ಮಡಿಕೇರಿ: ಸೇವೆಗಾಗಿ ಬಾಳು, ಹಸಿರೆ ಉಸಿರು, ಕಡಿದರೆ ಮರ ಬರುವುದು ಬರ ಎಂಬ ಹೇಳಿಕೆಯನ್ನು ಸಾರುತ್ತಾ ಭಾರತ ಸೇವಾದಳ ಶಾಖೆಯ ವಿದ್ಯಾರ್ಥಿನಿಯರು ಗುಂಡಿ ತೆಗೆದು ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಸರಕಾರಿ ಪದವಿಪೂರ್ವ ಪ್ರೌಢಶಾಲೆಯಲ್ಲಿ ಆಚರಿಸಿದರು.

ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಮೋಂತಿ ಗಣೇಶ್, ನಗರಸಭೆ ಅಧ್ಯಕ್ಷ ಅನಿತಾ ಪೂವಯ್ಯ, ಪ್ರಾಂಶುಪಾಲೆ ನಳಿನಿ ಪಿ.ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಜಿಲ್ಲಾ ಸಂಘಟಕ ರೇವಣ್ಣ ಜಿ.ಈ. ಮತ್ತು ಶಾಖಾ ನಾಯಕಿ ಮಂದಾಕಿನಿ ಬಿ.ಪಿ. ಶಿಕ್ಷಕರಾದ ಐರೀನ್ ಉಷಾ, ಜಾನೇಟ್, ಶ್ರೀನಿವಾಸ್, ಲೀನಾ ಸುಮಿತ್, ರೋಜ್, ಸೌಮ್ಯ, ಎಂ.ಡಿ. ಸುಜಾತ, ಚಂದ್ರಿಕಾ ಮತ್ತು ಮಕ್ಕಳು ಹಾಜರಿದ್ದರು.

ವೀರಾಜಪೇಟೆ ಎನ್.ಎಸ್.ಎಸ್. ಘಟಕವೀರಾಜಪೇಟೆ: ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ ಎಂದು ವೀರಾಜಪೇಟೆಯ ಸಹಾಯಕ ಕೃಷಿ ಉಪನಿರ್ದೇಶಕ ಶಿವಮೂರ್ತಿ ಪಿ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಪರಿಸರ ದಿನದ ಪ್ರಯುಕ್ತ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಗಿಡ ನೆಡುವುದರ ಮೂಲಕ ಜಾಗೃತಿ ಮೂಡಿಸಿ ಮಾತನಾಡಿ, ವಿದ್ಯಾರ್ಥಿಗಳು ಈಗಿನಿಂದಲೇ ಪರಿಸರ ಸಂರಕ್ಷಣಾ ಜಾಗೃತಿ ಹೊಂದಿರಬೇಕೆAದು ಕರೆ ನೀಡಿದರು.

ಸಹಾಯಕ ಧರ್ಮಗುರು ಫಾ. ಯೇಸು ಪ್ರಸಾದ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪರಿಸರ ದಿನಾಚರಣೆ ಕುರಿತು ಮಾತನಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪರಿಸರವಾದಿಗಳಾದ ಅಭಿಷೇಕ್ ಉತ್ತಪ್ಪ ಕೊಡಗು ಜಿಲ್ಲೆಯಲ್ಲಿ ಹವಾಮಾನ ಬದಲಾವಣೆ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಅರಣ್ಯವನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕು ಎಂದರಲ್ಲದೆ ನಗರೀಕರಣ, ಕೈಗಾರೀಕರಣವು ಪರಿಸರದ ಮೇಲೆ ಉಂಟು ಮಾಡುವ ದುಷ್ಪರಿಣಾಮವನ್ನು ತಡೆಗಟ್ಟಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿದರು. ಕಾಲೇಜಿನ ಎನ್.ಎಸ್‌ಎಸ್ ಅಧಿಕಾರಿ ಅರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಗೂ ನೇಚರ್ ಕ್ಲಬ್‌ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬೇಳೂರಿನಲ್ಲಿ ಬೀಜ ಬಿತ್ತನೆಸೋಮವಾರಪೇಟೆ: ಸಮೀಪದ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಬೇಳೂರು ಶಾಲೆಯ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ವಿವಿಧ ಜಾತೀಯ ಸಸ್ಯಗಳ ಬೀಜವನ್ನು ಬಿತ್ತನೆ ಮಾಡಲಾಯಿತು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಸ್ಯಗಳ ಬೀಜಗಳನ್ನು ಅರಣ್ಯ ಪ್ರದೇಶದಲ್ಲಿ ಬಿತ್ತನೆ ಮಾಡಿದರು. ಇದೇ ಸಂದರ್ಭ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಡಿಆರ್‌ಎಫ್‌ಓ ನಾರಾಯಣ ಮೂಲ್ಯ, ಸಿಬ್ಬಂದಿಗಳಾದ ಚೇತನ್, ವಿಜಯ್, ವಾಸು, ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪೊನ್ನಂಪೇಟೆ ನ್ಯಾಯಾಲಯಪೊನ್ನಂಪೇಟೆ: ಇತ್ತೀಚೆಗೆ ಪೊನ್ನಂಪೇಟೆ ನ್ಯಾಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನ್ಯಾಯಾಧೀಶೆ ಕೆ.ಎಸ್. ಆಶಾ ಅವರು ಗಿಡಕ್ಕೆ ನೀರು ಹಾಕುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಪರಿಸರದ ಪ್ರಯೋಜನ ಮತ್ತು ಪರಿಸರ ರಕ್ಷಿಸುವಲ್ಲಿ ನಮ್ಮ ಕರ್ತವ್ಯದ ಬಗ್ಗೆ ತಿಳಿಸಿದರು. ನಮ್ಮ ದೈನಂದಿನ ಜೀವನದೊಂದಿಗೆ ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ವಿವರಿಸಿದರು. ವಕೀಲರ ಸಂಘದ ಅಧ್ಯಕ್ಷ ಕಳಕಂಡ ಡಿ. ಮುತ್ತಪ್ಪ ಮಾತನಾಡಿ, ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಪ್ರತಿಯೊಬ್ಬರು ಪರಿಸರದ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸೈನಿಕರಂತೆ ಹೋರಾಡಬೇಕಾಗಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸರಕಾರಿ ಅಭಿಯೋಜಕರು, ಸರಕಾರಿ ವಕೀಲೆ ಅನಿತ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು, ವಕೀಲರು, ಕಕ್ಷಿದಾರರು, ಆರಕ್ಷಕರು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಹಾಜರಿದ್ದರು. ಮತ್ರಂಡ ಪೂವಣ್ಣ ನಿರೂಪಿಸಿ, ಕಾರ್ಯದರ್ಶಿ ಮೋನಿ ಪೊನ್ನಪ್ಪ ವಂದಿಸಿದರು. ನಂತರ ನ್ಯಾಯಾಲಯದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.