ಇಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ

ಬಡತನ, ಅನಕ್ಷರತೆ, ಮಕ್ಕಳ ಅಕ್ರಮ ಕಳ್ಳ ಸಾಗಾಣಿಕೆ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಇವು ಪ್ರಮುಖ ಸಾಮಾಜಿಕ ಪಿಡುಗುಗಳು. ವಿಶ್ವದಲ್ಲಿ ಇಂದಿಗೂ ೧೬ ಕೋಟಿ ಬಾಲ ಕಾರ್ಮಿಕರಿದ್ದಾರೆ ಎಂಬುದು ಯೂನಿಸೆಫ್ ಸಂಸ್ಥೆಯ ಇತ್ತೀಚಿನ ವರದಿಯಿಂದ ಸ್ಪಷ್ಟವಾಗಿದೆ. ಇವರಲ್ಲಿ ಶೇ. ೫೦ ರಷ್ಟು ಮಕ್ಕಳು ಅಪಾಯಕಾರಿ ವೃತ್ತಿಗಳನ್ನು ನಿರ್ವಹಿಸುತ್ತಿದ್ದಾರೆ.

ಬಾಲ ಕಾರ್ಮಿಕರ ಸಂಖ್ಯೆ ಆಫ್ರಿಕಾದಲ್ಲಿ ಹೆಚ್ಚು. ಅಲ್ಲಿ ಸುಮಾರು ೭ ಕೋಟಿ ೨೦ ಲಕ್ಷ ಬಾಲ ಕಾರ್ಮಿಕರಿದ್ದಾರೆ. ಭಾರತದಲ್ಲಿ ೨೦೧೧ ರ ಜನಗಣತಿಯಂತೆ ೧ ಕೋಟಿ ೧೦ ಲಕ್ಷ ಬಾಲ ಕಾರ್ಮಿಕರಿದ್ದಾರೆ. ನಮ್ಮ ದೇಶದಲ್ಲಿ ಸುಮಾರು ೪ ಕೋಟಿ ೨೭ ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ವಿಶ್ವದಲ್ಲಿ ಪ್ರತಿ ೧೦ ಮಕ್ಕಳ ಪೈಕಿ ಒಂದು ಮಗು ಬಾಲ ಕಾರ್ಮಿಕನಾಗಿ ದುಡಿಯುತ್ತಿದೆ.

ಇಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ. ‘ಇeeಞ oಜಿ ಂಛಿಣioಟಿ ಂgಚಿiಟಿsಣ ಅhiಟಜ ಐಚಿbouಡಿ’ ‘ಬಾಲ ಕಾರ್ಮಿಕ ಪದ್ಧತಿ ವಿರುದ್ಧ ವಾರದ ಕಾರ್ಯಾಚರಣೆ’ ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಕಳೆದ ವರ್ಷ ‘ಬಾಲ ಕಾರ್ಮಿಕ ಪದ್ಧತಿ ರದ್ಧತಿಗೆ ಜಾಗತಿಕ-ಸಾಮಾಜಿಕ ರಕ್ಷಣೆ’ ಎಂಬುದು ಧ್ಯೇಯ ವಾಕ್ಯವಾಗಿತ್ತು.

ಬಾಲ ಕಾರ್ಮಿಕ ಪದ್ಧತಿಯ ಅನಿಷ್ಟಗಳ ಕುರಿತು ಸಾಮಾಜಿಕ ಅರಿವು ಮೂಡಿಸಿ, ಇದನ್ನು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಲು, ಒಂದು ವಾರ ಕಾಲ ಜನಜಾಗೃತಿ ಮೂಡಿಸಲು ಅಂರ‍್ರಾಷ್ಟಿçÃಯ ಕಾರ್ಮಿಕ ಸಂಸ್ಥೆ (ಐ.ಎಲ್.ಓ.) ಈ ಬಾರಿ ಈ ಧ್ಯೇಯ ವಾಕ್ಯವನ್ನು ಘೋಷಿಸಿದೆ. ವಿಶ್ವದಾದ್ಯಂತ ಬಾಲ ಕಾರ್ಮಿಕ ಪದ್ಧತಿ ರದ್ದುಗೊಳಿಸಲು ಪರಿಣಾಮಕಾರಿ ಕ್ರಮಗಳಿಗೆ ಜಾಗೃತಿ ಮೂಡಿಸಲು ಐ.ಎಲ್.ಓ. ೨೦೦೨ ರಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆರಂಭಿಸಿತು. ಕರ್ನಾಟಕ ರಾಜ್ಯ ಸರಕಾರ ೨೦೦೧ ರಲ್ಲಿಯೇ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ರಾಜ್ಯ ಬಾಲ ಕಾರ್ಮಿಕ ನಿರ್ಮೂಲನಾ ಕ್ರಿಯಾ ಯೋಜನೆ ಜಾರಿಗೆ ತಂದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಮ್ಮ ದೇಶದ ಮಕ್ಕಳ ಪೈಕಿ ಶೇ. ೩.೯ ರಷ್ಟು ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವರ ಬಾಲ್ಯವನ್ನು ಇವರಿಗೆ ಮರಳಿಸುವ ಪುಣ್ಯದ ಕೆಲಸ ಆಗಬೇಕಿದೆ.

