ಮಡಿಕೇರಿ, ಜೂ. ೧೨: ಒಂದು ಕುಟುಂಬದ ಸದಸ್ಯರೆಲ್ಲರು ಒಂದೇ ಕಾರ್ಯಕ್ರಮದ ವೇದಿಕೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸೇರುವ ಮೂಲಕ ವಿಭಿನ್ನ ದಾಖಲೆಯನ್ನು ಕೊಡವ ಜನಾಂಗ ತನ್ನದಾಗಿಸಿಕೊಂಡಿದೆ.
ಕಳೆದ ವರ್ಷ ಡಿಸೆಂಬರ್ ೨೪ ರಂದು ಕೊಡವ ಜನಾಂಗದ ಸಾವಿರಾರು ಸದಸ್ಯರು ಕೊಡವ ಒಕ್ಕೂಟ ಸಮಾರಂಭದಲ್ಲಿ ಸೇರಿದ್ದು, ಇದೀಗ ಅಧಿಕೃತ ವಿಶ್ವ ದಾಖಲೆ ಸ್ಥಾನ ದೊರಕಿದೆ. ಬಿಟ್ಟಂಗಾಲ ಗ್ರಾಮದಲ್ಲಿ ‘ಕೊಡವ ಕ್ಲಾನ್' ಸಂಸ್ಥೆ ಆಯೋಜಿಸಿದ್ದ ಒಕ್ಕೂಟ ಕಾರ್ಯಕ್ರಮದಲ್ಲಿ ಒಂದೇ ವಂಶವೃಕ್ಷಕ್ಕೆ ಸೇರಿದ ೨,೮೮೯ ಮಂದಿ ಭಾಗಿಯಾಗಿದ್ದರು. ದಿನವಿಡಿ ನಡೆದ ಸಮಾರಂಭದಲ್ಲಿ ದೇಶ ವಿದೇಶದಿಂದ ಸಾವಿರಾರು ಕೊಡವರು ಒಟ್ಟಿಗೆ ಸೇರಿ ನೋಂದಣಿ ಮಾಡಿಕೊಂಡಿದ್ದರು. ಕೊಡವ ಕ್ಲಾನ್ನ ಸಂಸ್ಥಾಪಕ ಗುಮ್ಮಟ್ಟೀರ ಕಿಶು ಉತ್ತಪ್ಪ ಹಾಗೂ ಅವರ ತಾಯಿ ಗುಮ್ಮಟ್ಟೀರ ಸೀತಮ್ಮ (ತಾಮನೆ - ಮಂಡೇಪAಡ) ಅವರ ಕಲ್ಪನೆಯಲ್ಲಿ ಆಯೋಜನೆಗೊಂಡಿದ್ದ ಒಕ್ಕೂಟದಲ್ಲಿ ಎರಡು ತಿಂಗಳ ಮಗುವಿನಿಂದ ೯೦ ವರ್ಷದ ಹಿರಿಯರು ಕೂಡ ಭಾಗಿಯಾಗಿದ್ದರು.
(ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ೬,೫೦೦ ಕೊಡವರು ಸೇರಿದ್ದರೂ ಕೂಡ ಸಮಯದ ಅಭಾವದಿಂದ ೨,೮೮೯ ಮಂದಿ ಮಾತ್ರ ನೋಂದಣಿ ಮಾಡಿದ ಕಾರಣ ದಾಖಲೆಯಲ್ಲಿ ೨,೮೮೯ ಮಂದಿ ಸೇರಿದ್ದು ಎಂಬುದಾಗಿ ನಮೂದಾಗಿದೆ. 'ಞoಜಚಿvಚಿಛಿಟಚಿಟಿ.ಛಿom' ನಲ್ಲಿ ಫ್ಯಾಮಿಲಿ ಟ್ರೀ ಅಡಿಯಲ್ಲಿ ಈಗಾಗಲೇ ೨೨,೪೮೭ ಕೊಡವರನ್ನು ಸೇರಿಸಲಾಗಿದ್ದು, ಇನ್ನಷ್ಟು ಜನರನ್ನು ಸೇರಿಸುವಲ್ಲಿ ಕೊಡವ ಕ್ಲಾನ್ ಸಂಘಟನೆ ಶ್ರಮಿಸುತ್ತಿದೆ ಎಂದು ಕಿಶು ಉತ್ತಪ್ಪ ತಿಳಿಸಿದ್ದಾರೆ.