ವಿರಾಜಪೇಟೆ, ಜೂ. ೧೦: ಕ್ಷೇತ್ರದ ಜನರು ನನ್ನ ಮೇಲೆ ವಿಶ್ವಾಸ ಇಟ್ಟು ನನ್ನನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದಾರೆ. ಜಾತಿ ಜನಾಂಗ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳು ತ್ತೇನೆ ಎಂದು ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಹೇಳಿದರು.

ವೀರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋ ಜಿಸಲಾಗಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸ ಮಾತನಾಡಿ, ಅಖಿಲ ಕೊಡವ ಸಮಾಜ ಹಾಗೂ ಫೆಡರೇಷನ್ ಆಫ್ ಕೊಡವ ಸಮಾಜಕ್ಕೆ ತನ್ನದೆ ಆದ ಜವಾಬ್ದಾರಿ ಇದೆ. ಕೊಡವರ ಆಚಾರ, ವಿಚಾರ, ಸಂಸ್ಕೃತಿ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೇಂದ್ರ ಆಗಬೇಕು.

ಬಾಳುಗೋಡುವಿನಲ್ಲಿರುವ ಫೆಡ ರೇಷನ್ ಆಫ್ ಕೊಡವ ಸಮಾಜದಲ್ಲಿ ಕೇವಲ ಮದುವೆ ಇನ್ನಿತರ ಚಟುವಟಿ ಕೆಗಳಿಗೆ ಸೀಮಿತವಾಗಿರುವುದು ಸರಿಯಲ್ಲ. ಸೂಕ್ತ ಸ್ಥಳಾವಕಾಶ ಇರುವುದರಿಂದ ಟರ್ಫ್ ಹಾಕಿ ಮೈದಾನ ಹಾಗು ಸಿಂಥೆಟಿಕ್ ಟ್ರಾಕ್‌ಗಳನ್ನು ನಿರ್ಮಾಣ ಮಾಡಿ ಕೌಟುಂಬಿಕ ಹಾಕಿ ಪಂದ್ಯಾಟಗಳು ಒಂದು ಜಾಗದಲ್ಲಿ ನಡೆದರೆ ಉತ್ತಮ. ಈ ಹಿನ್ನೆಲೆ ಸರ್ಕಾರದಿಂದ ಆಗುವ ಕೆಲಸಕ್ಕೆ ನಾನು ಸ್ಪಂದಿಸುತ್ತೇನೆ ಎಂದು ಹೇಳಿದರು.

ಚುನಾವಣಾ ಫಲಿತಾಂಶ ಬಂದ ಮರು ದಿನದಿಂದಲೆ ನನ್ನ ಜನಸೇವಾ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಇಲ್ಲಿನ ಅಧಿಕಾರಿ ವರ್ಗದವರು ಅವರದೆ ಆದ ನಿಯಮವನ್ನು ಪಾಲಿಸುತ್ತಿದ್ದಾರೆ. ಆ ನಿಯಮವನ್ನು ತೆಗೆದು ಹಾಕಿ ಭ್ರಷ್ಠಾಚಾರ ಮುಕ್ತ ತಾಲೂಕಾಗಿ ಪರಿವರ್ತಿಸುವುದೆ ನನ್ನ ಗುರಿಯಾ ಗಿದೆ. ಸಾರ್ವಜನಿಕರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಗಳಿಗೆ ನಿರ್ಭೀತಿಯಿಂದ ತೆರಳುವಂತಾ ಗಬೇಕು. ಅಧಿಕಾರಿಗಳು ಕೂಡ ಜನರ ಸೇವಕರೇ ಎಂದು ಹೇಳಿದರು.

ಕೋವಿ ಹಕ್ಕು ವಿಚಾರದಲ್ಲಿ ವಿನಾಕಾರಣ ಗೊಂದಲ ಸರಿಯಲ್ಲ. ನನ್ನ ಮುಂದಾಳತ್ವದಲ್ಲಿಯೇ ಇತರ ವಕೀಲರುಗಳೊಂದಿಗೆ ಸೇರಿ ಪ್ರಾಮಾ ಣಿಕವಾಗಿ ವಾದ ಮಂಡಿಸಿದ್ದೇನೆ ಆದರೆ ಕೆಲವರು ವಿನಾಕಾರಣ ನಾನು ಕೋವಿಯ ಹಕ್ಕು ವಿಚಾರದಲ್ಲಿ ವಾದ ಮಂಡಿಸಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ವೈಯಕ್ತಿಕ ತೇಜೋವಧೆಯಾಗಿದ್ದು, ಇದನ್ನು ಸಹಿಸುವುದಿಲ್ಲ. ಮತ್ತೊಬ್ಬರನ್ನು ತೇಜೋವಧೆ ಮಾಡುವುದು ನನ್ನ ಸಂಸ್ಕೃತಿ ಅಲ್ಲ ಎಂದರು.

