ಮುಳ್ಳೂರು, ಜೂ. ೧೪: ದುಂಡಳ್ಳಿ ಗ್ರಾ.ಪಂ. ಮತ್ತು ದುಂಡಳ್ಳಿ ಪಿಹೆಚ್‌ಸಿ ವತಿಯಿಂದ ರಾಜೀವ್‌ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ಒಳಪಟ್ಟಿರುವ ಕಾರ್ಮಿಕರಿಗೆ ಸೋಮವಾರ ದುಂಡಳ್ಳಿ ಗ್ರಾ.ಪಂ. ಡಿಜಿಟಲ್ ಗ್ರಂಥಾಲಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಕಿರಣ್ ಶಿಬಿರವನ್ನು ಉದ್ಘಾಟಿಸಿದರು. ಕಾರ್ಮಿಕರು ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಿಡಿಓ ರಾಜೇಂದ್ರ, ಸದಸ್ಯರಾದ ಎಸ್.ಪಿ.ಭಾಗ್ಯ, ದೇವರಾಜ್, ಭವಾನಿ, ಜಾನಕಿ, ಸಮುದಾಯ ಆರೋಗ್ಯ ಅಧಿಕಾರಿ ನಂದೀಶ್, ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ.ದಿವ್ಯ, ಗ್ರಾ.ಪಂ. ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಹಾಜರಿದ್ದರು. ದುಂಡಳ್ಳಿ ಸಮೂದಾಯ ಆರೋಗ್ಯ ಅಧಿಕಾರಿ ನಂದೀಶ್ ಮತ್ತು ಸಿಬ್ಬಂದಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು.