ಸೋಮವಾರಪೇಟೆ, ಜೂ. ೧೧: ಜೆಸಿಐ ಸಂಸ್ಥೆಯ ವತಿಯಿಂದ ಸಲ್ಯೂಟ್ ದಿ ಸೈಲೆಂಟ್ ವರ್ಕರ್ ಪ್ರಶಸ್ತಿಯನ್ನು ೩೩ ವರ್ಷಗಳಿಂದ ಅಗ್ನಿಶಾಮಕ ದಳದಲ್ಲಿ ಅಸಿಸ್ಟೆಂಟ್ ಫಯರ್ ಸ್ಟೇಷನ್ ಆಫೀಸರ್ ಆಗಿ ಸೇವೆಗೈಯ್ಯುತ್ತಿರುವ ಪಿ.ಎಸ್. ಸುರೇಶ್ ಅವರಿಗೆ ನೀಡಲಾಯಿತು. ಈ ಸಂದರ್ಭ ಜೆಸಿಐ ಸಂಸ್ಥೆಯ ಅಧ್ಯಕ್ಷೆ ಎಂ.ಎ. ರುಬಿನ, ಪದಾಧಿಕಾರಿಗಳಾದ ಪ್ರಕಾಶ್, ಅಶೋಕ್, ಲಕ್ಷ್ಮೀಕುಮಾರ್, ಸುನೀತ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.