ಸೋಮವಾರಪೇಟೆ, ಜೂ. ೮: ತಾಲೂಕಿನ ಪ್ರಾದೇಶಿಕ ವಲಯ ವ್ಯಾಪ್ತಿಯ ಹುದುಗೂರು ಗ್ರಾಮದ ಸಸ್ಯ ಕ್ಷೇತ್ರ‍್ರದಲ್ಲಿ ರೈತರಿಗೆ ವಿವಿಧ ಜಾತಿಯ ಸಸಿಗಳ ವಿತರಣೆಗೆ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಗಾನಶ್ರೀ ಚಾಲನೆ ನೀಡಿದರು.

ನಂತರ ಮಾತನಾಡಿ, ೨೦೨೩-೨೪ ನೇ ಸಾಲಿನಲ್ಲಿ ಶ್ರೀಗಂಧ, ಹೊನ್ನೆ, ಮಾವು, ಮಹಾಗನಿ, ಬಿದಿರು, ಅತ್ತಿ, ಮತ್ತಿ, ನೇರಳೆ, ನೊಗ, ಹೆಬ್ಬೇವು, ಬಳಂಜಿ, ಗಸಗಸೆ, ಜಂಬೂನೇರಳೆ, ಕರಿಬೇವು, ಪನ್ನೇರಳೆ, ಪುನರ್ಪುಳಿ, ತೇಗ, ಸೀಬೆ, ಕಾಡುನೆಲ್ಲಿ ಮತ್ತಿತರ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ.

ಸಸಿಗಳನ್ನು ಪಡೆಯಲು ಫಲಾನುಭವಿಗಳು ಅರ್ಜಿ, ಸ್ಥಳದ ಆರ್ ಟಿಸಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆಯ ವಿವರದ ಪ್ರತಿ, ಪಾಸ್ ಪೋರ್ಟ್ ಅಳತೆಯ ೦೨ ಭಾವಚಿತ್ರದೊಂದಿಗೆ ನಿಗದಿತ ಶುಲ್ಕ ಭರಿಸಿ ಸಸಿ ಪಡೆದುಕೊಳ್ಳಬಹುದು ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಮೊ. ೯೪೮೩೬೪೬೧೦೧ ಸಂಪರ್ಕಿಸಲು ಕೋರಿದ್ದಾರೆ.ಈ ಸಂದರ್ಭ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಎಸ್.ಕೆ. ಫಿರೋಜ್ ಖಾನ್ ಇದ್ದರು.