ಸೋಮವಾರಪೇಟೆ, ಜೂ. ೧೨: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್‌ಗೌಡ ಅವರು ದೊಡ್ಡಮಳ್ತೆ ಶ್ರೀ ಹೊನ್ನಮ್ಮ ತಾಯಿ ಹಾಗೂ ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು.
ನಂತರ ಗ್ರಾಮಸ್ಥರು ಶಾಸಕರನ್ನು ಮೆರವಣಿಗೆಯಲ್ಲಿ ಕರೆತಂದು ಸನ್ಮಾನಿಸಿದರು. ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ಹೊನ್ನಮ್ಮನ ಕೆರೆ ಯಿಂದ ಹೊನವಳ್ಳಿ ಗ್ರಾಮ ಸಂಪರ್ಕ ರಸ್ತೆಗೆ ಅನುದಾನ ಕಲ್ಪಿಸುವಂತೆ ಮನವಿ ಮಾಡಿದರು. ಕಾಮಗಾರಿಗೆ ಅನುದಾನ ಕಲ್ಪಿಸುವ ಭರವಸೆಯನ್ನು ಶಾಸಕರು ನೀಡಿದರು.
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಂದು, ಸದಸ್ಯ ಗೋಪಾಲಕೃಷ್ಣ, ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ವೀರೇಶ್ ಪ್ರಮುಖರಾದ ಎಸ್.ಎನ್. ಹೂವಯ್ಯ, ಹೆಚ್.ಆರ್. ಸುರೇಶ್ ಎಸ್.ಡಿ. ದಿವಾಕರ್, ಕೃಷ್ಣಪ್ಪ, ಎಂ.ಬಿ. ವಸಂತ್ ಕುಮಾರ್, ಡಿ.ಎಸ್. ಪೂವಯ್ಯ, ಸಂಜಯ್ ಜೀವಿಜಯ ಮತ್ತಿತರರು ಇದ್ದರು.