ಭಯ ಪಡದಂತೆ ಅಧಿಕಾರಿಗಳ ಅಭಯ

ಸುಂಟಿಕೊಪ್ಪ, ಜೂ. ೧೦: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಳೆದ ೨೫ ದಿನಗಳಿಂದ ನಿವಾಸಿಗಳಲ್ಲಿ ಜ್ವರ, ಶೀತ ಕೆಮ್ಮು ಲಕ್ಷಣದೊಂದಿಗೆ ಡೆಂಗ್ಯೂವಿನಿAದÀ ಜನತೆಯು ಬಳಲುತ್ತಿದ್ದಾರೆ. ಸಂಬAಧಿಸಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಆರೋಗ್ಯ ಇಲಾಖೆ ಈ ರೋಗವನ್ನು ನಿಯಂತ್ರಣಕ್ಕೆ ಮುಂದಾಗದಿರುವ ಬಗ್ಗೆ ಸಾರ್ವಜನಿಕರು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಇಲ್ಲಿನ ನಿವಾಸಿಗಳಲ್ಲಿ ಬಾಧಿಸುತ್ತಿದ್ದು ಡೆಂಗ್ಯೂ ಪ್ರಕರಣಗಳಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿಕೊಂಡಿದ್ದಾರೆ ಸಂಬAಧಿಸಿದ ಇಲಾಖೆಯವರು ರೋಗವನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೆಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಸುಂಟಿಕೊಪ್ಪಕ್ಕೆ ಭೇಟಿ ನೀಡಿದ ಸಂದರ್ಭ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಾರ್ವಜನಿಕರು ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಕಳೆದ ೨೦ -೨೫ ದಿನಗಳಿಂದ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ನಿರಂತರವಾಗಿ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ನಾನು ಸೇರಿದಂತೆ ತಾಲೂಕು ಆರೋಗ್ಯ ಅಧಿಕಾರಿ ಮತ್ತು ಜಿಲ್ಲೆಯ ಮತ್ತು ತಾಲೂಕಿನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಆಶಾ ಕಾರ್ಯಕರ್ತೆಯರ ಮೂಲಕ ವಿವಿಧ ಬಡಾವಣೆಗಳಿಗೆ ತೆರಳಿ ಮನೆಯ ನೀರು ತುಂಬಿಸಿರುವ ಡ್ರಂ, ಪಾತ್ರೆಗಳನ್ನು ಪರಿಶೀಲಿನೆ ನಡೆಸಿದ್ದೇವೆ. ಆರೋಗ್ಯ ಶಿಕ್ಷಣ ಕಾರ್ಯಕ್ರಮ ಹಾಗೂ ಸ್ವಚ್ಛತೆಯ ಮನೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳನ್ನು ಪರಿಶೀಲಿಸಿ ಟೈಯರ್, ತೆಂಗಿನ ಚಿಪ್ಪಿ ಹಾಗೂ ಗುಂಡಿಗಳಲ್ಲಿ ನೀರು ಶೇಖರಣೆಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಇನ್ನಷ್ಟು ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಮುಖ್ಯವೆಂದು ಹೇಳಿದ್ದಾರೆ.

ಈಗಾಗಲೇ ನಿತ್ಯವು ವರದಿಯಾಗುತ್ತಿದ್ದ ಪ್ರಕರಣಗಳು ವಾರದಲ್ಲಿ ಒಂದು ಎರಡಕ್ಕೆ ಇಳಿದಿರುವುದನ್ನು ಗಮನಿಸಬಹುದಾಗಿದೆ. ಜನರು ಆತಂಕಕ್ಕೆ ಒಳಗಾಗಬಾರದು ಎಂದು ಅವರು ಮನವಿ ಮಾಡಿದರು.

ಈಗಾಗಲೇ ವರದಿಯಾಗಿರುವಂತೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದರೂ ಆರೋಗ್ಯ ಇಲಾಖೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಕೇವಲ ತಾಲೂಕು ಮಟ್ಟದ ಜಿಲ್ಲಾಮಟ್ಟದ ವೈದ್ಯಾಧಿ ಕಾರಿಗಳ ಭೇಟಿ ಮತ್ತು ಹೇಳಿಕೆಯಿಂದ ಸಮಸ್ಯೆ ಇತ್ಯರ್ಥವಾಗುವುದಿಲ್ಲ ಈ ಬಗ್ಗೆ ತುರ್ತು ಕ್ರಮಕೈಗೊಳ್ಳುವ ಮೂಲಕ ಜನರ ಆತಂಕವನ್ನು ದೂರ ಮಾಡಬೇಕೆಂದು ಜನರ ಆಕ್ರೋಶಭರಿತ ನುಡಿಯಾಗಿದೆ.

ಜಾಗೃತಿ ಮೂಡಿಸುವ ಸಂದರ್ಭ ತಾಲೂಕು ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್, ಸುಂಟಿಕೊಪ್ಪ ಪ್ರಾಥಮಿಕ ವೈದ್ಯಾಧಿಕಾರಿ ಡಾ. ಪ್ರಗತಿ, ಬಿಹೆಚ್‌ಇಓ (ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ) ಹೆಚ್.ಕೆ. ಶಾಂತಿ, ಹೆಲ್ತ್ ಇನ್ಸ್ಪೆಕ್ಟರ್‌ಗಳಾದ ಶೀನಿವಾಸ್, ಮುತ್ತುರಾಜ್, ಜನಾರ್ಧನ, ವಿಶ್ವಜ್ಞ, ಆರೋಗ್ಯ ಕಾರ್ಯಕರ್ತೆಯರು, ಸುಗಮಕಾರರು ಜ್ಯೋತಿ ಭಾಸ್ಕರ್ ಹಾಗೂ ಆಶಾ ಕಾರ್ಯಕರ್ತೆಯರು, ಇದ್ದರು.