ಬಾಲ್ಯದ ನಲಿ-ಕಲಿ ಅವಕಾಶದಿಂದ ವಂಚಿತರಾಗಿ, ಬಡತನದಿಂದಲೋ, ಪೋಷಕರಿಲ್ಲದೆ ಅನಾಥರಾದ ಕಾರಣದಿಂದಲೋ ಶಾಲೆಯಿಂದ ಹೊರಗುಳಿಯುವ ಮಕ್ಕಳು ಸಂಸಾರ ನಿರ್ವಹಣೆಗೆಂದು ಅನ್ಯ ಮಾರ್ಗವಿಲ್ಲದೆ ಹೊಟೇಲು, ಗ್ಯಾರೇಜ್, ಕಟ್ಟಡ ನಿರ್ಮಾಣ... ಮೊದಲಾದ ಕಡೆಗಳಲ್ಲಿ ದುಡಿಯುತ್ತಾರೆ. ಅನೇಕ ಬಾರಿ ಅಪಾಯಕಾಗಿ ಕರ್ತವ್ಯಗಳನ್ನೂ ನಿರ್ವಹಿಸಬೇಕಾಗುತ್ತದೆ. ಅನೇಕ ಕಡೆಗಳಲ್ಲಿ ಮಕ್ಕಳೆಂಬ ಕಾರಣದಿಂದ ದುಡಿಮೆಗೆ ತಕ್ಕ ವೇತನವಿಲ್ಲದೆ ವಂಚನೆಗೊಳಗಾಗುವ ಪ್ರಸಂಗಗಳೂ ಹೆಚ್ಚು. ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿಸಿ ಅವರ ದುಡಿಮೆಯನ್ನೇ ಬಂಡವಾಳವಾಗಿಸಿಕೊಳ್ಳುವ ಮಕ್ಕಳ ಅಕ್ರಮ ಕಳ್ಳ ಸಾಗಾಣಿಕೆ ಜಾಲಗಳೂ ಇವೆ. ಮಕ್ಕಳನ್ನು ಅಕ್ರಮ - ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸುವ ಇಂತಹ ಜಾಲಗಳನ್ನು ತೊಡೆದು ಹಾಕುವುದು ಇಂದಿನ ಪ್ರಧಾನ ಅಗತ್ಯವಾಗಿದೆ.

ಮಕ್ಕಳು ಶಾಲೆಗೆ ಹೋಗುವ ಹಕ್ಕು ಕಸಿದುಕೊಳ್ಳುವ ಮತ್ತು ಬಡತನದ ಅಂತರ - ಪೀಳಿಗೆಯ ಚಕ್ರಗಳನ್ನು ಬಲಪಡಿಸುವ ಬಾಲ ಕಾರ್ಮಿಕ ಪದ್ಧತಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿಯ ಅಗತ್ಯವಿದೆ. ಬಾಲ ಕಾರ್ಮಿಕರು ಶಿಕ್ಷಣಕ್ಕೆ ಪ್ರಮುಖ ತಡೆಗೋಡೆಯಾಗಿ ಶಾಲೆಗಳ ಹಾಜರಾತಿ ಮತ್ತು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಾರೆ.

ಬಾಲ ಕಾರ್ಮಿಕ ಕಾಯಿದೆ ೧೪ ವರ್ಷದೊಳಗಿನ ಮಕ್ಕಳನ್ನು ಅವರ ಜೀವ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ೧೩ ವಿವಿಧ ವೃತ್ತಿ ಮತ್ತು ೫೭ ಕಾರ್ಯ ವಿಧಾನಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದೆ. ಇಂತಹ ಕಡೆಗಳಲ್ಲಿ ಮಕ್ಕಳನ್ನು ದುಡಿಮೆಗೆ ಹಚ್ಚುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಕಡೆಗಳಲ್ಲಿ ದುಡಿಯುತ್ತಾ ಬದುಕಿನ ಅರ್ಥ ಕಳೆದುಕೊಳ್ಳುತ್ತಿರುವ ಬಾಲ ಕಾರ್ಮಿಕರನ್ನು ಪತ್ತೆಹಚ್ಚಿ, ಅವರಿಗೆ ಸೂಕ್ತ ಪುನರ್ವಸತಿಯೊಂದಿಗೆ, ಬದುಕು ಕಟ್ಟಿಕೊಡುವ ಕಾಯಕದಲ್ಲಿ ನಿರತವಾಗಿ ನಮ್ಮ ಬದುಕನ್ನು ಅರ್ಥಪೂರ್ಣವಾಗಿಸೋಣ.

- ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೪೫೪೯೯೧೧೨.