ಬೆಂಗಳೂರು, ಜೂ. ೯: ಕಳೆದ ಕೆಲ ದಿನಗಳಿಂದ ಸಾಮಾಜಿಕ ತಾಣಗಳಲ್ಲಿ ಅತೀ ಹೆಚ್ಚು ಶೇರ್ ಆದ ವಿಷಯವೆಂದರೆ ಒಡಿಸಾ ರಾಜ್ಯದಲ್ಲಿ ನಡೆದ ರೈಲು ಅಪಘಾತದ ಸುದ್ದಿ. ಈ ಅಪಘಾತದಲ್ಲಿ ಮುನ್ನೂರಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದು ಇದು ಇತ್ತೀಚಿನ ವರ್ಷಗಳಲ್ಲಿ ವರದಿಯಾಗಿರುವ ಅತೀ ದೊಡ್ಡ ಅಪಘಾತವೇ ಹೌದು.
ಈ ಅಪಘಾತದಲ್ಲಿ ಕೂಡ ಸ್ಷೇಷನ್ ಮಾಸ್ಟರ್ ನಾಪತ್ತೆ ಆಗಿದ್ದಾನೆ ಎಂಬ ಸುಳ್ಳನ್ನು ಹರಿಬಿಟ್ಟು ಕೋಮು ದ್ವೇಷ ಸೃಷ್ಟಿಸುವ ಪ್ರಯತ್ನವೂ ನಡೆಯಿತು. ತುಮಕೂರಿನಲ್ಲಿ ಮಹಿಳೆಯೊಬ್ಬರು ಪೊಲೀಸ್ ವಿಚಾರಣೆಯನ್ನೂ ಎದುರಿಸಿದರು. ಕೇಂದ್ರವು ಈ ಅಪಘಾತದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದೆ. ಈ ಅಪಘಾತದ ಕುರಿತು ಪತ್ರಿಕೆಗಳಲ್ಲಿ ಇಂಟರ್ ಲಾಕಿಂಗ್ ಪದ ವ್ಯಾಪಕವಾಗಿ ಬಳಕೆ ಆಗುತ್ತಿದೆ. ಒಬ್ಬೊಬ್ಬರು ಒಂದೊAದು ರೀತಿಯಲ್ಲಿ ಇದರ ಬಗ್ಗೆ ವಿವರಣೆ ಕೊಡುತ್ತಿದ್ದಾರೆ. ಅದು ಒಟ್ಟಾಗಿ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಹಾಗಾದರೆ ಏನಿದು ...?? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇಲೆಕ್ಟಾçನಿಕ್ ಇಂಟರ್ ಲಾಕಿಂಗ್ ಸಿಸ್ಟಮ್ ಇದು ಬಹು ಮಾರ್ಗಗಳ ರೈಲ್ವೇ ನಿಲ್ದಾಣಗಳಲ್ಲಿ ರೈಲುಗಳ ಸುರಕ್ಷಿತ ಸಂಚಾರಕ್ಕಾಗಿ ಮಾಡಲಾಗಿರುವ ಒಂದು ಸಂಪೂರ್ಣ ಕಂಪ್ಯೂಟರೀಕೃತ ಆಟೋಮೇಷನ್ ಸಿಸ್ಟಮ್. ಇಲ್ಲಿ ಯಾವ ಮಾರ್ಗದಲ್ಲಿ ಯಾವ ರೈಲು ಹೋಗಬೇಕು, ಯಾವ ಮಾರ್ಗದ ರೈಲು ಹಾದು ಹೋಗಲು ಹಸಿರು ನಿಶಾನೆ ತೋರಬೇಕೆಂಬುದನ್ನು ಕಂಪ್ಯೂಟರಿನಲ್ಲಿ ಬರೆಯಲಾಗಿರುವ ಲಾಜಿಕ್ ಪ್ರೋಗ್ರಾಮ್‌ಗಳು ಹೊರಗಿನಿಂದ ಬರುವ ಸೆನ್ಸರ್ ಸಂಕೇತಗಳನ್ನು ನಿರ್ಧರಿಸಿ ತೀರ್ಮಾನಿಸುತ್ತೆ.
