ಸಿದ್ದಾಪುರ, ಜೂ. ೧೪: ಅಮ್ಮತ್ತಿ ಗ್ರಾ.ಪಂ. ವ್ಯಾಪ್ತಿಯ ನರೇಗ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಆರೋಗ್ಯ ಅಮೃತ ಅಭಿಯಾನದ ಅಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಇಂಜಲಗರೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಗ್ರಾಮದ ನರೇಗ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಜಾನು, ಉಪಾಧ್ಯಕೆÀ್ಷ ಶಾಂತ, ಪಿ.ಡಿ.ಓ ಮೇದಪ್ಪ, ಪುಲಿಯೇರಿ ಸಮುದಾಯ ಆರೋಗ್ಯ ಅಧಿಕಾರಿ ಸಂಜಯ್, ಅಮ್ಮತ್ತಿ ಆರೋಗ್ಯ ಅಧಿಕಾರಿ ಆದರ್ಶ್, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶೋಭಾ ಟಿ.ಕೆ, ಆಶಾ ಕಾರ್ಯಕರ್ತರಾದ ಪದ್ಮಿನಿ, ಜಗದಿ, ಅಂಗನವಾಡಿ ಕಾರ್ಯಕರ್ತರಾದ ಸಜಿನಿ, ಜಾಸ್ಮಿನ್, ವತ್ಸಲ, ಶಾಲಾ ಮುಖ್ಯ ಶಿಕ್ಷಕಿ ಲತ ಇದ್ದರು.