ಗೋಣಿಕೊಪ್ಪ, ಜೂ. ೧೨: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಕರುಣಾ ಟ್ರಸ್ಟ್, ಪಾಲಿಬೆಟ್ಟ ಕೆನಲ್ ಕ್ಲಬ್, ಗೋಣಿಕೊಪ್ಪ ಪಶು ಆಸ್ಪತ್ರೆ ಹಾಗೂ ಗೋಣಿಕೊಪ್ಪ ಗ್ರಾ.ಪಂ. ಸಹಯೋಗದಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಸವ ಜಯಂತಿ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ರೇಬಿಸ್ ನಿರೋಧಕ ಉಚಿತ ಲಸಿಕೆ ಕಾರ್ಯಕ್ರಮದಲ್ಲಿ ೧೦೭ ಶ್ವಾನಗಳಿಗೆ ಲಸಿಕೆ ನೀಡಲಾಯಿತು. ಮುಖ್ಯ ಪಶುವೈದ್ಯ ಡಾ. ಎ.ಎಸ್. ಶಾಂತೇಶ್, ಕೆವಿಕೆ ಪಶು ವೈದ್ಯ ಎಸ್.ಸಿ. ಸುರೇಶ್ ರೇಬಿಸ್ ರೋಗದ ಬಗ್ಗೆ ಅರಿವು ಮೂಡಿಸಿದರು.