ಮಡಿಕೇರಿ, ಜೂ. ೯: ಅಖಿಲ ಕೊಡವ ಸಮಾಜದ ವತಿಯಿಂದ ತಾ. ೧೦ ರಂದು (ಇಂದು) ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಿದೆ. ಅಂದು ಬೆಳಿಗ್ಗೆ ೧೦.೩೦ಕ್ಕೆ ವೀರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವೀರಾಜಪೇಟೆ ವಿಧಾನಸಭಾ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಅಧ್ಯಾತ್ಮಿಕ ಸಾಧಕ ಶ್ರೀ ವಿವೇಕಾನಂದ ಶರಣ ಸ್ವಾಮಿ, ಜಾನಪದ ಕಲಾವಿದೆ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಹೆಸರಾಂತ ಹಿರಿಯ ಅಂರ್ರಾಷ್ಟಿçÃಯ ಅಥ್ಲೀಟ್ ಸಹೋದರರಾದ ಪಾಲೆಕಂಡ ಬೋಪಯ್ಯ ಮತ್ತು ಪಾಲೇಕಂಡ ಬೆಳ್ಳಿಯಪ್ಪ ಹಾಗೂ ಅಂರ್ರಾಷ್ಟಿçÃಯ ಮಾಸ್ಟರ್ಸ್ ಅಥ್ಲೀಟ್ ಮಾರಮಾಡ ಮಾಚಮ್ಮ ಅವರನ್ನು ಸನ್ಮಾನಿಸಲಾಗುವುದೆಂದು ತಿಳಿಸಿದೆ.