ಸುಂಟಿಕೊಪ್ಪ, ಜೂ. ೧೨: ಪ್ರತಿಯೊಬ್ಬ ಮಕ್ಕಳಲ್ಲೂ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಪತ್ತೆ ಹಚ್ಚಿ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ತನ್ನ ದಿಕ್ಕಿನಲ್ಲಿ ಶಿಕ್ಷಣ ನೀಡಿದರೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆದುಕೊಳ್ಳಬಹುದು ಎಂದು ಸಮಾಜ ಸೇವಕರು ದಾನಿಗಳಾದ ಹರಪಳ್ಳಿ ರವೀಂದ್ರ ಹೇಳಿದರು.

ಸುಂಟಿಕೊಪ್ಪ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಹೋಬಳಿಯ ಮಾದಾಪುರ, ಗರಗಂದೂರು, ಸುಂಟಿಕೊಪ್ಪ, ಚೆಟ್ಟಳ್ಳಿ, ಪೊನ್ನತ್‌ಮೊಟ್ಟೆ, ಕೆದಕಲ್, ಹೊಸಕೋಟೆ, ನಾಕೂರು ಶಿರಂಗಾಲ, ಕಲ್ಲೂರು, ಹೆರೂರು, ಕೊಡಗರಹಳ್ಳಿ, ಕಂಬಿಬಾಣೆ ವಿಭಾಗದ ಸರಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜಿನ ೧೦೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರೇ ಐಎಎಸ್, ಐಪಿಎಸ್ ತೇರ್ಗಡೆಯಾಗಿ ಸರಕಾರಿ ಸೇವೆ ಸಲ್ಲಿಸಿದ್ದಾರೆ. ಇಂದಿನ ವಿದ್ಯಾರ್ಥಿಗಳಲ್ಲಿ ಆಗಾದ ಪ್ರತಿಭೆಯಿದೆ. ಅದನ್ನು ಗುರುತಿಸಿ ಅವರಿಗೆ ಅಭಿರುಚಿಗೆ ತಕ್ಕ ಶಿಕ್ಷಣ ನೀಡಿದರೆ ಸಮಾಜದ ಆಸ್ತಿಯಾಗಲಿ ದ್ದಾರೆ. ಇದರಲ್ಲಿ ಶಿಕ್ಷಕರ ಪೋಷಕರ ಪಾತ್ರ ಮಹತ್ವದಾಗಿದ್ದು, ವಿದ್ಯಾರ್ಥಿ ಗಳು ಕಲಿಕೆಯಲ್ಲಿ ಏಕಾಗ್ರತೆ ಕಠಿಣ ಪರಿಶ್ರಮ ರೂಡಿಸಿಕೊಳ್ಳಬೇಕು. ಹಾಗಾದರೆ ಐಎಎಸ್, ಐಪಿಎಸ್, ಸೈನಿಕ ಅಧಿಕಾರಿ ಹುದ್ದೆಗೆ ಏರುವುದ ರಲ್ಲಿ ಸಂದೇಹವಿಲ್ಲ ಎಂದರು.

ಸೋಮವಾರಪೇಟೆ ತಾಲೂಕು ಹರಪಳ್ಳಿ ರವೀಂದ್ರ ಅಭಿಮಾನಿ ಸಂಘದ ಅಧ್ಯಕ್ಷ ಹೆಚ್.ಎ.ನಾಗರಾಜು ಮಾತನಾಡಿದರು.

