್ರಾಮ ಆಡಳಿತ ಅಧಿಕಾರಿ ಸಂತೋಷ್, ಭೂ ಮಾಪನ ಇಲಾಖೆ ಅಧಿಕಾರಿ ರಘುನಾಥ್ ಬಾಬ್ಡೆ ಮತ್ತು ಸಿಬ್ಬಂದಿ ಹಾಜರಿದ್ದರು.