ಮಡಿಕೇರಿ, ಜೂ. ೧೧ : ನಗರದ ಸ್ಟಿವರ್ಟ್ ಹಿಲ್ ರಸ್ತೆಯಲ್ಲಿ ರಸ್ತೆಯ ಅಡ್ಡಗಲದ ಮೋರಿಯ ಕಾಂಕ್ರೀಟ್ ಸ್ಲಾಬ್ ತೆರೆದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದದನ್ನು ಇದೀಗ ಸರಿಪಡಿಸಲಾಗಿದೆ. ಈ ಬಗ್ಗೆ ತಾ.೭ ರಂದು ಶಕ್ತಿ ‘ಬಾಯ್ತೆರೆದಿರುವ ಮೋರಿ' ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿದ ಬೆನ್ನಲ್ಲೆ ನಗರಸಭೆ ಎಚ್ಚೆತ್ತು ರಸ್ತೆಯಲ್ಲಿನ ಸ್ಲಾಬ್ ದುರಸ್ತಿ ಪಡಿಸಿದೆ.