ಉದಾಹರಣೆಗೆ ನಿಲ್ದಾಣಕ್ಕೆ ಬರುವ ಮುಖ್ಯ ಹಳಿ ನಂತರ ಮೇನ್ ಹಳಿ ಮತ್ತು ಲೂಪ್ ಹಳಿಗಳಾಗಿ ವಿಂಗಡಿನೆಯಾಗುತ್ತೆ. ಇಲ್ಲಿ ರೈಲನ್ನು ಮೇನ್ ಹಳಿಯಲ್ಲಿ ಸಾಗಲು ಅಥವಾ ಲೂಪ್ ಲೈನಿನಲ್ಲಿ ಸಾಗುವ ಹಾಗೆ ಮಾಡೋಕೆ ಒಂದು ಹಳಿ ಬದಲಾವಣೆ ವ್ಯವಸ್ಥೆ ಇರುತ್ತೆ. ಆ ಹಳಿ ಬದಲಾವಣೆ ವ್ಯವಸ್ಥೆ ಕೂಡ ಕಂಟ್ರೋಲ್ ರೂಮಿನಿಂದಲೇ ಮಾಡಬೇಕಾಗಿದೆ. ಅದರ ಸಂಪೂರ್ಣ ಜವಾಬ್ದಾರಿ ಅಲ್ಲಿನ ರೈಲ್ವೆ ಸ್ಟೇಷನ್ ಮಾಸ್ತರಿಗೆ ಸೇರಿದ್ದು. ಇನ್ನು ಹಳಿಯನ್ನು ಯಾವ ಮಾರ್ಗಕ್ಕೆ ತಿರುಗಿಸಲಾಗಿದೆ ಎನ್ನುವುದನ್ನು ಹಳಿಯ ಬಳಿ ಅಳವಡಿಸಿ ರುವ ಸೆನ್ಸಾರ್‌ಗಳು ಮುಖ್ಯ ಕಂಪ್ಯೂಟರಿಗೆ ತಿಳಿಸುತ್ತವೆ. ಸೆನ್ಸಾರ್‌ಗಳನ್ನು ಕೇಬಲ್‌ಗಳ ಮುಖಾಂತರ ಮುಖ್ಯ ಕಂಪ್ಯೂಟರ್‌ಗೆ ಸಂಪರ್ಕಿಸ ಲಾಗಿರುತ್ತದೆ. ಹಾಗೆಯೆ ಸಿಗ್ನಲ್ ದೀಪಗಳನ್ನು ಕೂಡ ನಿಯಂತ್ರಿಸುವುದು ಮುಖ್ಯ ಕಂಪ್ಯೂಟರಿನ ಕೆಲಸ.
ಮುಖ್ಯ ಕಂಪ್ಯೂಟರಿ ನಲ್ಲಿ ಲಾಜಿಕ್ ಪ್ರೋಗ್ರಾಮ ಗಳನ್ನು ಬರೆದಿರುತ್ತಾರೆ. ಹೇಗೆಂದರೆ ಹಳಿಯನ್ನು ಲೂಪ್ ಲೈನಿಗೆ ಕನೆಕ್ಟ್ ಮಾಡಿದ ಮೇಲೆ ಅಲ್ಲಿಂದ ಹಳಿ ಲೂಪ್ ಲೈನಿಗೆ ಬದಲಾವಣೆಯಾಗಿದ್ದಕ್ಕೆ ಅಲ್ಲಿ ಅಳವಡಿಸವಾಗಿರುವ ಸೆನ್ಸರ್ ಗಳು ಸಂಕೇತಗಳನ್ನು ಮುಖ್ಯ ಕಂಪ್ಯೂಟರಿಗೆ ಕೊಡಬೇಕು. ಮತ್ತು ಮೇನ್ ಲೈನಿನ ಸೆನ್ಸಾರ್‌ಗಳು ತನ್ನ ಸಂಕೇತಗಳನ್ನು ನಿಲ್ಲಿಸಬೇಕು ಅಲ್ಲದೆ ಲೂಪ್ ಲೈನಿನ ಹಳಿಯ ಮೇಲೆ ಯಾವ ರೈಲು ಕೂಡಾ ಇರಬಾರದು.
