ಮಡಿಕೇರಿ, ಜೂ. ೧೩: ನಗರದ ಚೌಡೇಶ್ವರಿ ಗೌಡ ಕೂಟ ಮತ್ತು ಮಣಿಪಾಲ್ ಆಸ್ಪತ್ರೆ ಮೈಸೂರು ಇವರ ಸಹಭಾಗಿತ್ವದಲ್ಲಿ ತಾ.೧೦ರಂದು ಮಡಿಕೇರಿಯ ಮೇಲಿನ ಗೌಡ ಸಮಾಜದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆಯನ್ನು ಕೂಟದ ಅಧ್ಯಕ್ಷ ಪೂಜಾರೀರ ಜಗದೀಶ್ ಅವರು ಉದ್ಘಾಟಿಸಿದರು.
ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಎತ್ತರ, ತೂಕ, ಇಸಿಜಿ ತಪಾಸಣೆ, ಬಗ್ಗೆ ಹೃದಯ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಯಿತು. ಹಿರಿಯರಾದ ಚೆರಿಯಮನೆ ತಿಮ್ಮಯ್ಯ ಹಾಗೂ ಕೂಟದ ಕಾರ್ಯದರ್ಶಿ ನಿಡ್ಯಮಲೆ ಆನಂದ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.