ಸುಂಟಿಕೊಪ್ಪ, ಜೂ. ೧೦: ಮಧುರಮ್ಮ ಬಡಾವಣೆಯ ರಘು ಅವರ ತೋಟದಲ್ಲಿ ನೆಲೆನಿಂತ ಮುನೀಶ್ವರ ದೇವರ ಹಾಗೂ ಗುಳಿಗ ದೈವದ ೧೫ನೇ ವಾರ್ಷಿಕೋತ್ಸವ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಬೆಳಿಗ್ಗೆ ೭.೩೦ ಗಂಟೆಗೆ ಮುನೀಶ್ವರ ದೇವರಿಗೆ ಪೂಜೆ ನಡೆದ ನಂತರ ಗುಳಿಗ ದೈವದ ಅಗೇಲು ಸೇವೆ ನಡೆಯಿತು. ಮಹಾ ಮಂಗಳಾರತಿಯ ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಸುಂಟಿಕೊಪ್ಪ ಸೇರಿದಂತೆ ಎಮ್ಮೆಗುಂಡಿ, ಐಗೂರು, ಗದ್ದೆಹಳ್ಳ ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು ದೈವದ ಕೃಪೆಗೆ ಭಯಭಕ್ತಿಯಿಂದ ಪಾಲ್ಗೊಂಡು ತಮ್ಮ ಪ್ರಾರ್ಥನೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿಕೊಂಡರು. ಈ ಸಂದರ್ಭ ರಘು ಹಾಗೂ ಕುಟುಂಬಸ್ಥರು ಹಾಜರಿದ್ದರು.