ಮಡಿಕೇರಿ: ವಿಸ್ತರಣಾ ಶಿಕ್ಷಣ ಘಟಕ ಮತ್ತು ಕೃಷಿ ಇಲಾಖೆ ಸಹಯೋಗದೊಂದಿಗೆ ೫೦ನೇ ವಿಶ್ವ ಪರಿಸರ ದಿನವನ್ನು ಸೋಮವಾಪೇಟೆ ತಾಲೂಕಿನ ೭ನೇ ಹೊಸಕೋಟೆಯಲ್ಲಿ “ಪ್ಲಾಸ್ಟಿಕ್‌ಗೆ ಪರಿಹಾರ” ಎಂಬ ಶೀರ್ಷಿಕೆಯೊಂದಿಗೆ ಆಚರಿಸಲಾಯಿತು.

ಕೃಷಿ ಇಲಾಖೆಯ ಡಿ.ಡಿ.ಎ ಡಾ. ಬಾಲರಾಜ್ ಮುಂದಿನ ಪೀಳಿಗೆಗೆ ಪ್ರಕೃತಿ ಸಂರಕ್ಷಣೆ ಕುರಿತು ಮಾತನಾಡಿದರು ಮತ್ತು ರೈತರಿಗೆ ಇಲಾಖೆಯ ಸವಲತ್ತುಗಳ ಬಗ್ಗೆ ತಿಳಿಸಿದರು.

ವಿಸ್ತರಣಾ ಶಿಕ್ಷಣ ಘಟಕದ ಡಾ. ಚಂದ್ರಶೇಖರ್ ಪರಿಸರ ದಿನದ ಮಹತ್ವದ ಬಗ್ಗೆ ತಿಳಿಸಿದರು. ಡಾ. ಯಾದವ್ ಬಾಬು ಇಲಾಖೆಯ ಇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿದರು.

ಸುಮಾರು ೬೦ ರೈತರು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ರಾಮದಲ್ಲಿ ‘ಆಮ್ಲಜನಕ ಉದ್ಯಾನ’ವನ ಸ್ಥಾಪಿಸಲು ಉದ್ದೇಶಿಸಿರುವ ಜಾಗದಲ್ಲಿ ಭೀಮ ಬಿದಿರನ ಗಿಡಗಳನ್ನು ನೆಡಲಾಯಿತು. ಈ ಸಮಯದಲ್ಲಿ ಮೀನು ಮರಿಗಳು ಮತ್ತು ಕೈತೋಟ ಕಿಟ್‌ಗಳನ್ನು ಅಗತ್ಯವಿರುವ ರೈತರುಗಳಿಗೆ ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಪರಿಸರ ದಿನ ಆಚರಣೆಯಲ್ಲಿ ಗಿಡ ನೆಡುವ ಮೂಲಕ ಪಾಲ್ಗೊಂಡಿದ್ದರು.ವೀರಾಜಪೇಟೆ: ಇಲ್ಲಿನ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಪ್ಲಾಸ್ಟಿಕ್ ಬಳಕೆ ನಿಷೇಧ, ಜಲ ಸಂರಕ್ಷಣೆಯ ಬಗ್ಗೆ ವಿವಿಧ ಭಿತ್ತಿ ಫಲಕಗಳನ್ನು ಪ್ರದರ್ಶಿಸುತ್ತಾ ಸರ್ವೋದಯ ಕಾಲೇಜಿನಿಂದ ದೊಡ್ಡಟ್ಟಿ ಚೌಕಿಯವರೆಗೆ ಪರಿಸರ ಸಂರಕ್ಷಣೆ ಬಗ್ಗೆ ಘೋಷಣೆ ಕೂಗುತ್ತಾ ಜಾಥಾ ನಡೆಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರುಗಳಾದ ಪದ್ಮಲತಾ ಡಿ., ಸುಜಾತ ಆರ್. ಹಾಗೂ ಗ್ರಂಥಪಾಲಕ ರಾಜಶೇಖರ್ ಕೆ.ಎಸ್. ಇದ್ದರು.

