ಉತ್ತರ ಅಮೇರಿಕಾ ಖಂಡದ ಉತ್ತರ ಭಾಗದಲ್ಲಿನ ಕಾಡ್ಗಿಚ್ಚುಪೀಡಿತ ಕೆನಡಾ ದೇಶದಲ್ಲಿ ಏಪ್ರಿಲ್ ಕೊನೆಯ ವಾರದಲ್ಲಿ ಪ್ರಾರಂಭಗೊAಡಿರುವ ಕಾಡ್ಗಿಚ್ಚು, ಇಂದಿಗೂ ಉರಿಯುತ್ತಲೇ ಇದೆ. ಮತ್ತೆ ಒಂದು ತಿಂಗಳ ಕಾಲ ಉರಿಯುತ್ತಲೇ ಇರಬಹುದಾಗಿ ಅಂದಾಜಿಸಲಾಗಿದೆ. (ಯು.ಎಸ್.ಎ) ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಕೆಲ ರಾಜ್ಯಗಳನ್ನು ಆವರಿಸಿದ್ದಲ್ಲದೆ, ಕೆನಡಾ ಉತ್ತರ ಭಾಗಕ್ಕಿರುವ ನಾರ್ವೆ ರಾಷ್ಟç ಹಾಗೂ ಗ್ರೀನ್‌ಲ್ಯಾಂಡ್ ಮಾತ್ರವಲ್ಲದೆ ಅಟ್ಲಾಂಟಿಕ್ ಮಹಾಸಾಗರವನ್ನೇ ದಾಟಿ ಯೂರೋಪ್ ಖಂಡದವರೆಗೂ ಕಿಚ್ಚಿನ ಹೊಗೆಯು ಆಗಸವನ್ನು ಆವರಿಸಿದೆ. ೩೦,೦೦೦ಕ್ಕೂ ಅಧಿಕ ಮಂದಿ ಸ್ಥಳಾಂತರಗೊAಡಿದ್ದಾರೆ. ಸುಮಾರು ೪೨೭ ಕಡೆಗಳಲ್ಲಿ ಸಕ್ರಿಯವಾಗಿ ಕಾಡ್ಗಿಚ್ಚು ಹರಡುತ್ತಿದ್ದು, ೨೩೨ ಸ್ಥಳಗಳಲ್ಲಿ ಇವುಗಳನ್ನು ನಿಯಂತ್ರಣಕ್ಕೆ ತರಲಸಾಧ್ಯವಾಗಿದ್ದು, ಇನ್ನು ಉರಿಯುತ್ತಿದೆ.

ಕೆನಡಾದಲ್ಲಿ ಪ್ರತಿ ವರ್ಷ ದೊಡ್ಡ ಮಟ್ಟದ ಕಾಡ್ಗಿಚ್ಚು ಸಂಭವಿಸುತ್ತ ದಾದರೂ ಕೆನಡಾದ ಅಲ್ಬೆರ್ಟಾ, ಬ್ರಿಟಿಷ್ ಕೊಲಂಬಿಯಾ ಹಾಗೂ ಸ್ಯಾಸ್ಕಾಚವಾನ್ ಪ್ರಾಂತ್ಯಗಳನ್ನು ಸೇರಿ ಒಟ್ಟು ೪ ಲಕ್ಷದ ೭೮ ಸಾವಿರ ಹೆಕ್ಟೇರ್‌ನಷ್ಟು ಕಾಡು ಬೆಂಕಿಗಾಹುತಿಯಾಗಿ ದೇಶದ ಇತಿಹಾಸದಲ್ಲಿಯೇ ಇಷ್ಟರ ಮಟ್ಟಿಗೆ ನಷ್ಟ ಈ ಬಾರಿ ಸಂಭವಿಸಿದೆ. ಜಾಗತಿಕ ತಾಪಮಾನ ಏರಿಕೆ, ಕಾಡ್ಗಿಚ್ಚು ಸುಲಭವಾಗಿ ಪ್ರಾರಂಭವಾಗಲು ಕಾರಣವಾದರೆ, ಪ್ರಸ್ತುತ ಅಲ್ಲಿನ ಚಂಡಮಾರುತವು ಕಿಚ್ಚಿನ ಹೊಗೆಯನ್ನು ಯೂರೋಪ್‌ವರೆಗೂ ಸಾಗಿಸಲು ಸಹಕಾರಿಯಾಗಿದ್ದು, ಇದೊಂದು ಜಾಗತಿಕ ಘಟನೆಯಾಗಿ ಮಾರ್ಪಟ್ಟಿದೆ. ೧,೭೦೦ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಿಯಂತ್ರಣಕ್ಕೆ ಸತತ ಪ್ರಯತ್ನ ನಡೆಸುತ್ತಿದ್ದರಾದರೂ ಬೇಸಿಗೆ ಅಂತ್ಯದವರೆಗೂ ಕಾಡ್ಗಿಚ್ಚು ಉರಿಯುತ್ತಲಿರಲಿದೆ ಎಂಬುದಾಗಿ ಅಂದಾಜಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್, ನ್ಯೂಜಿಲ್ಯಾಂಡ್, ಆಸ್ಟೆçÃಲಿಯಾ ಫ್ರಾನ್ಸ್, ಸ್ಪೇನ್, ಪರ‍್ಚುಗಲ್ ರಾಷ್ಟçಗಳಿಂದ ಅಗ್ನಿಶಾಮಕ ಸಿಬ್ಬಂದಿ ಸಹಾಯಹಸ್ತ ನೀಡಿದ್ದಾರೆ.

