ಚೆಟ್ಟಳ್ಳಿ, ಜೂ. ೧೪: ಸುಂಟಿಕೊಪ್ಪದ ಸೆಂಟ್ ಮೇರಿಸ್ ಶಾಲೆಯಿಂದ ವರ್ಗಾವಣೆಗೊಂಡ ವಿದ್ಯಾರ್ಥಿಯ ವರ್ಗಾವಣಾ ಪತ್ರದಲ್ಲಿ ತಪ್ಪಾಗಿ ನಮೂದಿಸಿದ ಪರಿಣಾಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಕಾರ್ಮಿಕ ಕುಟುಂಬ ಪರದಾಡುವ ಪರಿಸ್ಥಿತಿಯಾಗಿದೆ.
ಕುಶಾಲನಗರ ತಾಲೂಕು ಚೇರಳ ಶ್ರೀಮಂಗಲ ಗ್ರಾಮದ ಚಂದ್ರಶೇಖರ್ ಹಾಗೂ ಸರಸ್ವತಿ ಎಂಬ ಕಾರ್ಮಿಕ ದಂಪತಿ ಮಗ ಹರ್ಷಿತ್‌ಕುಮಾರ್. ಸಿ ಹಾಗೂ ಸುಶ್ಮಿತಾ. ಸಿ. ಸುಂಟಿಕೊಪ್ಪದ ಖಾಸಗಿ ಶಾಲೆಯಾದ ಸೆಂಟ್ ಮೇರಿಸ್‌ನಲ್ಲಿ ಎರಡು ಹಾಗೂ ನಾಲ್ಕನೇ ತರಗತಿಯ ಆಂಗ್ಲ ಮಾಧ್ಯಮದಲ್ಲಿ ಓದುತಿದ್ದು, ಆರ್ಥಿಕವಾಗಿ ತೊಂದರೆೆಯಾದರಿAದ ಚೆಟ್ಟಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಸೇರಿಸಲು ಪೋಷಕರು ತೀರ್ಮಾನಿಸಿದರು. ಜೂನ್ ೯ ರಂದು ವರ್ಗಾವಣೆ ಪತ್ರವನ್ನು ಪಡೆದು ಚೆಟ್ಟಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಸೇರಿಸಲು ತೆರಳಿದಾಗ ವರ್ಗಾವಣಾ ಪತ್ರದಲ್ಲಿ ಮಾಹಿತಿ ತಪ್ಪಾಗಿ ನಮೂದಿಸಿರುವುದರಿಂದ ದಾಖಲಾತಿಗೆ ಸಮಸ್ಯೆಯಾಗಿದೆ.
ದಾಖಲೆಯಲ್ಲಿ ಹಿಂದೂ ಧರ್ಮದ ಬದಲಾಗಿ ಜಾತಿ ಕಾಲಂನಲ್ಲಿ ಶಾಲಾ ಸಿಬ್ಬಂದಿಗಳು ಮುಸ್ಲಿಂ ಎಂದು ತಪ್ಪಾಗಿ ನಮೂದಿಸಿದ್ದಾರೆ. ಶಾಲೆಯ ದಾಖಲೆಯ ಸಮಯದಲ್ಲಿ ವರ್ಗಾವಣೆ ಪತ್ರವನ್ನು ಸರಿಪಡಿಸಿ ತರುವಂತೆ ಪೋಷಕರಿಗೆ ಹಿಂತಿರುಗಿಸಿದರು. ಸೆಂಟ್ ಮೇರಿಸ್ ಶಾಲೆಗೆ ತೆರಳಿದ ಪೋಷಕರು ಇಸ್ಲಾಂ/ಮುಸ್ಲಿA ಬದಲಾಗಿ ಹಿಂದೂವೆAದು ಸರಿಪಡಿಸಿದರೂ ವರ್ಗಾವಣೆ ಪತ್ರದಲ್ಲಿ ಪೋಷಕರ ಹೆಸರಿನ ಅಕ್ಷರದಲ್ಲಿ ಬದಲಾವಣೆ ಮಾಡಿದ್ದಾರೆ. ಈರ್ವರು ಮಕ್ಕಳ ಜಾತಿ ಕಾಲಂನಲ್ಲಿ ತಪ್ಪಾಗಿ ನಮೂದಿಸಿದ ಪರಿಣಾಮ ಶಾಲೆಯ ದಾಖಲಾತಿಗೆ ಸಮಸ್ಯೆಯಾಗಿದೆ. -ಕರುಣ್‌ಕಾಳಯ್ಯ