ಮಡಿಕೇರಿ, ಜೂ. ೧೩: ನೂತನ ಶಾಸಕ ಡಾ. ಮಂಥರ್‌ಗೌಡ ಅವರನ್ನು ಜಿಲ್ಲಾ ಪಂಚಾಯಿತಿ ಶಾಸಕರ ಕಚೇರಿಯಲ್ಲಿ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯ, ಪ್ರಧಾನ ಕಾರ್ಯದರ್ಶಿ ಪಿ.ಕೆ. ಶಶಿಕುಮಾರ್, ಉಪಾಧ್ಯಕ್ಷ ಟಿ.ಕೆ. ಸುಧೀರ್, ಖಜಾಂಚಿ ಕೆ. ಬಾಬು, ವಿನೂಪ್ ವೀರಾಜಪೇಟೆ, ಅಜೀಶ್ ಕುಮಾರ್, ಶಾಜು, ಉಣ್ಣಿಕೃಷ್ಣ, ಎಂ. ರಥಿಕೇಶನ್, ಟಿ.ಆರ್. ವಾಸುದೇವ್, ಕರ್ನಾಟಕ ರಾಜ್ಯ ಒಬಿಸಿ ಉಪಾಧ್ಯಕ್ಷ ಟಿ.ಕೆ. ಸಾಯಿಕುಮಾರ್, ಸಂತೋಷ್ ಕುಮಾರ್, ಸತೀಶ್, ಸೋಮವಾರಪೇಟೆ ಹಿಂದೂ ಮಲಯಾಳಿ ಸಮಾಜದ ಮಾಜಿ ಅಧ್ಯಕ್ಷರಾದ ಲೀಲಾದಾಸ್, ಸಂಘಟನಾ ಕಾರ್ಯದರ್ಶಿ ಸದಾನಂದ, ಗೋಣಿಕೊಪ್ಪಲಿನ ಶರತ್‌ಕಾಂತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನಿತಾ ಮಂಜುನಾಥ್, ಸುಂಟಿಕೊಪ್ಪ ಮಲಯಾಳಿ ಸಮಾಜದ ಸಂತೋಷ್ ಕುಮಾರ್ ಹಾಗೂ ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.