ವೀರಾಜಪೇಟೆ, ಜೂ. ೧೨: ಆಹಾರ ಪದ್ಧತಿ, ದೈನಂದಿನ ಸಮಸ್ಯೆಗಳು, ಒತ್ತಡದ ಕೆಲಸ ಮಾಡುವುದರಿಂದ ಹೃದಯ ಸಂಬAಧಿತ ಕಾಯಿಲೆಗಳಿಗೆ ತುತ್ತಾಗಬಹುದು, ಯಾವುದೇ ಕಾಯಿಲೆಯನ್ನು ಆಸಡ್ಡೆ ಮಾಡದೆ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕು ಎಂದು ಹಿಲ್ ಬ್ಲೂಮ್ಸ್ ಕ್ಲಿನಿಕ್ ನ ವೈಧ್ಯರಾದ ಡಾ. ಕಿರಣ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿ ವೀರಾಜಪೇಟೆ ಮತ್ತು ಹಿಲ್ ಬ್ಲೂಮ್ಸ್ ಕ್ಲಿನಿಕ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶ್ರೀ ಮುತ್ತಪ್ಪ ಕಲಾ ಮಂಟಪದಲ್ಲಿ ಅಯೋಜಿಸಲಾಗಿದ್ದ ಉಚಿತ ಹೃದಯ ತಪಾಸಣೆ ಶಿಬಿರ ಕಾರ್ಯಕ್ರಮ ನಡೆಯಿತು. ಹೃದಯ ಸಂಬAಧಿತ ಕಾಯಿಲೆಗಳನ್ನು ಮೊದಲೆ ಗುರುತಿಸುವುದು ಮುಖ್ಯವಾಗಬೇಕು, ಆಧುನಿಕ ಜೀವನದಲ್ಲಿ ಒತ್ತಡದ ನಡುವೆ, ದೈನಂದಿನ ಚಟುವಟಿಕೆಗಳಲ್ಲಿ ವ್ಯತ್ಯಾಸ ಆಹಾರ ಪದ್ದತಿಯಲ್ಲಿ ವ್ಯತ್ಯಾಸ ಹೀಗೆ ಹಲವು ಮಾರ್ಗಗಳಿಂದ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು, ಅತಿ ಸೂಕ್ಮವಾದ ಹೃದಯಕ್ಕೆ ಬಹು ಬೇಗ ನೊವು ಕಾಣಿಸಿಕೊಳ್ಳುತ್ತದೆ, ಯಾವುದೇ ಸಂದರ್ಭದಲ್ಲಿ ಉದಾಸೀನತೆ ಮಾಡದೆ ಚಿಕಿತ್ಸೆಗೆ ಮುಂದಾಗಬೇಕು. ಶಿಬಿರಗಳ ಅಯೋಜನೆಯಿಂದ ಪ್ರಥಮ ಚಿಕಿತ್ಸೆ ಮತ್ತು ಕಾಯಿಲೆ ಕಂಡುಕೊಳ್ಳಬಹುದು ಎಂದು ಹೇಳಿದರು.

ವೀರಾಜಪೇಟೆ ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿಯ ಅಧÀ್ಯಕ್ಷರಾದ ಸುಮೇಶ್ ಪಿ.ಜಿ. ಅವರು ಕಾರ್ಯಕ್ರಮದ ಅಧÀ್ಯಕ್ಷತೆ ವಹಿಸಿ ಮಾತನಾಡಿ ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿಯು ಕಾರ್ಯ ಅರಂಭ ಮಾಡಿ ಸುಮಾರು ೧೪ ವರ್ಷಗಳು ಸಂದಿದೆ, ಸಂಸ್ಥೆಯು ಕಲೆ ಮತ್ತು ಸಂಸ್ಕೃತಿಗೆ ಮಾತ್ರ ಸೀಮಿತವಾಗದೆ ಜನಪರ ಕಾಳಜಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ, ಈ ನಿಟ್ಟಿನಲ್ಲಿ ಹೃದಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಹಿಲ್ ಬ್ಲೂಮ್ಸ್ ಕ್ಲಿನಿಕ್ ಸಂಸ್ಥೆಯ ಡಾ. ಧಕ್ಷೀತಾ, ಚೈತನ್ಯ ಮಠಪುರ ಶ್ರೀ ಮುತ್ತಪ್ಪನ್ ದೇವಾಲಯದ ಅಧ್ಯಕ್ಷರಾದ ಟಿ.ಕೆ ರಾಜನ್ (ಪುಷ್ಪ) ಉದ್ಯಮಿ ಸುರೇಶ್, ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿಯ ಗೌ. ಆಧ್ಯಕ್ಷರಾದ ಪದ್ಮನಾಭ ಟಿ.ಕೆ, ಕಾರ್ಯದರ್ಶಿಗಳಾದ ಬಾಬು ಸಿ.ಆರ್, ಕೋಶಾಧಿಕಾರಿ ಗಳಾದ ಗಣೇಶ್ ಟಿ.ಆರ್, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಾದ ರಜನಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು ೨೦೦ ಮಂದಿ ಭಾಗವಹಿಸಿ ತಮ್ಮ ಹೃದಯ ತಪಾಸಣೆ ಮಾಡಿಸಿ ಕೊಂಡರು.

ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿಯ ಪದಾಧಿಕಾರಿಗಳು, ಸದ ಸ್ಯರು, ಹಿಲ್ ಬ್ಲೂಮ್ಸ್ ಕ್ಲಿನಿಕ್‌ನ ಸಿಬ್ಬಂ ದಿಗಳು, ಸಾರ್ವಜನಿಕರು ಹಾಜರಿದ್ದರು.