ಮಂಗಳ ಗ್ರಹದಂತೆ ಗೋಚರಿಸಿದ ನ್ಯೂಯಾರ್ಕ್...!

ಕಾಡ್ಗಿಚ್ಚು ಆರಂಭವಾಗುತ್ತಿದ್ದAತೆ ಈ ಭಾಗದಲ್ಲಿ ಚಂಡಮಾರುತದ ತೀವ್ರತೆಯೂ ಹೆಚ್ಚಾಗತೊಡಗಿದ್ದು, ನಷ್ಟದ ಪ್ರಮಾಣದೊಂದಿಗೆ ಕಿಚ್ಚಿನ ವಿಸ್ತಾರವನ್ನೂ ಹೆಚ್ಚಿಸಲು ಸಹಕಾರಿಯಾಗಿದೆ. ಪ್ರಸ್ತುತ ಪೂರ್ವಕ್ಕೆ ಸರಿಯುತ್ತಿರುವ ಚಂಡಮಾರುತವು, ಯುನೈಟೆಡ್ ಸ್ಟೇಟ್ಸ್ನ ಪೂರ್ವಭಾಗದ ರಾಷ್ಟçಗಳಲ್ಲಿ ಕಿಚ್ಚಿನ ಹೊಗೆಯನ್ನು ಹರಡಿದೆ. ಇದಲ್ಲದೆ ನಾರ್ವೆ ರಾಷ್ಟç ಹಾಗೂ ಯೂರೋಪ್ ಖಂಡದವರೆಗೂ ಚಂಡಮಾರುತವು ಹೊಗೆಯನ್ನು ಸಾಗಿಸುವಲ್ಲಿ ಯಶಸ್ಸು ಕಂಡಿದೆ. ಕಳೆದ ವಾರ ಕೆನಡಾದಿಂದ ಯುನೈಟೆಡ್ ಸ್ಟೇಟ್ಸ್ವರೆಗೂ ಸಾಗಿಬಂದ ಕಾಡ್ಗಿಚ್ಚಿನ ಹೊಗೆ, ನ್ಯೂಯಾರ್ಕ್ನ ಆಗಸವನ್ನು ಕೆಂಪಾಗಿ ಪರಿವರ್ತಿಸಿತು. ಮಂಗಳ ಗ್ರಹವು ಅತಿ ಹೆಚ್ಚು ಕಬ್ಬಿಣ ಅಂಶದಿAದ ಕೂಡಿ ಕೆಂಪನೆ ಕಂಗೊಳಿಸುವ ರೀತಿ ನ್ಯೂಯಾರ್ಕ್ ಕಂಗೊಳಿಸುತ್ತಿತ್ತು. ನೋಡಲು ಸುಂದರವಾಗಿದ್ದರೂ ಗಾಳಿ ಸೇವನೆಯು ಅಪಾಯಕಾರಿ ಎಂದು ಘೋಷಿಸಿದ ಅಲ್ಲಿನ ಆಡಳಿತ ಸಾರ್ವಜನಿಕರು ಹೊರಬಾರದಂತೆ, ಬಂದಲ್ಲಿ ಮಾಸ್ಕ್ ಧರಿಸುವಂತೆ ಸೂಚಿಸಿತು.

ಗಾಳಿಯ ಗುಣಮಟ್ಟವನ್ನು ಏರ್ ಕ್ವಾಲಿಟಿ ಇಂಡೆಕ್ಸ್ (ಎ.ಕ್ಯೂ.ಐ) ಮೂಲಕ ತಿಳಿದುಕೊಳ್ಳಬಹುದಾಗಿದೆ. ಈ ಸಂಖ್ಯೆಯು ೧೦೦ರ ಕೆಳಗೆ ಇದ್ದರೆ, ಸಾಧಾರಣ ಹಾಗೂ ೫೦ರ ಕೆಳಗೆ ಇದ್ದರೆ ಉತ್ತಮ ಗುಣಮಟ್ಟದ ಗಾಳಿ ಇದೆ ಎಂದರ್ಥ. ನ್ಯೂಯಾರ್ಕ್ನ ಸಾಧಾರಣ ಎ.ಕ್ಯೂ.ಐ ೧೦೦ ರ ಕೆಳಗೆ ಇರುತ್ತದಾದರೂ ಕಳೆದ ಕೆಲ ದಿನಗಳಿಂದ ೧೦೩ಕ್ಕೇರಿದೆ. ಇದು ಅಪಾಯಕಾರಿ. ಉಳಿದಂತೆ ಯುನೈಟೆಡ್ ಸ್ಟೇಟ್ಸ್ನ ಉಳಿದ ರಾಜ್ಯಗಳಾದ ಫಿಲಡೆಲ್ಫಿಯಾ ೮೯, ಬಾಸ್ಟನ್ ೮೮, ವಾಷಿಂಗ್‌ಟನ್ ಡಿ.ಸಿ ೮೧, ಪ್ರಾವಿಡೆನ್ಸ್ ೭೮, ಬಫೆಲೋ ೭೧, ಬಾಲ್ಟಿಮೋರ್ ೭೦, ಅಟ್ಲಾಂಟಾದ ಎ.ಕ್ಯೂ.ಐ ೫೨ಕ್ಕೇರಿಕೆಯಾಗಿದೆ.

