ಕುಶಾಲನಗರ, ಜೂ. ೧೩: ಅತ್ಯಂತ ಪ್ರಮುಖ ಕಲೆಗಳಲ್ಲಿ ಒಂದಾದ ಯಕ್ಷಗಾನ ಕಲೆಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹದ ಅಗತ್ಯ ಇದೆ ಎಂದು ಉಡುಪಿಯ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದ ರಾಘವೇಂದ್ರ ಆಚಾರ್ಯ ಜನ್ಸಾಲೆ ಅಭಿಪ್ರಾಯಪಟ್ಟಿದ್ದಾರೆ.
ಕುಶಾಲನಗರದ ಮಿತ್ರ ಮಂಡಳಿ ಆಶ್ರಯದಲ್ಲಿ ನಡೆದ ಕವಿರತ್ನ ಕಾಳಿದಾಸ ಮತ್ತು ಹರಿಭಕ್ತ ಚಂದ್ರಹಾಸ ಎಂಬ ಯಕ್ಷಗಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಕ್ಷಗಾನ ಎನ್ನುವುದು ಕೇವಲ ಕರಾವಳಿ ಮತ್ತು ಕಾಸರಗೋಡು ಭಾಗಕ್ಕೆ ಸೀಮಿತವಾಗಿತ್ತು. ಇತ್ತೀಚೆಗೆ ಅದು ಬೇರೆ ಬೇರೆ ಕಡೆಗಳಲ್ಲೂ ಪ್ರದರ್ಶನ ಕಾಣುತ್ತಿರುವುದು ಸಂತೋಷದ ವಿಷಯ. ಕೊಡಗು ಜಿಲ್ಲೆಯಲ್ಲಿ ಕಲೆಯನ್ನು ಪ್ರೋತ್ಸಾಹಿಸುವ ಕಲೆಗಾರರಿದ್ದರೂ, ಅವರುಗಳನ್ನು ಸಂಘಟಿಸಿ ಒಂದು ಸೂರಿನೆಡೆಗೆ ತರುವವರ ಕೊರತೆ ಕಾಣುತ್ತಿದೆ. ಇದರ ನಡುವೆ ಕುಶಾಲನಗರದ ಮಿತ್ರ ಮಂಡಳಿ ಅದ್ಭುತವಾಗಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಪ್ರದರ್ಶನವನ್ನು ಆಯೋಜಿಸುವ ಮೂಲಕ ಕಲಾವಿ ದರನ್ನು ಕಲೆಯನ್ನು ಉಳಿಸಿ ಬೆಳೆಸಲು ಸಹಕರಿಸಿ ಎಂದು ಕರೆ ನೀಡಿದರು. ಮಿತ್ರ ವೃಂದ ಅಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿ, ಸ್ಥಳೀಯ ದಾನಿಗಳ ಸಹಕಾರವನ್ನು ಶ್ಲಾಘಿಸಿದರು.
ಉಡುಪಿಯ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದ ಪ್ರಧಾನ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ, ಕಲಾವಿದ ದಂಡಿನಮನೆ ಶ್ರೀಪಾದ ಭಟ್, ಸ್ತಿçà ವೇಷಧಾರಿ ಸುಬ್ರಮಣ್ಯ ಯಲಗೋಪ್ಪ, ಹಾಸ್ಯ ಕಲಾವಿದ ರವೀಂದ್ರ ದೇವಾಡಿಗ ಕಮಲಶಿಲೆ, ಅರ್ಚಕ ಹಾಗೂ ಯಕ್ಷಗಾನ ಕಲಾವಿದ ಕೃಷ್ಣಮೂರ್ತಿ ಭಟ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪೆರ್ಡುರು ಮೇಳದ ವ್ಯವಸ್ಥಾಪಕ ಸುಬ್ರಮಣ್ಯ ಶಾಸ್ತಿç್ತ, ಜನ್ಸಾಲೆ ಪ್ರತಿಷ್ಠಾನದ ಸುನೀಲ್ ಭಂಡಾರಿ ಕಡತೋಕಾ, ಅಕ್ಷಯ್ ಆಚಾರ್ಯ ಬಿದ್ದಲ್ ಕಟ್ಟೆ, ಕುಮಾರ್ ಅಮೀನ್, ಪ್ರಜ್ವಲ್ ಮುಂಡಾಡಿ, ಮಿತ್ರವೃಂದದ ಕಾರ್ಯದರ್ಶಿ ಗಿರೀಶ್ ಭಟ್, ಎಂ.ವಿ. ನಾರಾಯಣ, ಚಿತ್ರ ರಮೇಶ್, ನವೀನ್ ಭಟ್ ಇತರರು ಹಾಜರಿದ್ದರು.