ಮನುಷ್ಯ ಅನ್ನ., ನೀರು., ಆಹಾರವಿಲ್ಲದೆ ಒಂದಷ್ಟು ದಿನಗಳ ಕಾಲ ಜೀವಿಸಬಲ್ಲ., ಆದರೆ., ಉಸಿರಾಡಲು ಗಾಳಿ ಇಲ್ಲದಿರೆ ಜೀವದಿಂದಿರಲು ಸಾಧ್ಯವೇ ಇಲ್ಲ., ಗಾಳಿಯ ಮಹತ್ವ-ಶಕ್ತಿ ಅಷ್ಟೊಂದು ಅಗಾಧವಾದುದು. ಅತ್ಯಂತ ಶಕ್ತಿ ಶಾಲಿಯಾದ ಶುದ್ಧವಾದ ಪವನ ಶಕ್ತಿಯನ್ನು ಜಗತ್ತಿಗೆ ತಿಳಿಯಪಡಿಸುವ ಸಲುವಾಗಿ., ಶುದ್ಧ ಇಂಧನವನ್ನು ಉತ್ತೇಜಿಸಲು ವರ್ಷಂಪ್ರತಿ ಜೂನ್ ೧೫ನ್ನು ವಿಶ್ವ ಪವನ ದಿನ-ವಿಶ್ವ ಗಾಳಿ ದಿನವೆಂದು ಆಚರಿಸಲಾಗುತ್ತಿದೆ.

ಶಕ್ತಿಯ ನವೀಕರಿಸಬಹುದಾದ ಮೂಲವಾಗಿ ಗಾಳಿಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಈ ದಿನಾಚರಣೆ ಹೊಂದಿದೆ. ‘ಗ್ಲೋಬಲ್ ವಿಂಡ್ ಡೇ’ ಎಂದು ಕರೆಯಲ್ಪಡುವ ಈ ದಿನ ಗಾಳಿ ಶಕ್ತಿಯ ನಿಜವಾದ ಶಕ್ತಿಯನ್ನು ಮತ್ತು ಶಕ್ತಿ ವ್ಯವಸ್ಥೆಗಳನ್ನು ಮರು ರೂಪಿಸಲು ಹೊಂದಿರುವ ಸಾಧ್ಯತೆಗಳನ್ನು ಕಂಡು ಹಿಡಿಯುವ ದಿನವಾಗಿದೆ.

ದಿನದ ಮಹತ್ವ

ವಿದ್ಯುತ್ ಉತ್ಪಾದನೆ ಸೇರಿದಂತೆ ಇನ್ನಿತರ ಆವಿಷ್ಕಾರಗಳಿಗೆ ಗಾಳಿ ಮತ್ತು ಅದರ ಶಕ್ತಿ, ಮಹತ್ವದ ಬಗ್ಗೆ ಜನರಿಗೆ, ವಿಶೇಷವಾಗಿ ಮಕ್ಕಳಿಗೆ ಶಿಕ್ಷಣ ನೀಡುವ ದಿನವಾಗಿದೆ. ಜಾಗತಿಕ ಹವಾಮಾನ ಬಿಕ್ಕಟ್ಟು ಆಳವಾಗುತ್ತಿದ್ದಂತೆ ಪವನಶಕ್ತಿಯ ಸರಿಯಾದ ಬಳಕೆ ಮಾಡಿ ಉದ್ಯೋಗದೊಂದಿಗೆ ಆರ್ಥಿಕತೆ ಬೆಳವಣಿಗೆಯನ್ನು ಹೆಚ್ಚಿಸಲು ಜಾಗತಿಕ ಗಾಳಿ ದಿನ ಸಹಾಯ ಮಾಡುತ್ತದೆ. ೨೦೦೭ರಲ್ಲಿ ಯುರೋಪಿಯನ್ ವಿಂಡ್ ಎನರ್ಜಿ ಅಸೋಸಿಯೇಶನ್ (ಇಡಬ್ಲೂö್ಯಇಎ) ಮೊದಲ ಬಾರಿಗೆ ವಿಂಡ್ ಡೇ ಆಯೋಜಿಸಿತ್ತು. ಆದರೆ, ೨೦೦೯ರಲ್ಲಿ ಇಡಬ್ಲೂö್ಯಇಎ ಗ್ಲೋಬಲ್ ವಿಂಡ್ ಎನರ್ಜಿ ಕೌನ್ಸಿಲ್ (ಜಿಡಬ್ಲೂö್ಯಇಸಿ)ನೊಂದಿಗೆ ಸೇರಿಕೊಂಡು ಅದನ್ನು ಜಾಗತಿಕ ಕಾರ್ಯಕ್ರಮ ವನ್ನಾಗಿ ಪರಿವರ್ತಿಸಲಾಯಿತು. ಗಾಳಿಯ ಶಕ್ತಿಯಿಂದ ಹೆಚ್ಚಿನದನ್ನು ಮಾಡಲು ಪ್ರಪಂಚದಾದ್ಯAತ ಜನರನ್ನು ಉತ್ತೇಜಿಸುವದು ಇದರ ಪ್ರಮುಖ ಗುರಿಯಾಗಿದೆ.

ಆಚರಣೆ ಹೇಗೆ..?

ಜಾಗತಿಕ ಗಾಳಿ ದಿನದಂದು ಯುರೋಪಿಯನ್ ವಿಂಡ್ ಎನರ್ಜಿ ಅಸೋಸಿಯೇಶನ್ ಮತ್ತು ಗ್ಲೋಬಲ್ ವಿಂಡ್ ಎನರ್ಜಿ ಕೌನ್ಸಿಲ್ ಮೂಲಕ ಗಾಳಿ ಶಕ್ತಿಯ ಪ್ರಚಾರ ಮಾಡುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಲ್ಲದೆ ಪವನ ಶಕ್ತಿ ಉತ್ಪಾದನೆಯಲ್ಲಿ ತೊಡಗಿರುವ ರಾಷ್ಟಿçÃಯ ಪವನ ಶಕ್ತಿ ಸಂಘಗಳು ಮತ್ತು ಕಂಪೆನಿಗಳು ಆಯಾ ದೇಶದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಮಾಹಿತಿ ಕಾರ್ಯಾಗಾರಗಳು, ಕಡಲ ತೀರದ ಮತ್ತು ಕಡಲಾಚೆಯ ಗಾಳಿ ಫಾರ್ಮ್ಗಳಿಗೆ ಭೇಟಿ ನೀಡುವದು, ಟರ್ಬೈನ್‌ಗಳ ಪ್ರದರ್ಶನ, ಗಾಳಿ ಕಾರ್ಯಾಗಾರ, ಗಾಳಿ ಮೆರವಣಿಗೆಗಳು., ಈ ರೀತಿಯಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದರೊಂದಿಗೆ ಗಾಳಿಗೆ ಸಂಬAಧಿಸಿದAತೆ ಫೋಟೋಗ್ರಫಿ ಪ್ರದರ್ಶನಗಳು, ಚಿತ್ರಕಲಾ ಸ್ಪರ್ಧೆಗಳು, ಗಾಳಿ ಪಟ ಹಾರಿಸುವ ಸ್ಪರ್ಧೆಗಳು ಸೇರಿದಂತೆ ವಿವಿಧ ರೀತಿಯ ಮನೋರಂಜನಾ ಚಟುವಟಿಕೆಗಳನ್ನು ಕೂಡ ಏರ್ಪಡಿಸಿ ಗಾಳಿಯ ಮಹತ್ವದ ಬಗ್ಗೆ ಪ್ರಚಾರ ಮಾಡಲಾಗುತ್ತದೆ.

ಗಾಳಿ ಯಂತ್ರ..

ವಿದ್ಯುತ್ ಉತ್ಪಾದನೆಯಲ್ಲಿ ಪವನ ಶಕ್ತಿ ವೇಗವಾಗಿ ಬೆಳೆಯುತ್ತಿರುವ ವಿಧಾನವಾಗಿದ್ದು, ಗಾಳಿ ಯಂತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಿ.ಪೂ. ೨೦೦೦ದಿಂದ ಗಾಳಿ ಯಂತ್ರಗಳು ಬಳಕೆಯಲ್ಲಿವೆ. ೧೯೪೦ರ ದಶಕದಲ್ಲಿ ಮೊದಲ ಆಧುನಿಕ ವಿಂಡ್ ಟರ್ಬೈನ್ ಅನ್ನು ಯುಎಸ್‌ಎ ಯ ವರ್ಮೊಂಟ್ನಲ್ಲಿ ನಿರ್ಮಿಸಲಾಯಿತು. ಯುಎಸ್‌ಎಯ ೧೧ ರಾಜ್ಯಗಳಲ್ಲಿ ಪವನ ಶಕ್ತಿಯು ಒಟ್ಟು ವಿದ್ಯುತ್ ಉತ್ಪಾದನೆಯ ಶೇ.೨೦ಕ್ಕಿಂತ ಹೆಚ್ಚಿನದನ್ನು ಒದಗಿಸುತ್ತದೆ. ೨೦ ಮಹಡಿಗಳ ಎತ್ತರವಿರುವ, ಫುಟ್ಬಾಲ್ ಮೈದಾನದ ಉದ್ದದ ಬ್ಲೇಡ್‌ಗಳನ್ನು ಹೊಂದಿರುವ ಅತಿದೊಡ್ಡ ಗಾಳಿ ಟರ್ಬೈನ್ ಯುಎಸ್‌ಎಯ ಹವಾಯಿಯಲ್ಲಿದೆ. ಜರ್ಮನ್ ಬೌತಶಾಸ್ತçಜ್ಞ ಆಲ್ಬರ್ಟ್ ಬೆಟ್ಜ್ ವಿಂಡ್ ಟರ್ಬೈನ್ ತಂತ್ರಜ್ಞಾನದ ಪ್ರವರ್ತಕ. ಗಾಳಿ ಯಂತ್ರಗಳು ಸರಳವಾಗಿ ಕಾಣಿಸಿದರೂ ಸುಮಾರು ೮ಸಾವಿರ ವಿವಿಧ ಭಾಗಗಳನ್ನು ಹೊಂದಿರುತ್ತದೆ.

? ಕುಡೆಕಲ್ ಸಂತೋಷ್