ಮಡಿಕೇರಿ, ಜೂ. ೧೧: ಕೊಡಗು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಕುಶಾಲನಗರ ತಾಲ್ಲೂಕು ತಹಶೀಲ್ದಾರ್ರವರ ಅಧ್ಯಕ್ಷತೆಯಲ್ಲಿ ತಾ. ೧೪ ರಂದು ಬೆಳಗ್ಗೆ ೧೦.೩೦ ಗಂಟೆಯಿAದ ೧ ಗಂಟೆವರೆಗೆ ೭ನೇ ಹೊಸಕೋಟೆ ಗ್ರಾಮ ಪಂಚಾಯ್ತಿಯಲ್ಲಿ ೭ ನೇ ಹೊಸಕೋಟೆ ಗ್ರಾಮದ ಪೌತಿ ಖಾತೆ ಆಂದೋಲನವನ್ನು ಏರ್ಪಡಿಸಲಾಗಿದೆ. ಅಗತ್ಯ ದಾಖಲಾತಿಗಳಾದ ಆರ್.ಟಿ.ಸಿ. ವಂಶವೃಕ್ಷ, ಮರಣ ದೃಢೀಕರಣ ಪತ್ರ, ನೈಜ ದೃಢೀಕೃತ ದಾಖಲೆಗಳೊಂದಿಗೆ ಹಾಜರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಉಪತಹಶೀಲ್ದಾರ್ ಶಿವಪ್ಪ ತಿಳಿಸಿದ್ದಾರೆ.