ಚೆಟ್ಟಳ್ಳಿ, ಜೂ. ೧೫: ಫ್ರೀಡಂ ಬಾಯ್ಸ್ ಹುಂಡಿ ಎಸ್.ಬಿ.ಸಿ. ವತಿಯಿಂದ ಸಿದ್ದಾಪುರದಲ್ಲಿ ಆಯೋಜಿಸಲಾದ ಪ್ರಥಮ ವರ್ಷದ ಕೊಡಗು ಮುಸ್ಲಿಂ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕುಶಾಲನಗರ ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.

೩೬ ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ಕುಶಾಲನಗರದ ರಫೀಕ್ - ಅಬು, ವೀರಾಜಪೇಟೆಯ ನವಾಫ್ - ಇರ್ಷಾದ್, ಹುಂಡಿಯ ರಿಯಾಜ್- ಮುಸ್ತಫಾ, ಗೋಣಿಕೊಪ್ಪ ಸಜೀರ್ - ಸಿಬಿಲ್ ಜೋಡಿ ಸೆಮಿಫೈನಲ್ ಪ್ರವೇಶಿಸಿತ್ತು.

ಕುಶಾಲನಗರ ಹಾಗೂ ವೀರಾಜಪೇಟೆ ನಡುವಿನ ಪ್ರಥಮ ಸೆಮಿಫೈನಲ್ ಪಂದ್ಯಾಟದಲ್ಲಿ ವೀರಾಜಪೇಟೆ ತಂಡವನ್ನು ಮಣಿಸಿ ಕುಶಾಲನಗರ ತಂಡ ಫೈನಲ್ ಪ್ರವೇಶಿಸಿತು. ಹುಂಡಿ ಹಾಗೂ ಗೋಣಿಕೊಪ್ಪ ತಂಡಗಳ ನಡುವಿನ ದ್ವಿತೀಯ ಸೆಮಿಫೈನಲ್ ಪಂದ್ಯಾಟದಲ್ಲಿ ಗೋಣಿಕೊಪ್ಪ ತಂಡವನ್ನು ಮಣಿಸಿ ಹುಂಡಿ ಜೋಡಿ ಫೈನಲ್ ಪ್ರವೇಶಿಸಿತು. ರೋಚಕ ಫೈನಲ್ ಪಂದ್ಯಾಟದಲ್ಲಿ ಹುಂಡಿ ಹಾಗೂ ಕುಶಾಲನಗರ ಮೊದಲ ಸುತ್ತಿನಲ್ಲಿ ಸಹೋದರ ಜೋಡಿಗಳಾದ ರಿಯಾಜ್ ಹಾಗೂ ಮುಸ್ತಫಾರವರ ಹುಂಡಿ ತಂಡ ತಮ್ಮದಾಗಿಸಿಕೊಂಡಾಗ, ಎರಡನೇ ಹಾಗೂ ಮೂರನೇ ಸುತ್ತು ರಫೀಕ್ - ಅಬು ಜೋಡಿ ಕುಶಾಲನಗರ ತಂಡ ತಮ್ಮದಾಗಿಸಿಕೊಂಡು ಪ್ರಥಮ ಕೊಡಗು ಮುಸ್ಲಿಂ ಬ್ಯಾಡ್ಮಿಂಟನ್ ಟೂರ್ನಮೆಂಟ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.