ಪಳೆಯಂಡ ಪಾರ್ಥ ಚಿಣ್ಣಪ್ಪ

ವೀರಾಜಪೇಟೆ, ಜೂ. ೧೨: ರಾಜ್ಯದ ಗಡಿ ಭಾಗವಾದ ಕುಟ್ಟ, ಮಾಕುಟ್ಟ ಹಾಗೂ ಕರಿಕೆಯ ಬಳಿ ವಾಹನ ತಪಾಸಣಾ (ಆರ್.ಟಿ.ಓ) ಕೇಂದ್ರ ಇಲ್ಲದ ಕಾರಣ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ರಾಜ್ಯ ಸರ್ಕಾರ ಮಾತ್ರ ಕಂಡು ಕಾಣದ ರೀತಿಯಲ್ಲಿ ಇರುವುದರಿಂದ ಇದು ಒಂದು ರೀತಿಯಲ್ಲಿ ವಾಹನ ಕಳ್ಳರು, ನಕ್ಸಲ್ ಚಟುವಟಿಕೆಗಳಿಗೆ, ನುಸುಳುಕೋರರಿಗೆ ವರದಾನವಾಗಿದೆ.

ಕೇರಳ, ಪಾಂಡಿಚೇರಿ ಹಾಗೂ ತಮಿಳುನಾಡು ರಾಜ್ಯಗಳಿಂದ ಸಾವಿರಾರು ವಾಹನಗಳು ಕೇರಳ ರಾಜ್ಯದಲ್ಲಿ ತೆರಿಗೆ ಪಾವತಿಸಿ ನಮ್ಮ ರಾಜ್ಯ ಪ್ರವೇಶಿಸುತ್ತಿದೆ. ಎರಡು ರಾಜ್ಯಗಳನ್ನು ಬೆಸೆಯುವ ಕರ್ನಾಟಕದ ಗಡಿಭಾಗವಾದ ಕುಟ್ಟ ಮಾಕುಟ್ಟ ಹಾಗೂ ಕರಿಕೆಯಲ್ಲಿ ವಾಹನ ತಪಾಸಣೆಯ ಕೇಂದ್ರಗಳಿಲ್ಲದ ಕಾರಣ ವಾಹನ ಕಳ್ಳರು ಮತ್ತು ನುಸುಳುಕೋರರು ರಾಜ್ಯ ಪ್ರವೇಶಿಸಲು ಯಾವುದೇ ಅಡೆತಡೆಗಳಿಲ್ಲ. ಇದರಿಂದ ಭಯೋತ್ಪಾದನೆ ಚಟುವಟಿಕೆ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಸಹಕಾರಿಯಾಗುತ್ತಿದೆ.

ಕೇರಳ ರಾಜ್ಯದಿಂದ ಬರುವಂತಹ ವಾಹನಗಳು ಯಾವುದೇ ತೆರಿಗೆಯನ್ನು ನೀಡದೆ ರಾಜಾರೋಷವಾಗಿ ಸಂಚರಿಸು ವುದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ನಿಗದಿತ ಅಳತೆಗಿಂತ ಹೆಚ್ಚಿನ ತೂಕದ ಸರಕು ಸರಂಜಾಮು ಗಳನ್ನು ಸಾಗಿಸುವುದರಿಂದ ರಸ್ತೆಗಳು ಕುಸಿತ ಕಾಣುತ್ತಿದೆ. ಕೇರಳದ ಮಟ್ಟನೂರಿನಲ್ಲಿ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣ ಪ್ರಾರರಂಭವಾಗಿ ರುವುದರಿಂದ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ವೀರಾಜಪೇಟೆಯ ಮೂಲಕ ನೇರ ಸಂಪರ್ಕ ಒದಗಿಸಲು ಯೋಜನೆ ರೂಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರ ಮೈಸೂರು-ಬಂಡಿಪುರ-ಊಟಿ ಅಂತರರಾಜ್ಯ ಹೆದ್ದಾರಿಯನ್ನು ರಾಷ್ಟೀಯ ಉದ್ಯಾನವನದ ನೆಪ ಮುಂದಿಟ್ಟು ಕೊಂಡು ವಾಹನ ಸಂಚಾರವನ್ನು ನಿಷೇಧಿಸಿರುವುದರಿಂದ ಬಹುತೇಕ ವಾಹನಗಳು ಕುಟ್ಟಾ ಮಾನಂದವಾಡಿ ಮಾರ್ಗವಾಗಿ ಕೇರಳ ಹಾಗೂ ಪಾಂಡಿಚೇರಿ ರಾಜ್ಯವನ್ನು ಪ್ರವೇಶಿಸುತ್ತದೆ.