೧೦೦೦ಕ್ಕೂ ಅಧಿಕ ವಿದ್ಯಾರ್ಥಿ ಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಶಿವಮ್ಮ, ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರುಗಳಾದ ಆಲಿಕುಟ್ಟಿ, ಶಬ್ಬೀರ್, ಖಾಸಿಂ, ರಫಿಕ್‌ಖಾನ್, ಪಂಚಾಯಿತಿ ಸದಸ್ಯೆ ವನಿತಾ, ಕೊಡಗು ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮ ಶೇಖರ್ ಉಪಸ್ಥಿತರಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಸುಂಟಿಕೊಪ್ಪ, ಜೂ. ೧೨: ಪ್ರತಿಯೊಬ್ಬ ಮಕ್ಕಳಲ್ಲೂ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಪತ್ತೆ ಹಚ್ಚಿ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ತನ್ನ ದಿಕ್ಕಿನಲ್ಲಿ ಶಿಕ್ಷಣ ನೀಡಿದರೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆದುಕೊಳ್ಳಬಹುದು ಎಂದು ಸಮಾಜ ಸೇವಕರು ದಾನಿಗಳಾದ ಹರಪಳ್ಳಿ ರವೀಂದ್ರ ಹೇಳಿದರು.

ಸುಂಟಿಕೊಪ್ಪ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಹೋಬಳಿಯ ಮಾದಾಪುರ, ಗರಗಂದೂರು, ಸುಂಟಿಕೊಪ್ಪ, ಚೆಟ್ಟಳ್ಳಿ, ಪೊನ್ನತ್‌ಮೊಟ್ಟೆ, ಕೆದಕಲ್, ಹೊಸಕೋಟೆ, ನಾಕೂರು ಶಿರಂಗಾಲ, ಕಲ್ಲೂರು, ಹೆರೂರು, ಕೊಡಗರಹಳ್ಳಿ, ಕಂಬಿಬಾಣೆ ವಿಭಾಗದ ಸರಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜಿನ ೧೦೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರೇ ಐಎಎಸ್, ಐಪಿಎಸ್ ತೇರ್ಗಡೆಯಾಗಿ ಸರಕಾರಿ ಸೇವೆ ಸಲ್ಲಿಸಿದ್ದಾರೆ. ಇಂದಿನ ವಿದ್ಯಾರ್ಥಿಗಳಲ್ಲಿ ಆಗಾದ ಪ್ರತಿಭೆಯಿದೆ. ಅದನ್ನು ಗುರುತಿಸಿ ಅವರಿಗೆ ಅಭಿರುಚಿಗೆ ತಕ್ಕ ಶಿಕ್ಷಣ ನೀಡಿದರೆ ಸಮಾಜದ ಆಸ್ತಿಯಾಗಲಿ ದ್ದಾರೆ. ಇದರಲ್ಲಿ ಶಿಕ್ಷಕರ ಪೋಷಕರ ಪಾತ್ರ ಮಹತ್ವದಾಗಿದ್ದು, ವಿದ್ಯಾರ್ಥಿ ಗಳು ಕಲಿಕೆಯಲ್ಲಿ ಏಕಾಗ್ರತೆ ಕಠಿಣ ಪರಿಶ್ರಮ ರೂಡಿಸಿಕೊಳ್ಳಬೇಕು. ಹಾಗಾದರೆ ಐಎಎಸ್, ಐಪಿಎಸ್, ಸೈನಿಕ ಅಧಿಕಾರಿ ಹುದ್ದೆಗೆ ಏರುವುದ ರಲ್ಲಿ ಸಂದೇಹವಿಲ್ಲ ಎಂದರು.

ಸೋಮವಾರಪೇಟೆ ತಾಲೂಕು ಹರಪಳ್ಳಿ ರವೀಂದ್ರ ಅಭಿಮಾನಿ ಸಂಘದ ಅಧ್ಯಕ್ಷ ಹೆಚ್.ಎ.ನಾಗರಾಜು ಮಾತನಾಡಿದರು.

೧೦೦೦ಕ್ಕೂ ಅಧಿಕ ವಿದ್ಯಾರ್ಥಿ ಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಶಿವಮ್ಮ, ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರುಗಳಾದ ಆಲಿಕುಟ್ಟಿ, ಶಬ್ಬೀರ್, ಖಾಸಿಂ, ರಫಿಕ್‌ಖಾನ್, ಪಂಚಾಯಿತಿ ಸದಸ್ಯೆ ವನಿತಾ, ಕೊಡಗು ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮ ಶೇಖರ್ ಉಪಸ್ಥಿತರಿದ್ದರು.