ಹೆಚ್.ಜೆ. ರಾಕೇಶ್
ಮಡಿಕೇರಿ, ಜೂ. ೧೩ : ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಮೂಲವಾಗಿರುವ ಜಿಲ್ಲಾ ಪಂಚಾಯಿತಿಯಲ್ಲಿ ಬರೋಬ್ಬರಿ ೯೩ ಹುದ್ದೆಗಳು ಖಾಲಿ ಇರುವ ಪರಿಣಾಮ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಕೆಲಸಗಳಿಗೆ ಹಿನ್ನಡೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆ ನೇಮಕಾತಿಗೆ ಸರಕಾರ ಕ್ರಮ ವಹಿಸಬೇಕಾಗಿದೆ.
ಕೊಡಗು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿನ ಜಿ.ಪಂ. ಸೇರಿದಂತೆ ಅನೇಕ ಸರಕಾರಿ ಕಚೇರಿಯಲ್ಲಿ ಸಾವiರ್ಥ್ಯಕ್ಕೆ ಅನುಗುಣವಾದ ಸಿಬ್ಬಂದಿಗಳಿಲ್ಲದೆ ಕೊರತೆ ಎದುರಾಗಿದೆ. ಇದರಿಂದ ಸಹಜವಾಗಿಯೇ ಅಭಿವೃದ್ಧಿ ಕೆಲಸ, ಆಡಳಿತಾತ್ಮಕ ಚಟುವಟಿಕೆಗಳಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತ್ತಿದೆ. ಹಲವು ವರ್ಷಗಳಿಂದ ಕೊಡಗಿನಲ್ಲಿ ಇದೇ ಪರಿಸ್ಥಿತಿ ಏರ್ಪಟ್ಟಿದೆ. ಕೆಲವು ಹುದ್ದೆಗಳ ಸಂಖ್ಯೆ ಕಡಿಮೆ ಇದ್ದರೆ ಹಲವು ಹುದ್ದೆಗಳಲ್ಲಿ ಸಿಬ್ಬಂದಿಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಭೌಗೋಳಿಕ ಹಾಗೂ ವಾತಾವರಣದಲ್ಲಿ ಭಿನ್ನ ಜಿಲ್ಲೆ ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ ಅಧಿಕಾರಿಗಳು ವರ್ಗಾವಣೆ ಬಯಸುತ್ತಾರೆ ಎಂಬ ಅಪವಾದ ಮೊದಲಿನಿಂದಲೇ ಇದೆ. ಇದಕ್ಕೆ ಹಲವು ಕಚೇರಿಗಳಲ್ಲಿರುವ ಪ್ರಭಾರ ಅಧಿಕಾರಿಗಳು ನಿದರ್ಶನವಾಗಿದ್ದಾರೆ. ಜೊತೆಗೆ ಒಬ್ಬ ಅಧಿಕಾರಿ ಒಂದಕ್ಕಿAತ ಹೆಚ್ಚಿನ ಹುದ್ದೆಗಳನ್ನು ನಿರ್ವಹಿಸಬೇಕಾದ ಸ್ಥಿತಿಯೂ ಇದೆ. ಇವೆಲ್ಲ ಕಾರಣದಿಂದ ಸಾರ್ವಜನಿಕ ಕೆಲಸಗಳು ವಿಳಂಬವಾಗುತ್ತಿದೆ ಎಂಬುದು ಜನರ ದೂರಾಗಿದೆ.
ಸ್ಥಳೀಯವಾಗಿ ಜಿ.ಪಂ.ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಉದ್ಯೋಗ ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಸರಕಾರದಿಂದ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ ಹುದ್ದೆಗಳು ಭರ್ತಿಯಾಗುತ್ತಿಲ್ಲ. ಜೊತೆಗೆ ಹೊರಗುತ್ತಿಗೆ ಅಡಿ ನೇಮಕಾತಿ ಮಾಡಿಕೊಳ್ಳಲು ಕಂಪೆನಿಗಳು ಟೆಂಡರ್ ಪಡೆಯಬೇಕಾಗಿದೆ. ಇದಕ್ಕೆ ಜಿ.ಪಂ. ಟೆಂಡರ್ ಆಹ್ವಾನಿಸಬೇಕು. ಅಧಿಕಾರಿಗಳು ಈ ಬಗ್ಗೆ ಹಲವು ಬಾರಿ ಸರಕಾರದ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗದ ಕಾರಣಕ್ಕೆ ಸಿಬ್ಬಂದಿ ಕೊರತೆ ಸರಿದೂಗಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.