ಹಾಗಿದ್ದಲ್ಲಿ ಮಾತ್ರ ಕಂಪ್ಯೂಟರ್ ಆ ಹಳಿಯ ಮೇಲೆ ರೈಲು ಚಲಿಸಲು ಹಸಿರು ನಿಶಾನೆ ತೋರುತ್ತದೆ ಹಾಗೂ ಮುಖ್ಯ ಲೈನಿನಲ್ಲಿರುವ ಹಳಿಗೆ ಕೆಂಪು ನಿಶಾನೆಯನ್ನು ತೋರುತ್ತೆ.
ಹಾಗಾದರೆ ಬಾಲಾಸೋರ್ ರೈಲು ಅಪಘಾತದಲ್ಲಿ ನಡೆದದ್ದೇನು...? ಅಲ್ಲಿ ಟ್ರಾö್ಯಕ್ ಲೂಪ್ ಹಳಿಯೊಂದಿಗೆ ಬದಲಾವಣೆ ಮಾಡಲಾಗಿತ್ತು ಮತ್ತು ಆ ಲೂಪ್ ಹಳಿಯಲ್ಲಿ ಗೂಡ್ಸ್ ರೈಲು ನಿಂತಿತ್ತು. ಸೆನ್ಸಾರ್‌ಗಳು ಹಳಿ ಲೂಪ್ ಲೈನಿಗೆ ಸೇರಿಕೊಂಡಿದೆ ಅಂತ ಸೇಂಕೇತಗಳನ್ನು ಕೊಡುವ ಬದಲಾಗಿ ಮೇನ್ ಲೈನಿನಿಂದಿಗೆ ಸೇರಿಕೊಂಡಿದೆ ಎಂಬ ಸಂಕೇತಗಳನ್ನು ಕಂಪ್ಯೂಟರಿಗೆ ನೀಡಿದೆ. ಹಾಗಾಗಿ ಕಂಪ್ಯೂಟರ್ ರೈಲು ಮೇನ್ ಲೈನಿನಲ್ಲಿ ಸಾಗಲು ಹಸಿರು ನಿಶಾನೆ ತೋರಿದೆ.
ಆದರೆ ಹಳಿ ಲೂಪ್ ಲೈನಿನೊಂದಿಗೆ ಸೇರಿಕೊಂಡಿದ್ದ ಕಾರಣ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಲೂಪ್ ಲೈನಿಗೆ ನುಗ್ಗಿದೆ. ಇಲ್ಲಿ ಕೋರಮಂಡಲ್ ಎಕ್ಸ್ಪ್ರೆಸ್ ರೈಲಿಗೆ ಮೇನ್ ಹಳಿಯಲ್ಲಿ ಸಾಗಲು ಹಸಿರು ನಿಶಾನೆ ಇದ್ದ ಕಾರಣ ಚಾಲಕ ಅದೇ ವೇಗದಲ್ಲಿ ರೈಲನ್ನು ಚಲಾಯಿಸಿರುತ್ತಾನೆ. ಆದರೆ ದುರಾದೃಷ್ಟವಶಾತ್ ರೈಲು ಹಳಿ ಲೂಪ್ ಲೈನಿನೊಂದಿಗೆ ಸೇರಿಕೊಂಡಿದ್ದ ಕಾರಣ ಕೋರಮಂಡಲ್ ಎಕ್ಸ್ಪ್ರ‍್ರೆಸ್ ರೈಲು ಲೂಪ್ ಹಳಿಯೊಳಗೆ ನುಗ್ಗಿ ಲೂಪ್ ಲೈನಿನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯುತ್ತೆ. ಅದೇ ಸಮಯದಲ್ಲಿ ಪಕ್ಕದ ಹಳಿಯಲ್ಲಿ ಹಾದುಹೋಗುತ್ತಿದ್ದ ಯಶವಂತಪುರ - ಹೌರಾ ಎಕ್ಸ್ಪ್ರೆಸ್ ರೈಲಿಗೆ ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳು ಬಡಿದು ಯಶವಂತಪುರ - ಹೌರಾ ಎಕ್ಸ್ಪ್ರೆಸ್ ರೈಲಿನ ಕೊನೆಯ ಎರಡು ಬೋಗಿಗಳು ಅಪಘಾತಕ್ಕೀಡಾಗುತ್ತದೆ.
