ಮಡಿಕೇರಿ, ಜೂ. ೯: ಕೊಡವ ಕೂಟಾಳಿಯಡ ಕೂಟ ಸಂಘಟನೆಯ ವತಿಯಿಂದ ಕೊಡವ ಮಕ್ಕಳಿಗಾಗಿ ಮೂರನೇ ವರ್ಷದ "ಕೊಡಗ್'ರ ಚುಪ್ಪಿ ಕೋಗಿಲೆಯ" ಎಂಬ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
೧೫ ವರ್ಷದೊಳಗಿನ ಕೊಡವ ಮಕ್ಕಳು ಯಾವುದೇ ಮ್ಯೂಸಿಕ್, ಕರೋಕೆ, ಆ್ಯಪ್ ಬಳಸದೇ ೩ ನಿಮಿಷದ ಒಳಗೆ ಹಾಡಿದ ಕೊಡವ ಭಾಷೆಯ ಹಾಡನ್ನು ತಾ. ೨೫ ರೊಳಗಾಗಿ ೯೯೭೨೫೩೮೦೩೦ ಈ ವಾಟ್ಸಪ್ ಸಂಖ್ಯೆಗೆ ಕಳಿಸಬೇಕು.
ಎರಡು ಸುತ್ತಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬಿರುದು ಹಾಗೂ ಪ್ರಥಮ ದ್ವಿತೀಯ ತೃತೀಯ ಸ್ಥಾನ ವಿಜೇತರಿಗೆ ನಗದು ಬಹುಮಾನ ಮತ್ತು ಎರಡನೇ ಸುತ್ತಿನಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಘಟನೆಯ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್ ೯೬೬೩೨೬೭೨೪೯, ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ೯೯೭೨೫೩೮೦೩೦ ಸಂಪರ್ಕಿಸಬಹುದು ಎಂದು ಕೂಟದ ಪ್ರಕಟಣೆ ತಿಳಿಸಿದೆ.