ಮಡಿಕೇರಿ, ಜೂ. ೧೧: ಮಡಿಕೇರಿಯ ಉಪನ್ಯಾಸಕಿ ಕೆ. ಜಯಲಕ್ಷ್ಮಿ ಅವರು ರಚಿಸಿರುವ ‘ಚಪ್ಪಾಳೆಗೂ ಬೆಲೆ ಇದೆ' ಕೃತಿಯ ಲೋಕಾರ್ಪಣೆ ತಾ. ೧೮ ರಂದು ಮಡಿಕೇರಿಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಲಿದೆ.
ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಕೃತಿಯನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಹಿರಿಯ ಸಾಹಿತಿ ಶೋಭಾ ಸುಬ್ಬಯ್ಯ, ಚಿತ್ರದುರ್ಗ ಸಿರಿಗನ್ನಡ ಬಳಗದ ಸಂಚಾಲಕ ಚಳ್ಳಕೆರೆ ಯೆರ್ರಿಸ್ವಾಮಿ, ಪತ್ರಕರ್ತ ಹಾಗೂ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಮಡಿಕೇರಿ ಲಯನ್ಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ನವೀನ್ ಅಂಬೇಕಲ್ ಅವರುಗಳು ಭಾಗವಹಿಸಲಿದ್ದಾರೆ.