ಸೌರ ಶಕ್ತಿ ಉತ್ಪಾದನೆಗೆ ಧಕ್ಕೆ

ಕಾಡ್ಗಿಚ್ಚು ಹೊಗೆ ತೀವ್ರತೆ ಜೂನ್ ಮೊದಲನೆಯ ವಾರ ಎಷ್ಟರ ಮಟ್ಟಿಗೆ ಇತ್ತೆಂದರೆ, ಜೂನ್ ಮೊದಲನೆಯ ವಾರ ಯುನೈಟೆಡ್ ಸ್ಟೇಟ್ಸ್ನ ೬ ರಾಜ್ಯಗಳನ್ನು ಹೊಂದಿರುವ ನ್ಯೂ ಇಂಗ್‌ಲೆAಡ್ ಎಂಬ ಪ್ರದೇಶದಲ್ಲಿ ಉತ್ಪಾದನೆಯಾಗುವ ಸೌರ ಶಕ್ತಿಯ ಪ್ರಮಾಣವೇ ಕಡಿತಗೊಂಡಿತ್ತು. ಸೂರ್ಯನ ಕಿರಣಗಳು ಹೊಗೆಯನ್ನು ದಾಟಿ ಭೂಪದರಕ್ಕೆ ತಾಗದ ಕಾರಣ ಈ ಪ್ರದೇಶದಲ್ಲಿ ಶೇ.೫೬ರಷ್ಟು ಸೌರ ಶಕ್ತಿ ಉತ್ಪಾದನೆ ಕಡಿತಗೊಂಡಿತ್ತು. ಇದರೊಂದಿಗೆ ಕೆನಡಾದಲ್ಲಿ ಆಯಿಲ್ ಹಾಗೂ ಗ್ಯಾಸ್ ಇಂಧನ ಉತ್ಪಾದನಾ ಘಟಕಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಚ್ಚಲಾಗಿದೆ.

ಜಾಗತಿಕ ತಾಪಮಾನ ಏರಿಕೆ

ಕಾಡ್ಗಿಚ್ಚು ಪೀಡಿತ ಕೆನಡಾದಲ್ಲಿನ ಕಾಡ್ಗಿಚ್ಚು ಮಾನವ ನಿರ್ಮಿತ ಅಥವಾ ನೈಸರ್ಗಿಕ ಸಿಡಿಲು ಬಡಿತದಿಂದ ಪ್ರಾರಂಭವಾಯಿತೋ ಎಂಬ ಅಂಶವು ಇನ್ನೂ ತನಿಖೆಯಲ್ಲಿದೆ. ಆದರೆ, ಇತಿಹಾಸದಲ್ಲಿಯೇ ೪ ಲಕ್ಷ ಹೆಕ್ಟೇರ್‌ನಷ್ಟು ನಷ್ಟ ಸಂಭವಿಸಿರುವುದು ಇದೇ ಮೊದಲ ಬಾರಿಗೆ. ಈ ಬಾರಿ ದೇಶದಲ್ಲಿ ಅತಿ ಕಡಿಮೆ ಹಿಮಪಾತ ಹಾಗೂ ಮಳೆ ಸಂಭವಿಸಿದ್ದು, ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಲೇ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಇದರ ಪರಿಣಾಮ ಕಾಡಿನಲ್ಲಿನ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗುವುದಲ್ಲದೆ, ಮರಗಳು ಕೂಡ ಬೇಗನೆ ಒಣಗಿ ಬೆಂಕಿಗಾಹುತಿಯಾಗುತ್ತವೆ. ಕಾಡ್ಗಿಚ್ಚಿನ ಈಗಿನ ತೀವ್ರತೆಯನ್ನು ಗಮನಿಸಿದರೆ ಇನ್ನೂ ೧ ತಿಂಗಳು ಮುಂದುವರಿಯಬಹುದೆAದು ಅಂದಾಜಿಸ ಲಾಗಿದೆ. -ಪ್ರಜ್ವಲ್ ಜಿ. ಆರ್.