ಸಿದ್ದಾಪುರ, ಜೂ. ೯ : ಅಂಗನವಾಡಿ ಕಾರ್ಯಕರ್ತೆ ಮೇಲೆ ಕಾಡಾನೆ ದಾಳಿ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಬಾಡಗ ಬಾಣಂಗಾಲದಲ್ಲಿ ನಡೆದಿದೆ.
ಬಾಡಗ ಬಾಣಂಗಾಲದ ಅಂಗನವಾಡಿ ಕಾರ್ಯಕರ್ತೆ ಲಕ್ಷಿö್ಮ ಸಭೆಯ ನಿಮಿತ್ತ ಪೊನ್ನಂಪೇಟೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಿಬಿಟಿಸಿ ಕಾಫಿ ತೋಟದಿಂದ ದಿಢೀರನೆ ಕಾಡಾನೆ ಪ್ರತ್ಯಕ್ಷಗೊಂಡಿದ್ದು ಗಾಬರಿಗೊಂಡ ಲಕ್ಷಿö್ಮ ಸ್ಥಳದಿಂದ ಓಡಿದ್ದಾರೆ. ಓಡುವಾಗ ಬಿದ್ದು ಕೈ ಮತ್ತು ಕಾಲಿಗೆ ಗಂಭೀರ ಗಾಯವಾಗಿದೆ. ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು ತಿತಿಮತಿ ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.