ಪದ್ಮಶ್ರೀ ಪುರಸ್ಕೃತೆ, ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಲೆ ಸಾಹಿತ್ಯ ಹಾಗೂ ಸಮಾಜ ಸೇವೆಗೆ ಸಂದ ಗೌರವವಾಗಿದೆ. ನನ್ನ ಕೊನೆಯ ಉಸಿರು ಇರುವವರೆಗೂ ಕಲೆಯನ್ನು ಬಿಡುವುದಿಲ್ಲ ಎಂದರು.

ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ, ೧೯೪೨ರಲ್ಲಿ ಪ್ರಾರಂಭಗೊAಡ ಅಖಿಲ ಕೊಡವ ಸಮಾಜ ಅಂದಿನಿAದ ಇಂದಿನವರೆಗೆ ಹಲವಾರು ಜನಪರ ಕಾರ್ಯಕ್ರಮ ಗಳಲ್ಲಿ ತೊಡಸಿಕೊಂಡಿದೆ. ಕೊಡವ ರಿಗೆ ನೀಡಬೇಕಾದ ಬುಡಕಟ್ಟು ಸ್ಥಾನ ಮಾನ ದೊರೆತ್ತಿಲ್ಲ. ಕೊಡವರ ಶೇ.೮೦ ರಷ್ಟು ಕುಟುಂಬಗಳ ಆರ್ಥಿಕ ಸ್ಥಿತಿ ಸಮತೋಲನದಲ್ಲಿಲ್ಲ. ಕೊಡವರ ಅಭಿ ವೃದ್ದಿಗೆ ಅಖಿಲ ಕೊಡವ ಸಮಾಜ ಕಟಿಬದ್ದವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವೀರಾಜ ಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ, ಜಾನಪದ ಕಲಾವಿದೆ ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿ ಮಾಚಯ್ಯ, ಅಂತರಾಷ್ಟಿçÃಯ ಅಥ್ಲೆಟಿ ಕ್ಸ್ಗಳಾದ ಮಾರಮಾಡ ಮಾಚಮ್ಮ, ಪಾಲೇಕಂಡ ಬೋಪಯ್ಯ, ಪಾಲೇಕಂಡ ಬೆಳ್ಳಿಯಪ್ಪ ಅವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ, ಗೌರವ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಖಜಾಂಚಿ ಮಂಡೇಪAಡ ಸುಗುಣ ಮುತ್ತಣ್ಣ, ಜಂಟಿ ಕಾರ್ಯದರ್ಶಿ ನಂದೇಟಿರ ರಾಜ, ಯೂತ್‌ವಿಂಗ್ ಅಧ್ಯಕ್ಷ ಚಮ್ಮಟಿರ ಪ್ರವೀಣ್ ಉತ್ತಪ್ಪ, ಪೊಮ್ಮಕ್ಕಡ ಪರಿಷತ್ ಉಪಾಧ್ಯಕ್ಷೆ ಮಳವಂಡ ಪ್ರವಿ ಮುತ್ತಪ್ಪ, ಕಾರ್ಯ ದರ್ಶಿ ಮಂಡೇಪAಡ ಗೀತಾ ಮಂದಣ್ಣ, ದೇಶತಕ್ಕ ಬೊಳ್ಳೆರ ಸುಮನ್ ಮತ್ತಿತರರು ಉಪಸ್ಥಿತರಿದ್ದರು.

ವೀರಾಜಪೇಟೆ ಕೊಡವ ಸಮಾಜ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ ಸ್ವಾಗತಿಸಿ, ಮಂಡೇಪAಡ ಸುಗುಣ ಮುತ್ತಣ್ಣ ವಂದಿಸಿದರು.