ಸೋಮವಾರಪೇಟೆ, ಜೂ. ೯: ಇತ್ತೀಚೆಗೆ ಹೊರಬಿದ್ದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶದ ಬಳಿಕ ಮರು ಮೌಲ್ಯಮಾಪನಕ್ಕೆ ಒಳಪಡಿಸಿದ ನಂತರ ತಾಲೂಕಿನ ಐಗೂರು ಸರಕಾರಿ ಪ್ರೌಢಶಾಲೆಗೆ ಶೇ. ೧೦೦ ಫಲಿತಾಂಶ ಲಭಿಸಿದೆ.

ಪ್ರಥಮ ಫಲಿತಾಂಶ ಪ್ರಕಟಗೊಂಡ ಸಂದರ್ಭ ಶಾಲೆಯ ಈರ್ವರು ವಿದ್ಯಾರ್ಥಿಗಳು ಅನುತ್ತೀರ್ಣ ಗೊಂಡಿದ್ದು, ಶೇ. ೯೫ ಫಲಿತಾಂಶ ಲಭಿಸಿತ್ತು. ನಂತರ ಮರು ಮೌಲ್ಯಮಾಪನಕ್ಕೆ ಒಳಪಡಿಸಲಾಗಿದ್ದು, ಈರ್ವರೂ ಉತ್ತೀರ್ಣಗೊಳ್ಳುವ ಮೂಲಕ ಶಾಲೆಯು ಶೇ. ೧೦೦ ಫಲಿತಾಂಶ ಪಡೆದಿದೆ.

ಇದೇ ಶಾಲೆಯ ಸಿ.ಬಿ. ಬೆಸಿಲ್ ಎಂಬ ವಿದ್ಯಾರ್ಥಿ ೫೯೮ (ಶೇ. ೯೫.೬೮) ಅಂಕಗಳೊAದಿಗೆ ಸರಕಾರಿ ಮತ್ತು ಅನುದಾನಿತ ಶಾಲೆಗಳ ಪೈಕಿ ಕನ್ನಡ ಮಾಧ್ಯಮದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.