ಮಡಿಕೇರಿ: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಎನ್.ಸಿ.ಸಿ. ಘಟಕದ ವತಿಯಿಂದ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಶಾಲೆಯ ಉಪ ಪ್ರಾಂಶುಪಾಲ ಎಂ.ಯು. ಚಂಗಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎನ್.ಸಿ.ಸಿ., ಎ.ಎನ್.ಓ., ಸಿ.ಟಿ.ಓ. ಡ್ಯಾನಿ ಈರಪ್ಪ ಅವರ ಮಾರ್ಗದರ್ಶನದಲ್ಲಿ ಎನ್.ಸಿ.ಸಿ. ಎರಡನೇ ವರ್ಷದ ಕೆಡೆಟ್‌ಗಳು ವಿವಿಧ ರೀತಿಯ ಗಿಡಗಳನ್ನು ನೆಟ್ಟರು.ಸೋಮವಾರಪೇಟೆ: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಆನೆಕೆರೆ ಆವರಣ ಸ್ವಚ್ಛತೆ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಪಂಚಾಯಿತಿ ಆಡಳಿತಾಧಿಕಾರಿ, ತಹಶೀಲ್ದಾರ್ ಎಸ್.ಎನ್. ನರಗುಂದ್ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ, ನಮ್ಮಿಂದಲೇ ಪರಿಸರ ಹಾಳಾಗುತ್ತಿದ್ದು, ಇದನ್ನು ಮನಗಂಡು ನಮ್ಮ ಮುಂದಿನ ಪೀಳಿಗೆಗೂ ಉಳಿಸುವ ಕೆಲಸ ಮಾಡಬೇಕಿದೆ. ಕೇವಲ ಒಂದು ದಿನಕ್ಕೆ ಸೀಮಿತವಾಗಿ ಸ್ವಚ್ಛತೆ ಮತ್ತು ಗಿಡ ನೆಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಿಗೆ ದಿನದ ಸ್ವಲ್ಪ ಸಮಯವನ್ನು ಪರಿಸರದ ಉಳಿವಿಗೆ ಮೀಸಲಿಡಬೇಕೆಂದರು. ನಂತರ ಆನೆಕೆರೆ ಆವರಣವನ್ನು ಸ್ವಚ್ಛ ಮಾಡುವ ಕಾರ್ಯ ನಡೆಯಿತು. ಈ ಸಂದರ್ಭ ಪಂಚಾಯಿತಿ ಸದಸ್ಯರಾದ ಪಿ.ಕೆ. ಚಂದ್ರು, ಜಯಂತಿ ಶಿವಕುಮಾರ್, ಮಹೇಶ್, ಶೀಲಾ ಡಿಸೋಜ, ಸಿಬ್ಬಂದಿಗಳಾದ ರಫೀಕ್, ರೂಪ ಮತ್ತಿತರರು ಇದ್ದರು.ಸೋಮವಾರಪೇಟೆ: ಸಮೀಪದ ಜಂಬೂರು ಟಾಟಾ ಕಾಫಿ ಸಂಸ್ಥೆಯ ವತಿಯಿಂದ ಕುಂಬೂರು-ಮಾದಾಪುರ ರಾಜ್ಯ ಹೆದ್ದಾರಿ ಬದಿಯಲ್ಲಿದ್ದ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಟಾಟಾ ಕಾಫಿ ಸಂಸ್ಥೆ ಜಂಬೂರು ಎಸ್ಟೇಟ್‌ನ ಪ್ರಧಾನ ವ್ಯವಸ್ಥಾಪಕ ಸಿ.ಎ. ರೋಷನ್, ಉಪ ವ್ಯವಸ್ಥಾಪಕ ಆದಿತ್ಯ ಸಿಂಗ್ ಡಿಯಾರ, ಸಿಬ್ಬಂದಿಗಳಾದ ಸುರೇಶ್, ಮಧು, ಶ್ರೀಕಾಂತ್, ಶಿರಾಗ್, ನಂಜಪ್ಪ, ಸರಸ್ವತಿ ಸೇರಿದಂತೆ ಕಾರ್ಮಿಕ ವರ್ಗದವರು ಭಾಗವಹಿಸಿದ್ದರು.ಸೋಮವಾರಪೇಟೆ: ಇಲ್ಲಿನ ಜೇಸೀ ಪುಷ್ಪಗಿರಿ ಮತ್ತು ಬಸವೇಶ್ವರ ಅಂಗನವಾಡಿ ಕೇಂದ್ರದ ಸಹಭಾಗಿತ್ವದಲ್ಲಿ ಮಹಿಳಾ ಸಮಾಜದ ಆವರಣದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಜೆಸಿಐ ಅಧ್ಯಕ್ಷೆ ರುಬೀನಾ ಎಂ.ಎ., ಅಂಗನವಾಡಿ ಶಿಕ್ಷಕಿ ಜಗದಾಂಭ, ಪಟ್ಟಣ ಪಂಚಾಯಿತಿ ಸದಸ್ಯ ಮೃತ್ಯುಂಜಯ, ಮಹಿಳಾ ಸಮಾಜದ ಕಾರ್ಯದರ್ಶಿ ಲೀಲಾ ನಿರ್ವಾಣಿ, ನಾಗರಾಜು, ಪ್ರಕಾಶ್, ರವಿಕುಮಾರ್, ಪವಿತ್ರ ಲಕ್ಷಿö್ಮÃ ಕುಮಾರ್ ಮತ್ತು ಅಂಗನವಾಡಿ ಮಕ್ಕಳು, ಪೋಷಕರು ಭಾಗವಹಿಸಿದ್ದರು.ಮಡಿಕೇರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆನಂದಪುರ ಟಾಟಾ ಕಾಫಿ ವತಿಯಿಂದ ದುಬಾರೆ ಸಮೀಪ ಇರುವ ಕಾವೇರಿ ನದಿಯ ದಡದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಅದರಂತೆ ಅಲ್ಲಿ ಪ್ಲಾಸ್ಟಿಕ್, ಗಾಜಿನ ಬಾಟಲ್ ಹಾಗೂ ಪ್ಲಾಸ್ಟಿಕ್ ಮತ್ತು ಕಾಗದ ಚೂರುಗಳನ್ನು ಸ್ವಚ್ಛತೆ ಮಾಡಿ ಬೇರ್ಪಡಿಸಿ ಅಲ್ಲಿಂದ ಕಸವನ್ನು ವಿಲೇವಾರಿ ಮಾಡಲಾಯಿತು.

