ಸೋಮವಾರಪೇಟೆ, ಜೂ. ೧೦: ಜೇನು ಕುರುಬ ಯುವ ಸೇವಾ ಸಮಿತಿ ಜಿಲ್ಲಾಧ್ಯಕ್ಷರಾಗಿ ಬಿ.ಕೆ. ಧರ್ಮಪ್ಪ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಜೆ.ಎ. ಪ್ರಶಾಂತ್ ಆಯ್ಕೆಯಾದರು.

ಜಿಲ್ಲಾ ಜೇನು ಕುರುಬ

ಯುವ ಸೇವಾ ಸಮಿತಿ ಸಭೆ ಮೀನುಕೊಲ್ಲಿ ಹಾಡಿಯಲ್ಲಿ ಹಾಡಿಯ ಅಧ್ಯಕ್ಷ ಜೆ.ಟಿ. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದು, ನೂತನ ಜಿಲ್ಲಾ ಸಮಿತಿ ರಚಿಸಲಾಯಿತು.

ಸಮಿತಿಯ ಉಪಾಧ್ಯಕ್ಷರಾಗಿ ಜೆ.ಎ. ಸೋಮಯ್ಯ, ಸಮಿತಿ ಸದಸ್ಯರಾಗಿ ಜೆ.ಟಿ. ಮಣಿ, ಜೆ.ಎಲ್. ರಮೇಶ, ಜೆ.ಕೆ. ನಿತಿನ್, ಜೆ.ಎಸ್. ಪಾಪಣ್ಣ, ಜೆ.ಎ. ರಮೇಶ, ಜೆ.ಎಲ್. ವಸಂತ, ಜೆ.ಎಂ. ಆನಂದ, ಜೆ.ಟಿ. ಕಮಲಾಕ್ಷಿ, ಜೆ.ಆರ್. ಸರಸ್ವತಿ, ಜೆ.ಕೆ. ಸೊಮಕ್ಕ ಅವರುಗ ಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸೋಮವಾರಪೇಟೆ ತಾಲೂಕು ಜೇನು ಕುರುಬ ಯುವ ಸೇವಾ ಸಮಿತಿ ಅಧ್ಯಕ್ಷ ಜೆ.ಎ. ಶ್ಯಾಮ್ ಮತ್ತು ಜಿಲ್ಲೆಯ ೪೮ ಹಾಡಿಗಳ ಸದಸ್ಯರು ಪಾಲ್ಗೊಂಡಿದ್ದರು.