ಕರಿಕೆ, ಜೂ. ೧೨: ಪಚ್ಚೆಪಿಲಾವ್ ಅಂಗನವಾಡಿ ಕೇಂದ್ರದ ಕಟ್ಟಡದ ಮೇಲೆ ಕಳೆದ ರಾತ್ರಿ ರಬ್ಬರ್ ಮರವೊಂದು ಮುರಿದು ಬಿದ್ದು ಹಾನಿಯಾಗಿದೆ. ಅಂಗನವಾಡಿ ಕಟ್ಟಡದ ಮೇಲ್ಭಾಗದ ಖಾಸಗಿ ಜಮೀನಿನಲ್ಲಿದ್ದ ರಬ್ಬರ್ ಮರ ಗಾಳಿಗೆ ಮುರಿದು ಬಿದ್ದ ಪರಿಣಾಮ ಸುಮಾರು ಆರು ಶೀಟುಗಳಿಗೆ ಹಾನಿಯಾಗಿದ್ದು, ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.