ಮಡಿಕೇರಿ, ಜೂ. ೯: ಕ್ಷೇತ್ರದ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ಧೃಡ ಸಂಕಲ್ಪವನ್ನು ಹೊಂದಿರುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ಗೌಡ ಭರವಸೆ ನೀಡಿದ್ದಾರೆ.
ಇಂದು ಜಿಲ್ಲಾ ಪಂಚಾಯಿತಿ ಭವನದಲ್ಲಿ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಜವಾಬ್ದಾರಿ ಹೊತ್ತುಕೊಂಡ ಅವರು ಕ್ಷೇತ್ರದ ಪ್ರತಿಯೊಬ್ಬ ನಾಗರಿಕನಿಗೆ ತನ್ನ ಸೇವೆ ಲಭ್ಯವಾಗಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು ಸದಾ ಜನರ ಸೇವೆಗೆ ಸಿದ್ಧನಿದ್ದೇನೆ ಎಂದು ತಿಳಿಸಿದರು. ಯಾರೂ ಕೂಡ ಸರ್ಕಾರಿ ಕಚೇರಿಯಲ್ಲಿ ತಮ್ಮ ಕೆಲಸಕ್ಕೆ ಲಂಚ ನೀಡುವ ಅಗತ್ಯವಿಲ್ಲ. ಯಾವುದೇ ಅಧಿಕಾರಿ ಅಥವಾ ನೌಕರ ಲಂಚಕ್ಕೆ ಬೇಡಿಕೆ ಇಟ್ಟಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯ ಸಂದೇಶ ನೀಡಿದರು.
ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾ ವಕ್ತಾರ ತೆನ್ನೀರಾ ಮೈನಾ, ಕೆಪಿಸಿಸಿ ಸದಸ್ಯರಾದ ಯಾಕುಬ್, ಹೆಚ್.ಎಂ. ನಂದಕುಮಾರ್, ಮಂಜುನಾಥ್ ಗುಂಡೂರಾವ್, ಬೇಕಲ್ ರಮಾನಾಥ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಸತೀಶ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮುಖಂಡರಾದ ಕೆ.ಎಂ.ಲೋಕೇಶ್, ಸುಜುತಿಮ್ಮಯ್ಯ, ಎಸ್.ಎಂ. ಚಂಗಪ್ಪ ವಿ.ಪಿ.ಸುರೇಶ್, ಅಬ್ದುಲ್ರಜಾಕ್, ಪುಲಿಯಂಡ ಜಗದೀಶ್, ಕಾವೇರಮ್ಮ ಸೋಮಣ್ಣ, ಚುಮ್ಮಿ ದೇವಯ್ಯ, ಪ್ರಕಾಶ್ ಆಚಾರ್ಯ, ತಾರಾಅಯ್ಯಮ್ಮ, ಕಟ್ರತನ ವೆಂಕಟೇಶ್, ಮಂಡಿರ ಸದಾಮುದ್ದಪ್ಪ, ಜುಲೇಕಾಬಿ, ಲಾರೆನ್ಸ್, ಜಯೇಂದ್ರ, ಉದಯ್ಕುಮಾರ್, ಪ್ರಭು ರೈ, ಜೆ.ಸಿ. ಜಗದೀಶ್, ರವೂಫ್ ಶೇಕ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
v