ಸೋಮವಾರಪೇಟೆ, ಜೂ. ೧೧: ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ಗ್ರಾಮದೇವತೆಯ ಪೂಜೆ ಶ್ರದ್ಧಾಭಕ್ತಿಯಿಂದ ಶುಕ್ರವಾರ ನಡೆಯಿತು. ಪ್ರಕೃತಿಯನ್ನು ಗ್ರಾಮದೇವತೆಯ ಹೆಸರಿನಲ್ಲಿ ಪೂಜೆ ಮಾಡುವುದು ತಲೆತಲಾಂತರದಿAದ ನಡೆದು ಬಂದಿರುವ ಧಾರ್ಮಿಕ ಆಚರಣೆಯಾಗಿದೆ ಎಂದು ಚನ್ನಾಪುರ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎನ್. ಅಶ್ವಥ್ ಹೇಳಿದರು.

ಪ್ರಕೃತಿಯೇ ರೈತರನ್ನು ಕಾಪಾಡುತ್ತಿದೆ. ಎಷ್ಟೇ ಮಳೆ ಸುರಿದು ಫಸಲು ಹಾನಿಯಾದರೂ, ಕುಟುಂಬ ನಿರ್ವಹಣೆಗಾಗುವಷ್ಟು ಫಸಲು ರೈತರಿಗೆ ಸಿಗುತ್ತದೆ. ಅದು ಗ್ರಾಮದೇವತೆಯ ಆಶೀರ್ವಾದ ಎಂದೇ ನಂಬಲಾಗಿದೆ ಎಂದು ಹೇಳಿದರು. ಗ್ರಾಮದಲ್ಲಿ ಯಾವುದೇ ತೊಂದರೆಗಳ ಸಂಭವಿಸಿದರೂ ಗ್ರಾಮದೇವತೆಯನ್ನೇ ನೆನೆಯುತ್ತೇವೆ. ಶುಭ ಕಾರ್ಯಗಳು ನಡೆದಾಗಲೂ ಪ್ರಕೃತಿ ಮಾತೆಯನ್ನು ನಮಿಸುವುದು ವಾಡಿಕೆಯಾಗಿದೆ ಎಂದರು.

ಗ್ರಾಮದ ಸಮೃದ್ಧಿಗಾಗಿ ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ ಅನ್ನದಾನ ನಡೆಯಿತು. ಸಮಿತಿ ಕಾರ್ಯದರ್ಶಿ ಸಿ.ಎಸ್. ವೀರೇಶ್, ಪದಾಧಿಕಾರಿಗಳಾದ ಸಿ.ಎನ್. ಅಶೋಕ್, ಪ್ರದೀಪ್‌ಗಾಂಧಿ, ಸಿ.ಎಸ್.ಉಮೇಶ್, ನಂದೀಶ್, ದೀಪಕ್ ಇದ್ದರು.