ಶೂನ್ಯ ಸಿಬ್ಬಂದಿಗಳು
ಜಿ.ಪA.ಗೆ ೧೧೧ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ ಕೇವಲ ೧೮ ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದ ೯೩ ಹುದ್ದೆಗಳು ಖಾಲಿ ಇವೆ. ಮಂಜೂರಾದ ಬಹುತೇಕ ಹುದ್ದೆಗಳಲ್ಲಿ ಶೂನ್ಯ ಸಿಬ್ಬಂದಿಗಳಿದ್ದು ಭರ್ತಿಯಾಗದೆ ಹಾಗೆ ಉಳಿದುಕೊಂಡಿವೆ.
ಮುಖ್ಯ ಲೆಕ್ಕಾಧಿಕಾರಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಸಹಾಯಕ ಯೋಜನಾಧಿಕಾರಿ (ವೃಂದ ೨), ಯೋಜನಾ ಅಭಿಯಂತರರು, ಬೈಂಡರ್, (ಮೊದಲ ಪುಟದಿಂದ) ರೆಕಾರ್ಡ್ ಕೀಪರ್ ಕೆಲಸಕ್ಕೆ ತಲಾ ಒಂದೊAದು ಹುದ್ದೆ ಮಂಜೂರಾಗಿದ್ದು ಇವೆಲ್ಲ ಖಾಲಿಯೇ ಇವೆ.
ಉಳಿದಂತೆ ಸಹಾಯಕ ಕಾರ್ಯದರ್ಶಿ ಹುದ್ದೆಗೆ ೨, ತಾಲೂಕು ಯೋಜನಾಧಿಕಾರಿ ಹುದ್ದೆಗೆ ೨, ಲೆಕ್ಕಾಧೀಕ್ಷಕ ಹುದ್ದೆಗೆ ೫, ಶೀಘ್ರ ಲಿಪಿಗಾರರು ಹುದ್ದೆಗೆ ೯, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹುದ್ದೆಗೆ ೪, ಬೆರಳಚ್ಚುಗಾರರು ಹುದ್ದೆಗೆ ೪, ವಾಹನ ಚಾಲಕ ಕೆಲಸಕ್ಕೆ ೪ ಹುದ್ದೆಗಳು ಮಂಜೂರಾದರೂ ಭರ್ತಿಯಾಗದೆ ಶೂನ್ಯ ಸಿಬ್ಬಂದಿಗಳಿದ್ದಾರೆ.
ಹಲವು ಹುದ್ದೆಗಳು ಖಾಲಿ
ಜಿಲ್ಲಾ ಪಂಚಾಯಿತಿಯಲ್ಲಿ ಶೂನ್ಯವಲ್ಲದೆ ಮಂಜೂರಾದಷ್ಟು ಹುದ್ದೆಗಳ ಪೈಕಿ ಕೆಲವಷ್ಟು ಸಿಬ್ಬಂದಿಗಳು ನೇಮಕಾತಿಗೊಂಡು ಬಾಕಿ ಹುದ್ದೆಗಳು ಖಾಲಿ ಇವೆ.
ಯೋಜನಾ ಸಹಾಯಕರು (ಸಾಂಖಿಕ್ಯ) ಹುದ್ದೆಗೆ ಮಂಜೂರಾಗಿದ್ದ ೨ ಹುದ್ದೆಗಳ ಪೈಕಿ ೧, ೪ ಅಧೀಕ್ಷಕ ಹುದ್ದೆಗಳ ಪೈಕಿ ೨, ೧೧ ಪ್ರಥಮ ದರ್ಜೆ ಸಹಾಯಕರ ಪೈಕಿ ೨, ೧೭ ಡಿ ದರ್ಜೆ ನೌಕರರ ಪೈಕಿ ೩ ಹುದ್ದೆಗಳಷ್ಟೆ ತುಂಬಿವೆ.