ಚೆಯ್ಯಂಡಾಣೆ, ಜೂ. ೧೨: ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಹಾಗೂ ಕಡಂಗ, ಅರಪಟ್ಟು ಗ್ರಾಮದ ಪಕ್ಷದ ಪ್ರಮುಖರಾದ ನಂಬಿಯಪAಡ ಎ. ಮಣಿ ಅಯ್ಯಮ್ಮ ಅವರ ನೇತೃತ್ವದಲ್ಲಿ ವೀರಾಜಪೇಟೆ ವಿಧಾನಸಭಾ ಶಾಸಕರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಎಂ.ಯು. ಮುಹಮ್ಮದ್ ಕಡಂಗ, ಕೊಳಕೇರಿ ಬೂತ್ ಅಧ್ಯಕ್ಷ ಮಚ್ಚಂಡ ರಂಜು ಚಂಗಪ್ಪ, ಪಕ್ಷದ ಪ್ರಮುಖರಾದ ಕೋಡಿರ ಡಾಲಿ ಸುಬ್ರಮಣಿ, ವೈ.ಎಂ. ಮುಹಮ್ಮದ್ ಎಡಪಾಲ, ಶಾಸಕರ ಸಹೋದರ ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ ಹಾಗೂ ಮಚ್ಚಂಡ ಮಂಜು ಕೋಕೇರಿ ಮತ್ತಿತರರು ಉಪಸ್ಥಿತರಿದ್ದರು.