ಮಡಿಕೇರಿ, ಜೂ. ೧೦: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರದ ವಿವಿಧ ಗ್ಯಾರಂಟಿಗಳಲ್ಲಿ ಪ್ರಮುಖವಾಗಿರುವ ಕೆ.ಎಸ್.ಆರ್.ಟಿ.ಸಿ. ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ತಾ.೧೧ರಿಂದ (ಇಂದಿನಿAದ) ಜಾರಿಗೆ ಬರಲಿದೆ. ಈ ಉಚಿತ ಪ್ರಯಾಣದ ಗ್ಯಾರಂಟಿಯ ಸರ್ಕಸ್‌ಗೆ ಸರಕಾರ ರೂಪು-ರೇಷೆ ಸಿದ್ಧಪಡಿಸಿಕೊಂಡಿದೆಯಾದರೂ ಮುಂದಿನ ದಿನಗಳಲ್ಲಿ ಇದು ಯಾವ ರೀತಿಯಲ್ಲಿ ಮುಂದುವರೆಯಬಹುದು ಎಂಬ ಕುತೂಹಲ ಇದೀಗ ಬಹುತೇಕ ಎಲ್ಲರಲ್ಲಿಯೂ ಇದೆ.
ಸದ್ಯದ ಮಟ್ಟಿಗೆ ತಾ.೧೧ರಿಂದ (ಇಂದಿನಿAದ) ಜಾರಿಗೆ ಬರಲಿರುವ ಮಹಿಳೆಯರ ಉಚಿತ ಪ್ರಯಾಣಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಬಗ್ಗೆ ಈಗಾಗಲೇ ನಿರ್ವಾಹಕರುಗಳಿಗೆ ಅಗತ್ಯ ಮಾರ್ಗದರ್ಶನ-ಸೂಚನೆಗಳನ್ನು ನೀಡಲಾಗಿದೆ. ರಾಜ್ಯಕ್ಕೆ ಸಂಬAಧಿಸಿದ ಮಹಿಳೆಯರು ಇದರ ಪ್ರಯೋಜನ ಪಡೆಯಲು ರಾಜ್ಯದೊಳಗೆ ತಮ್ಮ ವಿಳಾಸ, ಭಾವಚಿತ್ರವಿರುವ ದಾಖಲೆಯನ್ನು ನೀಡಬೇಕಾಗಿದೆ. ಇದನ್ನು ಪರಿಶೀಲಿಸಿ ನಿರ್ವಾಹಕರು ವ್ಯವಹರಿಸುತ್ತಾರೆ. ಈ ಹಿಂದೆ ಟಿಕೆಟ್ ನೀಡುತ್ತಿದ್ದ ಮಾದರಿಯಲ್ಲೇ ಇದಕ್ಕೆ ವ್ಯವಸ್ಥೆ ಇರುತ್ತದೆ. ಆದರೆ ಟಿಕೆಟ್‌ನಲ್ಲಿ ದರ ಮಾತ್ರ ಶೂನ್ಯ ಎಂಬುದಾಗಿ ಬರಲಿದೆ. ‘ಸ್ಟೇಜ್’ ರೀತಿಯಲ್ಲೇ ಎಲ್ಲಿಂದ ಎಲ್ಲಿಗೆ ಪ್ರಯಾಣ ಎಂಬ ವಿವರ ದಾಖಲಾಗುತ್ತದೆ.
ಕೊಡಗಿನಲ್ಲಿ...
ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಮಡಿಕೇರಿ ಘಟಕದ ೯೧ ಬಸ್‌ಗಳು ಸೇರಿದಂತೆ ಬೇರೆ ಬೇರೆ ವಿಭಾಗದ ಘಟಕಗಳಿಂದ ಜಿಲ್ಲೆಗೆ ಕಾರ್ಯಾಚರಿಸುವ ಬಸ್‌ಗಳು ಸೇರಿ ಒಟ್ಟು ಅಂದಾಜು ೬೦೦ ರಿಂದ ೭೦೦ ಬಸ್‌ಗಳು ಪ್ರಸ್ತುತ ದಿನನಿತ್ಯ ಓಡಾಟ ನಡೆಸುತ್ತಿವೆ.
(ಮೊದಲ ಪುಟದಿಂದ) ಇದರಲ್ಲಿ ರಾಜಹಂಸ, ಐರಾವತ, ಎಲೆಕ್ಟಿçಕ್ ಬಸ್‌ನಂತಹ ಸುಸಜ್ಜಿತ ಬಸ್‌ಗಳಲ್ಲಿ ಉಚಿತ ಯೋಜನೆ ಇಲ್ಲ. ಈ ಬಸ್‌ಗಳು ಅಂದಾಜು ಶೇ.೧೦ರಿಂದ ೧೫ ರಷ್ಟಿವೆ. ಇದನ್ನು ಹೊರತುಪಡಿಸಿ ಅಂದಾಜು ೪೦೦-೫೦೦ ಬಸ್‌ಗಳಲ್ಲಿ ಉಚಿತ ಪ್ರಯಾಣ ಜಾರಿಯಾಗಬಹುದು ಎಂಬುದಾಗಿ ಮಡಿಕೇರಿ ಕೆ.ಎಸ್.ಆರ್.ಟಿ.ಸಿ ಘಟಕದ ವ್ಯವಸ್ಥಾಪಕಿ ಗೀತಾ ಅವರು ‘ಶಕ್ತಿ’ಗೆ ವಿವರವಿತ್ತರು. ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ವೀರಾಜಪೇಟೆ, ಹೆಬ್ಬಾಲೆ ವಿಭಾಗ ಸೇರಿ ಜಿಲ್ಲೆ ಹಾಗೂ ಹೊರ ಜಿಲ್ಲಾ ಘಟಕಗಳಿಂದ ಬಸ್‌ಗಳು ಕಾರ್ಯಾಚರಿಸುತ್ತಿವೆ.