ಆನಂದಪುರ ವಿಭಾಗದಿಂದ ಇಂಜಿಲಗೆರೆಯವರೆಗೂ ರಸ್ತೆ ಬದಿಯಲ್ಲಿ ಎಸೆದಿರುವ ಪ್ಲಾಸ್ಟಿಕ್, ಗಾಜಿನ ಬಾಟಲಿಗಳನ್ನು ಹಾಗೂ ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸಿ ಸಂಗ್ರಹಿಸಿ ಅಮ್ಮತ್ತಿಯ ಗ್ರಾಮ ಪಂಚಾಯಿತಿಗೆ ಒಪ್ಪಿಸಲಾಯಿತು.ಪೊನ್ನಂಪೇಟೆ: ಗೋಣಿಕೊಪ್ಪಲು ಸಮೀಪದ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭ ಶಾಲಾ ಮುಖ್ಯಸ್ಥೆ ಶಾಂತಿ ಅಚ್ಚಪ್ಪ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯ ಆಗಿದೆ. ನಾವು ಗಿಡ ನೆಡುವುದು ಮಾತ್ರವಲ್ಲ, ಇತರರಲ್ಲೂ ಪರಿಸರದ ಬಗ್ಗೆ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿ ಎಂಬುದನ್ನು ಮರೆಯಬಾರದು ಎಂದರು.

ಪರಿಸರ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯ ಮುಂಭಾಗದ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಪರಿಸರ ಜಾಗೃತಿಯ ಫಲಕಗಳನ್ನು ಮತ್ತು ಗಿಡಗಳನ್ನು ಹಿಡಿದು ನಿಂತು ರಸ್ತೆಯಲ್ಲಿ ಬರುವ ವಾಹನಗಳನ್ನು ತಡೆದು, ವಿದ್ಯಾರ್ಥಿಗಳು ತಾವೇ ತಯಾರಿಸಿದ ಪರಿಸರ ಸ್ನೇಹಿ ಪೇಪರ್ ಬ್ಯಾಗ್‌ಗಳ ಸಹಿತ ಗಿಡಗಳನ್ನು ನೀಡಿ ಶುಭಕೋರಿ ಪರಿಸರದ ಬಗ್ಗೆ ಅರಿವು ಮೂಡಿಸಿದರು. ಶಾಲೆಯ ಆವರಣದಲ್ಲಿ ಪುಟಾಣಿಗಳು ಗಿಡ ನೆಟ್ಟು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿ ರಕ್ಷಿತ್ ಅಯ್ಯಪ್ಪ, ಪ್ರಾಂಶುಪಾಲೆ ಪುಷ್ಪ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.ಶನಿವಾರಸಂತೆ: ಕೊಡಗಿನ ಅರಣ್ಯಗಳಲ್ಲಿ ಬಿದಿರು, ಅಡಿಕೆ, ತೆಂಗು, ಕಾಡುಬಾಳೆ ಹಾಗೂ ಬೈನೆ ಮರಗಳನ್ನು ಯಥೇಚ್ಛವಾಗಿ ಬೆಳೆಯುವ ಕಾರ್ಯಕ್ರಮಗಳು ನಡೆದರೆ ಕಾಡಿನಿಂದ ನಾಡಿಗೆ ಬರುವ ಆನೆಗಳ ಹಾವಳಿಯನ್ನು ತಡೆಗಟ್ಟಬಹುದು. ಆನೆ-ಮಾನವ ಸಂಘರ್ಷಕ್ಕೂ ಇತಿಶ್ರೀ ಹಾಡಬಹುದು ಎಂದು ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕ್ರಿಯಾಶೀಲ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ಹೇಳಿದರು.

ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಶಾಲಾ ಆವರಣದಲ್ಲಿ ಹಸಿರು ಮನೆ ಪರಿಣಾಮದ ಕುರಿತು ಗಾಜಿನ ಮನೆಯನ್ನು ನಿರ್ಮಿಸಿದ್ದು ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೆöÊಡ್ ಹೆಚ್ಚಾದರೆ ಭೂ ತಾಪಮಾನ ಏರಿಕೆಯಾಗಿ ಉಂಟಾಗುವ ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಮಾತನಾಡಿದರು. ನಾವಿಂದು ವಾಣಿಜ್ಯ ಉದ್ದೇಶದ ಮರಗಳನ್ನು ಬೆಳೆಸುವ ಬದಲು ಹಣ್ಣಿನ ಮರಗಳನ್ನು ಬೆಳೆಯುವ ಮುಖಾಂತರ ವೇಗವಾಗಿ ಅರಣ್ಯೀಕರಣ ಮಾಡಬಹುದು. ಹಣ್ಣುಗಳನ್ನು ತಿನ್ನುವ ಪಕ್ಷಿಗಳು ಎಲ್ಲೆಂದರಲ್ಲಿ ಹಿಕ್ಕೆಗಳನ್ನು ಹಾಕುವ ಮೂಲಕ ಅಲ್ಲಲ್ಲಿ ಮರಗಿಡಗಳು ಬೆಳೆದು ತನ್ಮೂಲಕ ಅರಣ್ಯ ತನ್ನಿಂದ ತಾನೇ ವೃದ್ಧಿಯಾಗುತ್ತದೆ. ಕಾಡಿನ ಪ್ರಾಣಿ-ಪಕ್ಷಿಗಳಿಗೂ ಆಹಾರ ದೊರೆತಂತಾಗುತ್ತದೆ.ಈ ದೃಷ್ಟಿಯಿಂದಲೇ ಕಾಡು ಹಣ್ಣಿನ ಮರಗಳನ್ನೇ ಹೆಚ್ಚಾಗಿ ಬೆಳೆಯಬೇಕು ಎಂದು ಸತೀಶ್ ಅಭಿಪ್ರಾಯಪಟ್ಟರು.

ಈ ಸಂದರ್ಭ ಶಿಕ್ಷಕ ಮಂಜುನಾಥ್, ಅಡುಗೆ ಸಿಬ್ಬಂದಿ ಸ್ವಾತಿ, ಬಿಂದು, ಅಂಗನವಾಡಿ ಕಾರ್ಯಕರ್ತೆಯರಾದ ಪವಿತ್ರಾ ಹಾಗೂ ಜಯಾ ಜೊತೆಗಿದ್ದರು.ಹೊಸಕೋಟೆ ಕೃಷಿ ಇಲಾಖೆ

ಕೂಡಿಗೆ: ಕೃಷಿ ಇಲಾಖೆ, ಪ್ರಧಾನ ಮಂತ್ರಿ ಸಂಚಾಯಿ ಯೋಜನೆ, ಜಲಾನಯನ ಅಭಿವೃದ್ಧಿ ಘಟಕ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ೭ನೇ ಹೊಸಕೋಟೆ ಪ್ರೌಢಶಾಲಾ ಸಭಾಂಗಣದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಪ ಕೃಷಿ ನಿರ್ದೇಶಕ ಡಾ. ಬಾಲ್‌ರಾಜ್ ರಂಗರಾವ್ ನೆರವೇರಿಸಿ ನಂತರ ಮಾತನಾಡಿ, ಪರಿಸರ ಜಾಗೃತೆಯ ಮಹತ್ವ, ನೀರು ಸಂರಕ್ಷಣೆ, ಮರಗಳ ಬೆಳೆಸುವ ವಿಧಾನಗಳು ಪ್ರತಿಯೊಬ್ಬರೂ ತಿಳಿದುಕೊಂಡು ಅದರ ಮೂಲಕ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದರೆ ಪರಿಸರ ಸುರಕ್ಷಿತವಾಗಿರುತ್ತದೆ ಎಂದರು.

