ಸೋಮವಾರಪೇಟೆ, ಜೂ.೧೩: ಇಲ್ಲಿನ ನ್ಯಾಯಾಲಯಕ್ಕೆ ಜಿಲ್ಲಾ ನ್ಯಾಯಾಧೀಶರಾದ ಡಿ.ಟಿ. ಪುಟ್ಟ ರಂಗಸ್ವಾಮಿ ಅವರು ಭೇಟಿ ನೀಡಿ, ನ್ಯಾಯಾಧೀಶರು ಹಾಗೂ ವಕೀಲ ರೊಂದಿಗೆ ಸಭೆ ನಡೆಸಿದರು.

ಜುಲೈ ೮ರಂದು ಲೋಕ ಅದಾಲತ್ ನಡೆಯಲಿದ್ದು, ರಾಜಿ ಮೂಲಕ ಇತ್ಯರ್ಥಗೊಳ್ಳುವ ಪ್ರಕರಣಗಳಿದ್ದರೆ ನ್ಯಾಯಾಲಯದಲ್ಲಿ ರಾಜಿ ಸಂಧಾನ ಮಾಡುವ ಮೂಲಕ ಇತ್ಯರ್ಥಗೊಳಿಸಬೇಕು. ಆ ಮೂಲಕ ಲೋಕ ಅದಾಲತ್‌ನ್ನು ಯಶಸ್ವಿಗೊ ಳಿಸಬೇಕೆಂದು ತಿಳಿಸಿದರು.

ವಕೀಲರ ಸಂಘದ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸೋಮವಾರ ಪೇಟೆ ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್‌ಗೌಡ ಮಾತನಾಡಿ, ನ್ಯಾಯಾಲಯದ ಸಮುಚ್ಚಯ ದಲ್ಲಿರುವ ಮೂಲಭೂತ ಸೌಕರ್ಯ ಗಳ ಕೊರತೆಗಳ ಬಗ್ಗೆ ಜಿಲ್ಲಾ ನ್ಯಾಯಾಧೀಶರ ಗಮನ ಸೆಳೆದರು.

ನ್ಯಾಯಾಲಯದಲ್ಲಿ ಮಹಿಳಾ ನ್ಯಾಯಾಧೀಶರಿಗೆ ಪ್ರತ್ಯೇಕ ಶೌಚಾಲಯ, ಈಗಿರುವ ನ್ಯಾಯಾಲಯ ಕಟ್ಟಡ ಸಣ್ಣಪುಟ್ಟ ದುರಸ್ತಿ, ಇಂಟರ್‌ಲಾಕ್ ದುರಸ್ತಿ, ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಕರ್ಯಗಳ ಬಗ್ಗೆ ಗಮನ ಸೆಳೆಯಲಾಯಿತು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೋಕುಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ. ಪ್ರಸಾದ್, ವಕೀಲರ ಸಂಘದ ಉಪಾಧ್ಯಕ್ಷೆ ಹೆಚ್.ಆರ್. ಪವಿತ್ರ, ಕಾರ್ಯದರ್ಶಿ ಡಿ.ಎ. ಕೃಷ್ಣಕುಮಾರ್ ಸೇರಿದಂತೆ ವಕೀಲರುಗಳು ಉಪಸ್ಥಿತರಿದ್ದರು.