ಹಾಗಾದರೆ ಹಳಿ ಬದಲಾವಣೆಯ ಸೆನ್ಸ್ಸಾರ್‌ಗಳು ಯಾಕೆ ತಪ್ಪು ಮಾಹಿತಿಯನ್ನು ಕೊಟ್ಟವು? ಒಂದು ವೇಳೆ ಸೆನ್ಸಾರ್‌ಗಳು ಹಾಳಾಗಿ ತಪ್ಪು ಮಾಹಿತಿ ಕೊಟ್ಟಿದ್ದೇ ಆದಲ್ಲಿ ಈ ಸಮಸ್ಯೆ ಸಂಭವಿಸುವ ಸಾಧ್ಯತೆ ಇದೆ. ಆದರೆ ಮೇನ್‌ಲೈನ್ ಮತ್ತು ಲೂಪ್ ಲೈನಿನ ಎರಡು ಸೆನ್ಸಾರ್‌ಗಳು ಏಕಕಾಲಕ್ಕೆ ಹೇಗೆ ಹಾಳಾದವು? ಅದರ ಸಾಧ್ಯತೆ ಕಡಿಮೆ. ಒಂದು ವೇಳೆ ಹಾಳಾಗಿದ್ದೇ ಆದಲ್ಲಿ ಎರಡು ಸೆನ್ಸಾರ್‌ಗಳು ಸಂಕೇತಗಳನ್ನು ಕೊಡುವುದನ್ನು ನಿಲ್ಲಿಸುತ್ತವೆ. ಆದರೆ ಹಸಿರು ನಿಶಾನೆಗೆ ಎರಡು ಸೆನ್ಸಾರ್‌ಗಳ ಸಂಕೇತ ಅತ್ಯಗತ್ಯ. ಒಂದು ವೇಳೆ ಸೆನ್ಸಾರ್‌ಗಳು ಹಾಳಾಗಿದ್ದೇ ಆದಲ್ಲಿ ಸುರಕ್ಷಣಾ ವ್ಯವಸ್ಥೆ ಸೇಫ್ ಮೋಡ್‌ನಲ್ಲಿ ಕಾರ್ಯಾಚರಿಸುತ್ತದೆ. ಅಂದರೆ ಎಲ್ಲಾ ಸಿಗ್ನಲ್‌ಗಳು ಕೆಂಪು ಬಣ್ಣಕ್ಕೆ ತಿರುಗಿ ನಿಲ್ಲುವ ಸೂಚನೆಯನ್ನು ಕೊಡುತ್ತವೆ.
