ಕುಶಾಲನಗರ, ಜೂ.೧೧: ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸಂದರ್ಭ ಕೊಂಚ ಏರುಪೇರಾದರೂ ಸಾರಿಗೆ ಬಸ್ನ ಕಂಡಕ್ಟರ್ ತಲೆದಂಡವಾಗುವ ಬಗ್ಗೆ ಸಾರಿಗೆ ಇಲಾಖೆ ನಿಯಮ ರೂಪಿಸಿದೆ.
ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರ ವಾಸ್ತವ ಸಂಖ್ಯೆಗಿAತ ಹೆಚ್ಚಿನ ಸಂಖ್ಯೆ ಅಥವಾ ಕಡಿಮೆ ಸಂಖ್ಯೆಯ ಮಹಿಳಾ ಪ್ರಯಾಣಿಕರು ಸಂಸ್ಥೆಯ ತನಿಖಾ ದಳದ ಗಮನಕ್ಕೆ ಕಂಡುಬAದಲ್ಲಿ ಆ ಬಸ್ನಿಂದ ಮಾರ್ಗ ಮಧ್ಯೆ ಬಸ್ ನಿಲ್ದಾಣಗಳಲ್ಲಿ ಇಳಿದು ಬೇರೆ ಬಸ್ನಲ್ಲಿ ಪ್ರಯಾಣಿಸಿದ್ದು ಸಂಸ್ಥೆಯ ಜಾಗೃತ ದಳದ ಗಮನಕ್ಕೆ ಬಂದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸಾರಿಗೆ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದೆ.
ಬಸ್ಸುಗಳಲ್ಲಿ ಪ್ರಯಾಣಿಸುವ ಕರ್ನಾಟಕ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ನಿರ್ವಾಹಕರು ಉಚಿತ ಟಿಕೇಟು ವಿತರಿಸದೆ ಇದ್ದ ಪಕ್ಷದಲ್ಲಿ ಈ ಬಗ್ಗೆ ತನಿಖಾ ಅಥವಾ ಜಾಗೃತ ದಳದ ಗಮನಕ್ಕೆ ಬಂದ ಸಂದರ್ಭ ಪ್ರಯಾಣಿಕರಿಂದ ದಂಡ ವಸೂಲು ಮಾಡದೆ ನ್ಯೂನತೆಗಳ ವಿವರಗಳೊಂದಿಗೆ ನಿರ್ವಾಹಕರಿಗೆ ನಿಯಮಾನುಸಾರ ಸಾರಿಗೆ ಸಂಸ್ಥೆ ಮೆಮೋ ನೀಡಲಿದೆ .
ನಗರ ಸಾರಿಗೆ ಅಥವಾ ವೇಗದೂತ ಸಾರಿಗೆಗಳಲ್ಲದೆ ಇತರ ಪ್ರತಿಷ್ಠಿತ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಟಿಕೆಟ್ ನೀಡಿರುವ ಸಂದರ್ಭ ಕಂಡು ಬಂದಲ್ಲಿ ಪ್ರಯಾಣಿಕರಿಗೆ ದಂಡ ವಿಧಿಸುವ ಅವಕಾಶವಿಲ್ಲ. ಇಂತಹ ಪ್ರಕರಣಗಳಿಗೆ ವಿವರಗಳೊಂದಿಗೆ ಬಸ್ ನಿರ್ವಾಹಕರಿಗೆ ನಿಯಮಾನುಸಾರ ಮೆಮೊ ನೀಡುವ ಬಗ್ಗೆ ಕೂಡ ಇಲಾಖೆ ಸೂಚನೆ ನೀಡಿದೆ.
ಒಂದು ವೇಳೆ ಪುರುಷ ಪ್ರಯಾಣಿಕರಿಗೆ ಮಹಿಳಾ ಪ್ರಯಾಣಿಕರಿಗೆ ನೀಡುವ ಉಚಿತ ಟಿಕೇಟನ್ನು ವಿತರಿಸಿದರೆ ಆ ಸಂದರ್ಭದಲ್ಲಿ ಕೂಡ ಪ್ರಯಾಣಿಕರಿಂದ ದಂಡ ವಸೂಲು ಮಾಡುವುದಿಲ್ಲ. ಈ ಸಂದರ್ಭ ಕೂಡ ನಿರ್ವಾಹಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
ಈ ಎಲ್ಲಾ ಪ್ರಕರಣಗಳಲ್ಲಿ ಬಸ್ ನಿರ್ವಾಹಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ. ಈಗಾಗಲೇ ಸೂಕ್ತ ಹೊರಡಿಸಿದ್ದು ಸಾರಿಗೆ ಬಸ್ಗಳ ನಿರ್ವಾಹಕರು ಮುಂದೆ ತಮಗೆ ಬರುವ ಆಪತ್ತಿನ ಬಗ್ಗೆ ಚಿಂತಾಕ್ರಾAತರಾಗಿದ್ದಾರೆ. - ಚಂದ್ರಮೋಹನ್