ಸೋಮವಾರಪೇಟೆ, ಜೂ. ೧೫: ಇಲ್ಲಿನ ನಾವು ಪ್ರತಿಷ್ಠಾನದ ವತಿಯಿಂದ ಆಯೋಜನೆಗೊಂಡಿದ್ದ ಹಕ್ಕಿಗೊಂದು ಗುಟುಕು ಅಭಿಯಾನದ ಸಮಾರೋಪ ಸಮಾರಂಭ ತಾ. ೧೭ ರಂದು (ನಾಳೆ) ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ತಿಳಿಸಿದ್ದಾರೆ.
ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಶಾಸಕ ಡಾ. ಮಂಥರ್ಗೌಡ, ಹಾಸನದ ಪಕ್ಷಿ ತಜ್ಞ ಬಿ.ಎಸ್. ದೇಸಾಯಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಬಿ.ವಿ. ಜಯಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಸಹಾಯಕ ಪ್ರಾಧ್ಯಾಪಕ ಸಂಜೀವ್ಕುಮಾರ್, ಪ್ರತಿಷ್ಠಾನದ ಸಹ ಸಂಸ್ಥಾಪಕಿ ಸುಮನ ಸೇರಿ ದಂತೆ ಇತರರು ಭಾಗಿಯಾ ಗಲಿದ್ದಾರೆ.
ಇದರೊಂದಿಗೆ ಮುಖ್ಯ ಅತಿಥಿಗಳಾಗಿ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಸರ್ಕಾರದ ಯೋಜನಾ ವಿಭಾಗದ ಮುಖ್ಯಸ್ಥ ಕೆ.ವಿ. ಮಹೇಶ್, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಉದ್ಯಮಿ ಅರುಣ್ ಕಾಳಪ್ಪ, ಮಲೆನಾಡು ಸಂಘದ ನಿರ್ದೇಶಕ ರಂಜನ್ ಗೌಡ, ಮುಖ್ಯ ಶಿಕ್ಷಕ ರಮೇಶ್, ಕಾವೇರಿ ಗ್ರಾಮೀಣ ಬ್ಯಾಂಕ್ನ ವ್ಯವಸ್ಥಾಪಕ ಎಂ.ಬಿ. ಪ್ರದೀಪ್ ಅವರುಗಳು ಪಾಲ್ಗೊಳ್ಳಲಿದ್ದಾರೆ.
ಬಿರು ಬೇಸಿಗೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಅವುಗಳ ಉಳಿವಿಗೆ ಕೈ ಜೋಡಿಸುವ ಪ್ರಯತ್ನವಾಗಿ ನಡೆಸಿದ ಹಕ್ಕಿಗೊಂದು ಗುಟುಕು ಅಭಿಯಾನದಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳಿಗೆ ಬಹುಮಾನ ವಿತರಣೆ, ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ, ಪಕ್ಷಿಗಳ ಪರಿಚಯ, ಬುಡಕಟ್ಟು ಮಕ್ಕಳ ಶಿಕ್ಷಣದ ಪ್ರೋತ್ಸಾಹಕ್ಕಾಗಿ ಪುರಸ್ಕಾರ, ಏಕಬಳಕೆ ಪ್ಲಾಸ್ಟಿಕ್ ಕುರಿತು ಜಾಗೃತಿ, ಹಳೆ ಆಟಗಳ ಪ್ರದರ್ಶನಗಳನ್ನು ಆಯೋಜಿಸ ಲಾಗಿದೆ ಎಂದು ಗೌತಮ್ ಮಾಹಿತಿ ನೀಡಿದ್ದಾರೆ.