ಶ್ರೀಮಂಗಲ, ಜೂ. ೧೩: ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ವತಿಯಿಂದ ವೀರಾಜಪೇಟೆ ಕ್ಷೇತ್ರ ನೂತನ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಐನಂಡ ಮಂದಣ್ಣ, ಕಾರ್ಯದರ್ಶಿ ಪೆಮ್ಮಂಡ ಪ್ರಸಾದ್, ನಿರ್ದೇಶಕರಾದ ಅಜ್ಜಿಕುಟ್ಟಿರ ಮುತ್ತಪ್ಪ, ಮಾಚಂಗಡ ಮುತ್ತಣಿ ಮತ್ತಿತರರು ಹಾಜರಿದ್ದರು.