ಈ ಹಿಂದೆ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ವಿಧಾನಪರಿಷತ್ ಸದಸ್ಯರಾಗಿದ್ದಂತಹ ಸಂದರ್ಭದಲ್ಲಿ ರಾಜ್ಯದ ಗಡಿಭಾಗವಾದ ಮಾಕುಟ್ಟ, ಕುಟ್ಟ, ಕರಿಕೆಯಲ್ಲಿ ಆರ್.ಟಿ.ಓ ಚೆಕ್‌ಪೋಸ್ಟ್ ಇಲ್ಲದ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪಿಸಿದರು. ಅಂದಿನ ಸಾರಿಗೆ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ೨೪ ಗಂಟೆ ಒಳಗೆ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡುವುದಾಗಿ ಸರ್ಕಾರಕ್ಕೆ ಭರವಸೆ ನೀಡಿದ್ದರು. ಈ ಮೂರು ಅಂತರರಾಜ್ಯ ಚೆಕ್‌ಪೋಸ್ಟ್ ಗಳು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವಾಪ್ತಿಗೆ ಗಡಿಯಲ್ಲಿ ಚೆಕ್‌ಪೋಸ್ಟ್ ಸಮರ್ಪಕವಾಗಿಲ್ಲ ಬರುತ್ತಿದೆ. ಆದರೆ, ಈವರೆಗೂ ಸರ್ಕಾರಕ್ಕೆ ೨೪ ಗಂಟೆಗಳಾಗದಿರುವುದು ವಿಪರ್ಯಾಸವಾಗಿದೆ.

ಹಿಂದೆ ಸಮಾಜ ಸೇವಕ ಕೂತಂಡ ವಿವೇಕ್ ಪೂವಯ್ಯ ಕರ್ನಾಟಕದ ಗಡಿ ಭಾಗವಾದ ಮಾಕುಟ್ಟ ಕುಟ್ಟ ಹಾಗೂ ಕರಿಕೆಗಳಲ್ಲಿ ವಾಹನ ತಪಾಸಣಾ ಕೇಂದ್ರ ಇಲ್ಲದಿರುವ ಬಗ್ಗೆ ಹಾಗೂ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ನಷ್ಟವಾಗುತ್ತಿರುವ ಬಗ್ಗೆ ವಿಸ್ತೃತ ವರದಿಯ ಮನವಿಯನ್ನು ಅಂದಿನ ಟ್ರಾನ್ಸ್ಪೋರ್ಟ್ ಪ್ರಿನ್ಸಿಪಲ್ ಕಾರ್ಯದರ್ಶಿಗೆ ಸಲ್ಲಿಸಿದ ಪರಿಣಾಮ ಡೆಪ್ಯುಟಿ ಟ್ರಾನ್ಸ್ಪೋರ್ಟ್ ಕಮಿಷನರ್ ನಾರಾಯಣ್‌ಸ್ವಾಮಿ ಅವರ ತಂಡ ಸರ್ವೆ ನಡೆಸಿ ಸರ್ಕಾರಕ್ಕೆ ಚೆಕ್ ಪೋಸ್ಟ್ ಅಗತ್ಯತೆಯ ಬಗ್ಗೆ ವರದಿ ನೀಡಿದ್ದಾರೆ. ಅವರು ನೀಡಿದ ವರದಿ ಸರ್ಕಾರದ ಮಟ್ಟದಲ್ಲಿ ಗೆದ್ದಿಲು ಹಿಡಿಯುತ್ತಿದೆ.

