ಚೆಯ್ಯಂಡಾಣೆ, ಜೂ. ೧೦ : ಇಂಡಿಯನ್ ಮಿಲಿಟರಿ ಅಕಾಡೆಮಿಯ ೧೫೨ನೇ ಕೋರ್ಸ್ನ ನಿರ್ಗಮನ ಪಥ ಸಂಚಲನದಲ್ಲಿ ಚೆಯ್ಯಂಡಾಣೆ ಸಮೀಪದ ಮರಂದೋಡ ಗ್ರಾಮದ ಮಾರ್ಚಂಡ ವಿಜಯ್ ನಂಜಪ್ಪ ಮತ್ತು ಮಾರ್ಚಂಡ ಚಿತ್ರ (ತವರುಮನೆ ಮಲ್ಲಾಜಿರ) ಇವರ ಪುತ್ರ ಮಾರ್ಚಂಡ ಶಯನ್ ಸೋಮಣ್ಣ ೯ನೇ ಗ್ರೆನೇಡಿಯರ್ ರೆಜಿಮೆಂಟ್‌ಗೆ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.
(ಮೊದಲ ಪುಟದಿಂದ) ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಓಆಂ)ಯಲ್ಲಿ ಬೆಟಾಲಿಯನ್ ಕ್ಯಾಪ್ಟನ್ ಹಾಗೂ ಅಕಾಡೆಮಿಕ್ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ೧ ವರ್ಷ ತರಬೇತಿ ಪಡೆದರು.
ಅಕಾಡೆಮಿಯ ಉತ್ತಮ ಹಾಕಿ ಆಟಗಾರ ಮತ್ತು ವಾಲಿಬಾಲ್ ಆಟಗಾರ ಪ್ರಶಸ್ತಿ, ಮಿಸ್ಟರ್ (Iಒಂ) ಇಂಡಿಯನ್ ಮಿಲಿಟರಿ ಅಕಾಡೆಮಿಯ ೨ ರನ್ನರ್ ಅಪ್ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ.
ಜೂನ್ ೧೦ ರಂದು ಉತ್ತರಕಾಂಡ್‌ನ ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಪಥ ಸಂಚಲನ ನಡೆಯಿತು. -ಅಶ್ರಫ್
ಲೆಫ್ಟಿನೆಂಟ್ ಆಗಿ ಶಯನ್ ಸೋಮಣ್ಣ