ನಾಪೋಕ್ಲು, ಜೂ. ೧೫: ಮಡಿಕೇರಿಯಿಂದ ಮೂರ್ನಾಡು-ಕುಂಬಳದಾಳು ಮೂಲಕ ನಾಪೋಕ್ಲುಗೆ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಮಂಗಳವಾರ ಆರಂಭಗೊAಡಿದ್ದು, ಮಹಿಳೆಯರು ಉಚಿತ ಪ್ರಯಾಣ ಮಾಡಿ ಸಂಭ್ರಮಿಸಿದರು.
ಮಡಿಕೇರಿಯಿAದ ಮಧ್ಯಾಹ್ನ ೧೨.೩೦ಕ್ಕೆ ಹೊರಡುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ೧.೧೫ಕ್ಕೆ ನಾಪೋಕ್ಲು ತಲುಪಲಿದ್ದು, ಅದೇ ರಸ್ತೆಯಲ್ಲಿ ಹಿಂದಿರುಗಲಿದೆ. ನೂತನವಾಗಿ ಆಯ್ಕೆಗೊಂಡ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರಿಗೆ ಕುಂಬಳಗಾಳು ಗ್ರಾಮಸ್ಥರು ಬಸ್ ಸಂಚಾರ ಕಲ್ಪಿಸಿ ಕೊಡುವಂತೆ ಮನವಿ ಸಲ್ಲಿಸಿದ್ದರು.
ಬಸ್ ಸಂಚಾರದ ಉದ್ಘಾಟನೆಯನ್ನು ಕುಂಬಳದಾಳು ಅಂಗನವಾಡಿ ಕೇಂದ್ರದ ಸಮೀಪ ನೆರವೇರಿಸಿ ಮಹಿಳೆಯರು ಸಂಭ್ರಮಿಸಿದರು. ಸಂಜೀವಿನಿ ಸ್ವಸಹಾಯ ಸಂಘದ ಮುಖ್ಯಸ್ಥೆ ವೀಣಾ ಕುಮಾರಿ, ಅಂಗನವಾಡಿ ಕಾರ್ಯಕರ್ತೆ ಅನುರಾವತಿ ಬಸ್ಗೆ ಹೂವಿನ ಮಾಲೆ ಹಾಕಿ ಆರತಿ ಎತ್ತಿ ಈಡುಗಾಯಿ ಒಡೆಯುವುದರ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕಡ್ಲೆರ ಟೈನಿ, ಚೌರೀರ ನವೀನ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.