ಮಡಿಕೇರಿ, ಜೂ. ೧೧: ಮಡಿಕೇರಿಯ ರೇಸ್ ಕೋರ್ಸ್ ರಸ್ತೆಯಲ್ಲಿ ಅತ್ಯಾಧುನಿಕ ಉಪಕರಣಗಳಿಂದ ಕೂಡಿದ ಸ್ಮಿತಾ ಐ ಕೇರ್ ಕೇಂದ್ರ ಉದ್ಘಾಟನೆಯಾಯಿತು.
ಜೂನಿಯರ್ ಕಾಲೇಜು ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರವನ್ನು ಇದೀಗ ರೇಸ್ ಕೋರ್ಸ್ ರಸ್ತೆಯಲ್ಲಿನ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಐದು ಮಹಡಿಗಳುಳ್ಳ ನೂತನ ಕಟ್ಟಡದಲ್ಲಿನ ಸ್ಮಿತಾ ಐ ಕೇರ್ ಕೇಂದ್ರವನ್ನು ನಿವೃತ್ತ ಮೇಜರ್ ಜನರಲ್ ಬಾಚಮಂಡ ಎ.ಕಾರ್ಯಪ್ಪ ಉದ್ಘಾಟಿಸಿದರು. ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಅಧ್ಯಕ್ಷ ಡಾ.ಶ್ಯಾಮ್ ಅಪ್ಪಣ್ಣ, ಮಲ್ಲಿಗೆ ಪೈ ಮತ್ತು ಸ್ಮಿತಾ ಐ ಕೇರ್ ಕೇಂದ್ರದ ಮಾಲೀಕ ಡಾ.ಸಿ.ಆರ್.ಪ್ರಶಾಂತ್ ಹಾಜರಿದ್ದರು. ಡಾ. ಎಂ.ಜಿ.ಪಾಟ್ಕರ್. ಡಾ.ಅನಿಲ್ ಚಂಗಪ್ಪ, ಡಾ.ಕೆ.ಬಿ. ಸೂರ್ಯಕುಮಾರ್, ಡಾ. ಸುಧಾಕರ್ ಸೇರಿದಂತೆ ಅನೇಕ ಪ್ರಮುಖರು ಶುಭಹಾರೈಸಿದರು