ಇನ್ನೊಂದು ಸಂಭವನೀಯ ಏನೆಂದರೆ ಸೆನ್ಸಾರ್‌ಗಳಿಗೆ ಹಾಕಲ್ಪಟ್ಟಿರುವ ಕೇಬಲ್‌ಗಳು ಮಾರ್ಗ ಮಧ್ಯದಲ್ಲಿ ತುಂಡರಿಸಲ್ಪಟ್ಟು ತಪ್ಪು ಸಂಕೇತಗಳು ಹೋಗಿರಬಹುದು. ಅದರ ಸಾಧ್ಯತೆಯೂ ಕಡಿಮೆ. ಎಲ್ಲಾ ಕೇಬಲ್‌ಗಳು ಏಕ ಕಾಲಕ್ಕೆ ತುಂಡಾಗುವುದು ಅಸಾಧ್ಯ. ಉಳಿದಿರುವ ಒಂದೇ ಯೋಚನೆ ಸೆನ್ಸಾರ್‌ಗಳನ್ನು ಟ್ರೇಸ್ ಮಾಡಿರುವುದು ಅಂದರೆ ಸೆನ್ಸಾರ್‌ಗಳನ್ನು ತನಗೆ ಬೇಕಾದಂತೆ ಬೈಪಾಸ್ ಅಥವಾ ಟ್ರೇಸ್ ಮಾಡಿ ತನಗೆ ಬೇಕಾದಂತೆ ಸಂಕೇತಗಳನ್ನು ಕಂಪ್ಯೂಟರಿಗೆ ರವಾನಿಸುವುದು.
ಹಳಿ ಲೂಪ್ ಲೈನಿಗೆ ತೆರೆದುಕೊಂಡಿರುವಾಗ ಮೇನ್ ಲೈನಿನ ಸೆನ್ಸೆರ್‌ಗಳು ಸಂಕೇತಗಳನ್ನು ಕೊಡುವ ಹಾಗೆ ಮತ್ತು ಸಂಕೇತಗಳನ್ನು ಕೊಡಬೇಕಾಗಿದ್ದ ಲೂಪ್ ಲೈನಿನ ಸೆನ್ಸೆರ್‌ಗಳು ಸಂಕೇತಗಳನ್ನು ಕೊಡದ ಹಾಗೆ ಸೆನ್ಸಾರ್‌ಗಳನ್ನೂ ಟ್ರೇಸ್ ಮಾಡಿರುವುದು. ಈರೀತಿ ಕಂಪ್ಯೂಟರಿಗೆ ಹೋಗುವ ಸಂಕೇತಗಳನ್ನು ಟ್ರೇಸ್ ಅಥವಾ ಬೈಪಾಸ್ ಮಾಡುವ ಮುಖಾಂತರ ಕಂಪ್ಯೂಟರ್ ಲಾಜಿಕ್ ಪ್ರೋಗ್ರಾಮ್‌ಗಳ ದಾರಿ ತಪ್ಪಿಸಿ ಕಂಪ್ಯೂಟರ್ ಹಸಿರು ನಿಶಾನೆ ತೋರಿಸುವಂತೆ ಮಾಡಿರುವ ಅನುಮಾನಗಳು ಈಗ ದಟ್ಟವಾಗಿದೆ. ಇದು ಈಗ ಅತಿ ಹೆಚ್ಚಿನ ಸಾಧ್ಯತೆ ಉಳ್ಳ ಒಂದು ಅನುಮಾನ. ಸೆನ್ಸಾರ್‌ಗಳನ್ನು ಟ್ರೇಸ್ ಮಾಡುವ ಕೆಲಸ ಕೇವಲ ಗೊತ್ತಿರುವ ವ್ಯಕ್ತಿಗಳಿಗೆ ಮಾತ್ರ ಸಾಧ್ಯ.
ಈ ಎಲ್ಲಾ ಸಾಧ್ಯತೆಗಳ ಅನುಮಾನಗಳನ್ನು ರೈಲು ಸುರಕ್ಷಾ ತನಿಖಾ ದಳದ ಮತ್ತು ಸಿಬಿಐ ತನಿಖೆಯ ವರದಿ ಪರಿಹರಿಸಲಿದೆ. ಆದಷ್ಟು ಬೇಗ ತನಿಖೆಯ ವರದಿ ಹೊರಬರಲಿ.
- ಕೋವರ್‌ಕೊಲ್ಲಿ ಇಂದ್ರೇಶ್