ಮಡಿಕೇರಿ, ಜೂ. ೧೩: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆ ಮಡಿಕೇರಿ ತಾಲೂಕಿನ ಅರೆಕಾಡು ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮಹಿಳೆಯರು ಸಿಹಿ ಹಂಚುವುದರ ಮೂಲಕ ಸ್ವಾಗತಿಸಿ ಸಂಭ್ರಮಿಸಿದರು.

ಅರೆಕಾಡು ಗ್ರಾಮಕ್ಕೆ ಬಂದ ಕೆಎಸ್‌ಆರ್‌ಟಿಸಿ ಬಸ್ಸನ್ನು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಿAದ ಬರಮಾಡಿಕೊಂಡು ಉಚಿತ ಪ್ರಯಾಣ ಬೆಳೆಸಿದ ಮಹಿಳೆಯರಿಗೆ ಸಿಹಿ ಹಂಚಿದರು.

ಗ್ರಾಮದ ಮಹಿಳೆ ಶಿವರಂಜಿನಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಚ್ಚು ಸರ್ಕಾರಿ ಬಸ್ ಸಂಚಾರ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

ವಲಯ ಕಾಂಗ್ರೆಸ್ ಅಧ್ಯಕ್ಷ ಸದಾ ಡೆನ್ನಿಸ್ ಮಾತನಾಡಿ, ಸರ್ಕಾರ ನುಡಿದಂತೆ ನಡೆದುಕೊಂಡು ಮೊದಲನೇ ಹಂತದ ಶಕ್ತಿ ಯೋಜನೆಯನ್ನು ಜಾರಿಗೊಳಿಸಿ ಮಹಿಳೆಯರಿಗೆ ಅನುಕೂಲವಾಗುವ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಹಿನ್ನೆಲೆ ಗ್ರಾಮೀಣ ಭಾಗದ ಮಹಿಳೆಯರಿಗೂ ಅನುಕೂಲವಾಗಿದೆ.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯೂಸುಫ್ ಅಲಿ, ಪ್ರಮುಖರಾದ ಜಯಣ್ಣ, ಗುರುರಾಜ್, ಪ್ರಕಾಶ್, ಇಸ್ಮಾಯಿಲ್, ಸಲೀಮ್, ಶೌಕತ್, ಉಸ್ಮಾನ್, ಷಂಶುದ್ದೀನ್, ಇಬ್ರಾಹಿಂ, ಅಲಿ, ರುಕ್ಮಿಣಿ, ಸಪೂರ, ಬೇಬಿ ಸೇರಿದಂತೆ ಮಹಿಳೆಯರು ಕಾರ್ಯಕರ್ತರು ಹಾಜರಿದ್ದರು.