ಕುಶಾಲನಗರ, ಜೂ. ೧೨ : ಲೀಲಾ ಕುಮಾರಿ ತೊಡಿಕಾನ ಅವರು ರಚಿಸಿರುವ ಹನಿ ಹನಿ ಇಬ್ಬನಿ ಹನಿಗವನ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕುಶಾಲನಗರ ಅನುಗ್ರಹ ಕಾಲೇಜು ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪಂಡರಿನಾಥ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಂ.ಪಿ. ಕೇಶವಕಾಮತ್ ಅವರು ಪುಸ್ತಕ ಬಿಡುಗಡೆಗೊಳಿಸಿದರು. ಶಿಕ್ಷಕರಾದ ಊ.ರಾ. ನಾಗೇಶ್ ಪುಸ್ತಕ ಪರಿಚಯ ನಡೆಸಿಕೊಟ್ಟರು. ಕಾಲೇಜು ಆಡಳಿತ ಮಂಡಳಿ ಪ್ರಮುಖರಾದ ಆರ್.ಕೆ. ನಾಗೇಂದ್ರ ಬಾಬು, ಚಂದ್ರಶೇಖರ್, ಶಿಕ್ಷಕಿ ಸುನೀತಾ ಲೋಕೇಶ್ ಮತ್ತಿತರರು ಇದ್ದರು.