ಕೇರಳ ರಾಜ್ಯದಲ್ಲಿ ಮದ್ಯ ಹಾಗೂ ತಂಬಾಕು ಪದಾರ್ಥಗಳು ನಿಷೇಧ ಇರುವುದರಿಂದ ಕೇರಳ ರಾಜ್ಯದ ನೋಂದಣಿ ಸಂಖ್ಯೆ ಹೊಂದಿರುವ ಹಲವಾರು ವಾಹನಗಳು ಗಡಿ ಭಾಗವಾದ ಮಾಕುಟ್ಟ ಪ್ರದೇಶದ ಮೂಲಕ ವೀರಾಜಪೇಟೆಗೆ ಬರುತ್ತಿದೆ. ಅದರಲ್ಲಿ ಆಟೋಗಳು ಸೇರಿಕೊಂಡಿದೆ. ಕೇರಳ ರಾಜ್ಯದ ಆಟೋಗಳು ಕರ್ನಾಟಕದಲ್ಲಿ ಸಂಚರಿಸುವAತಿಲ್ಲ. ಚೆಕ್‌ಪೋಸ್ಟ್ ಇಲ್ಲದ ಕಾರಣ ರಾಜಾರೋಷವಾಗಿ ಸಂಚರಿಸುತ್ತಿವೆ. ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದ್ದರೂ ಕೂಡ ರಾಜ್ಯ ಸರಕಾರ ಮಾತ್ರ ನಿರ್ಲಕ್ಷö್ಯ ಪ್ರದರ್ಶಿಸುತ್ತಿದೆ ಎಂಬುದು ಸಾರ್ವಜನಿಕರ ಆಕ್ಷೇಪವಾಗಿದೆ.

ಕರ್ನಾಟಕ ಗಡಿ ಭಾಗದಲ್ಲಿ ಆರ್.ಟಿ.ಓ ಚೆಕ್‌ಪೋಸ್ಟ್ ಇಲ್ಲ ಎಂದು ಮನಗಂಡ ಕೇರಳ ಸರ್ಕಾರದ ಅಧಿಕಾರಿಗಳು ನಮ್ಮ ಕರ್ನಾಟಕ ಭಾಗದಲ್ಲಿ ಬಂದು ವಾಹನ ತಪಾಸಣೆ ಮಾಡುತ್ತಿದ್ದಾರೆ. ಅವರಿಗೆ ನಮ್ಮ ನೆಲದಲ್ಲಿ ತಪಾಸಣೆ ಮಾಡುವ ಯಾವ ಅಧಿಕಾರವು ಇಲ್ಲ. ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಲಿಲ್ಲ. ಆರ್‌ಟಿಓ ಚೆಕ್‌ಪೋಸ್ಟ್ ನಿರ್ಮಾಣದ ಬಗ್ಗೆ ಕಾಣದ ಕೈಗಳು ಕೆಲಸ ನಿರ್ವಹಿಸುತ್ತಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ.

ಕೇರಳ ನೋಂದಣಿ ಇರುವ ಆಟೋಗಳು ಜಿಲ್ಲೆಯಲ್ಲಿ ರಾಜಾ ರೋಷವಾಗಿ ಸಂಚರಿಸುತ್ತಿದೆ. ಗೂಡ್ಸ್ ಆಟೋದಲ್ಲಿ ಹಣ್ಣು ಹಂಪಲುಗಳನ್ನು ಮಾರಾಟ ಮಾಡುತ್ತಾರೆ. ಜಿಲ್ಲೆಯ ಆಟೋಗಳಿಗೆ ೧೫ ಕೀ. ಮೀಟರ್ ಪರಿಮಿತಿ ಇರುವಂತದ್ದು. ಕೇರಳದ ಆಟೋಗಳು ಯಾವುದೇ ಪರಿಮಿತಿ ಇಲ್ಲದೆ ವ್ಯಾಪಾರ ವಹಿವಾಟು ನಡೆಸುತ್ತಿದೆ. ಪೋಲಿಸ್ ಹಾಗೂ ಆರ್.ಟಿ.ಓ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನ ಇಲ್ಲ ಎಂಬುದು ಜಿಲ್ಲೆಯ ಆಟೋ ಚಾಲಕರ ಅಳಲಾಗಿದೆ.