ಕುಶಾಲನಗರ, ಜೂ.೧೧: ಉಸ್ತುವಾರಿ ಸಚಿವ ಎಸ್.ಎನ್. ಬೋಸರಾಜು ಜಿಲ್ಲೆಗೆ ಆಗಮಿಸಿದ ಸಂದರ್ಭ ಕೊಡಗು-ಮೈಸೂರು ಗಡಿಭಾಗದಲ್ಲಿ ಕೊಡಗು ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು. ಕಾವೇರಿ ಸೇತುವೆ ಬಳಿಯಿರುವ ಕಾವೇರಿ ಮಾತೆ ಪ್ರತಿಮೆಗೆ ಸಚಿವರು ಪೂಜೆ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನ ಬಗ್ಗೆ ಅಪಾರ ಪ್ರೀತಿಯಿದೆ. ಕೊಡಗಿನ ರಾಜಕಾರಣಿಗಳು ಕೂಡ ತೀರಾ ಬಲ್ಲವರಾಗಿದ್ದು, ಜಿಲ್ಲೆಯ ಸಮಸ್ಯೆಗಳನ್ನು ಕೂಡ ಅರಿತುಕೊಂಡಿದ್ದೇನೆ. ಸದ್ಯದಲ್ಲೇ ಅಧಿಕಾರಗಳೊಂದಿಗೆ ಸಭೆ ನಡೆಸಲಾಗುವುದು. ಸಂವಿಧಾನ ಬದ್ದವಾದ ಆಡಳಿತಕ್ಕೆ ಒತ್ತು ನೀಡಿ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ನನ್ನ ಪ್ರಮುಖ ಆದ್ಯತೆ ಎಂದು ತಿಳಿಸಿದ ಅವರು, ಈಗಷ್ಟೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಹಂತಹAತವಾಗಿ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ. ಕಾನೂನುಬದ್ದವಾಗಿಯೇ ಎಲ್ಲವನ್ನು ಜಾರಿಗೊಳಿಸುವ ಅನಿವಾರ್ಯತೆ ಇದೆ ಎಂದರು.

ಈ ಸಂದರ್ಭ ಜಿಲ್ಲಾಧಿಕಾರಿ ಬಿ.ಸಿ. ಸತೀಶ, ಎಸ್ಪಿ ರಾಮರಾಜನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪ್ರಮುಖರಾದ ಎಚ್.ಎಸ್. ಚಂದ್ರಮೌಳಿ, ಮಂಜುನಾಥ್ ಗುಂಡುರಾವ್, ಶಿವಶಂಕರ್, ಕಿರಣ್, ಶೇಖ್ ಖಲೀಮುಲ್ಲಾ, ಜೋಸೆಫ್ ವಿಕ್ಟರ್ ಸೋನ್ಸ್, ಕಾಂತರಾಜು, ಎಂ.ಎA.ಪ್ರಕಾಶ್, ಸುನಿತಾ, ವಿ.ಜೆ. ನವೀನ್, ಜಿ.ಬಿ. ಜಗದೀಶ್, ಚಂದ್ರಶೇಖರ್, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಮತ್ತಿತರರು ಇದ್ದರು.