ಜಿಲ್ಲೆಯ ಮಡಿಕೇರಿ ಘಟಕದ ಅಂದಾಜಿನಿAದ ದಿನನಿತ್ಯ ೧೯ ರಿಂದ ೨೦ ಸಾವಿರದಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದು, ಸುಮಾರು ೧೧ ಲಕ್ಷ ಆದಾಯ ಬರುತ್ತಿದೆ. ಇದರಲ್ಲಿ ಇನ್ನು ಮುಂದೆಯಷ್ಟೆ ಮಹಿಳಾ ಪ್ರಯಾಣಿಕರ ಸಂಖ್ಯೆ ಸಿಗಬಹುದಾಗಿದ್ದು, ಆದಾಯ ವ್ಯತ್ಯಾಸವನ್ನು ಅರಿಯಬಹುದಾಗಿದೆ ಎಂಬುದು ಗೀತಾ ಅವರ ಅಭಿಪ್ರಾಯವಾಗಿದೆ.
ಖಾಸಗಿ ಬಸ್‌ನವರಿಗೆ ಆತಂಕ : ಜಿಲ್ಲೆಯಲ್ಲಿ ಪ್ರಸ್ತುತ ೧೩೦ ರಷ್ಟು ಖಾಸಗಿ ಬಸ್‌ಗಳು ಆಂತರಿಕವಾಗಿ ಸಂಚರಿಸುತ್ತಿವೆ. ಇದೀಗ ಕೆ.ಎಸ್.ಆರ್.ಟಿ.ಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಯಿಂದ ಖಾಸಗಿ ಬಸ್‌ನವರು ನಷ್ಟಕ್ಕೆ ಒಳಗಾಗುವ ಆತಂಕ ಎದುರಾಗಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ‘ಶಕ್ತಿ’ ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಶೇ. ೭೫ರಷ್ಟು ಭಾಗದಲ್ಲಿ ಪ್ರಸ್ತುತ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಸಂಚಾರವಿದೆ. ಆದರೆ, ಸೂಕ್ತ ಸಮಯಕ್ಕೆ ಇಲ್ಲ ಎಂಬುದು ಮಾತ್ರ ಖಾಸಗಿ ಬಸ್‌ನವರಿಗೆ ಒಂದಷ್ಟು ಪ್ರಯೋಜನವಾಗಿತ್ತು. ಇದೀಗ ಸಹಜವಾಗಿ ಮಹಿಳೆಯರು ಉಚಿತ ಪ್ರಯಾಣಕ್ಕೆ ಹೆಚ್ಚು ಆಸಕ್ತಿ ತೋರಲಿದ್ದಾರೆ. ಇದರಿಂದಾಗಿ ಅವರ ಕುಟುಂಬದ ಪುರುಷ ಸದಸ್ಯರೂ ಸಾರಿಗೆ ಸಂಸ್ಥೆಯತ್ತಲೇ ಚಿತ್ತ ಹರಿಸುವ ಸಾಧ್ಯತೆ ಹೆಚ್ಚಿದ್ದು ಖಾಸಗಿ ಬಸ್‌ಗಳು ನಷ್ಟ ಎದುರಿಸಬೇಕಾಗುತ್ತದೆ ಎಂಬ ಆತಂಕವಿರುವುದಾಗಿ ಅವರು ಹೇಳಿದರು.
ಹೊರ ಜಿಲ್ಲೆ ಪ್ರಯಾಣ ಸಮಸ್ಯೆ ಇರಲಿಕ್ಕಿಲ್ಲ : ಜಿಲ್ಲೆಯಿಂದ ಬೆಂಗಳೂರು-ಮAಗಳೂರಿನAತಹ ಕಡೆಗೆ ಹಲವು ಖಾಸಗಿ ಬಸ್‌ಗಳು-ಟ್ರಾವೆಲ್ಸ್ಗಳ ಸೇವೆ ಇದೆ. ಆದರೆ ಬಹುತೇಕ ಇಂತಹ ಬಸ್‌ಗಳಲ್ಲಿ ಪ್ರಯಾಣಿಸುವವರು ಕೆ.ಎಸ್.ಆರ್.ಟಿ.ಸಿಯ ಕೆಂಪು ಹಾಗೂ ಹಳದಿ ಬಸ್‌ಗಳಲ್ಲಿ ಪ್ರಯಾಣಿಸುವುದು ಕಡಿಮೆ. ಇದರಿಂದ ಇಂತ ಖಾಸಗಿ ಬಸ್‌ನವರಿಗೆ ಹೆಚ್ಚು ಸಮಸ್ಯೆಯಾಗಲಿಕ್ಕಿಲ್ಲ ಎಂದು ಗ್ರೀನ್‌ಲೈನ್ಸ್ ಟ್ರಾವೆಲ್ಸ್ನ ಚೆಯ್ಯಂಡ ಸತ್ಯ ಗಣಪತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಯಿಂದ ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿಣಾಮ ಎದುರಾಗಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.