ಮಡಿಕೇರಿ, ಜೂ. ೧೪: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ (ಕೆಐಸಿಎಂ) ಮಡಿಕೇರಿ ಇಲ್ಲಿ “ಡಿಪ್ಲೊಮಾ ಇನ್‌ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್” (ಡಿಸಿಎಂ) ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್.ಎಸ್.ಎಲ್.ಸಿ./ ಪಿಯುಸಿ/ ಪದವಿ/ ಸ್ನಾತಕೋತ್ತರ ಪದವಿ ಪಡೆದಿರಬೇಕು. ತರಬೇತಿ ಅವಧಿ ೬ ತಿಂಗಳು. ವಸತಿ ವ್ಯವಸ್ಥೆ ಉಚಿತ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮಾಹೆಯಾನ ರೂ. ೬೦೦ ಹಾಗೂ ಇತರ ಎಲ್ಲಾ ಅಭ್ಯರ್ಥಿಗಳಿಗೆ ರೂ. ೫೦೦ ರಂತೆ ಶಿಷ್ಯವೇತನ ನೀಡಲಾಗುವುದು. ಸಹಕಾರ ಸಂಘ/ ಸಂಸ್ಥೆಗಳ ಅಧಿಕಾರಿ/ ಸಿಬ್ಬಂದಿಗಳಿಗೆ ದೂರಶಿಕ್ಷಣ ಡಿಸಿಎಂ ತರಬೇತಿ ಆನ್‌ಲೈನ್ ಪ್ರವೇಶಾತಿಗೆ ತಿತಿತಿ.ಞsಛಿಜಿಜಛಿm.ಛಿo.iಟಿ ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗೆ ದೂ. ೯೬೬೩೧೫೩೯೨೨, ೭೨೫೯೭೨೯೧೦೪, ೯೬೧೧೭೭೮೩೯೯, ೯೮೪೫೮೦೫೧೮೬, ೮೭೬೨೧೧೦೯೫೨, ಮತ್ತು ೮೭೬೨೯೨೫೮೬೨, ೮೭೯೨೬೨೮೪೩೭, ೯೮೪೫೩೧೮೩೬೪ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಇನ್ಸಿ÷್ಟಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲೆ ಆರ್.ಎಸ್. ರೇಣುಕಾ ತಿಳಿಸಿದ್ದಾರೆ.