ಈ ಸಂದರ್ಭ ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ. ಚಂದ್ರಶೇಖರ್ ಪರಿಸರ ಸಂರಕ್ಷಣೆ ಮತ್ತು ಅದರ ಉಳಿವಿನ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಯಾದವ್ ಬಾಬು, ಕೃಷಿ ಅಧಿಕಾರಿ ನವ್ಯ ನಾಣಯ್ಯ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ವರ್ಗದವರು, ರೈತರು ಭಾಗವಹಿಸಿದ್ದರು.

ಈ ಸಂದರ್ಭ ಪ್ರೌಢಶಾಲಾ ಆವರಣದಲ್ಲಿ ವಿವಿಧ ಬಗೆಯ ಔಷಧೀಯ ಗುಣಗಳನ್ನು ಹೊಂದಿದ ಮತ್ತು ಹಣ್ಣಿನ ಗಿಡಗಳನ್ನು ನೀಡಲಾಯಿತು.ಸೋಮವಾರಪೇಟೆ: ಸಮೀಪದ ತಣ್ಣೀರುಹಳ್ಳ ಗ್ರಾಮದ ಮಸಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ದಿನದ ಅಂಗವಾಗಿ ಶಿಕ್ಷಕ ಕೆ.ಜಿ. ನಾಗೇಂದ್ರ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ೫೦ಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ನೆಟ್ಟರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಸಿ. ತಿಮ್ಮಪ್ಪ, ಪಿಡಿಓ ಆಯಿಷಾ, ಎಸ್‌ಡಿಎಂಸಿ ಸದಸ್ಯ ಪ್ರದೀಪ್, ಗ್ರಾ.ಪಂ. ಸಿಬ್ಬಂದಿಗಳಾದ ಕಾರ್ತಿಕ್ ಗೌಡ, ಮೂರ್ತಿ, ಮುಖ್ಯ ಶಿಕ್ಷಕಿ ಶಾಂತಮ್ಮ, ಸಹ ಶಿಕ್ಷಕಿ ವಿಮಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಚೆಯ್ಯಂಡಾಣೆ: ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಇದ್ದರು.ಚೆಟ್ಟಳ್ಳಿ: ಕಂಡಕೆರೆ ಎಸ್‌ಎಸ್‌ಎಫ್ ಮತ್ತು ಎಸ್‌ಬಿಎಸ್ ವತಿಯಿಂದ ಕಂಡಕೆರೆ ಮದರಸ ಆವರಂದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಣೆ ಮಾಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭ ಖತಿಬರಾದ ಮುಸ್ತಫಾ ಸಖಾಫಿ, ಎಸ್‌ಎಸ್‌ಎಫ್ ಜಿಲ್ಲಾ ಸದಸ್ಯ ಹುಸೈನ್ ಬಾದುಷ ಸಖಾಫಿ, ಎಸ್‌ಎಸ್‌ಎಫ್ ಸೆಕ್ಟರ್ ಸದಸ್ಯ ಸುಹೈಲ್ ಕೆ.ಎ. ಸದಸ್ಯರಾದ, ಸವಾದ್, ಸಮ್ಮಸ್, ಇಸಾಖ್ ಮುಂತಾದವರು ಹಾಜರಿದ್ದರು.ಮಡಿಕೇರಿ: ಕೊಡಗು ಜಿಲ್ಲಾ ಪಂಚಾಯಿತಿ ಕೊಡಗು ವೃತ್ತ, ಸಾಮಾಜಿಕ ಅರಣ್ಯ ವಲಯ ಮಡಿಕೇರಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ-೨೦೨೩ ರ ಅಂಗವಾಗಿ ಮಡಿಕೇರಿ ನಗರದ ಹೊರ ವಲಯದ ಕೊಡಗು ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಆರ್ಟಿಫಿಶಿಯಲ್ ರಿಜನರೇಷನ್ ಮಾದರಿಯಲ್ಲಿ ಭೂಕುಸಿತ ಹಾಗೂ ಬರೆ ಕುಸಿಯುವ ಜಾಗದಲ್ಲಿ ಇರುವ ಜಾಗದಲ್ಲಿ ಔಷಧೀಯ ಗುಣ ಹಾಗೂ ಬಹುಪಯೋಗಿ ಹೊಂದಿರುವ ಲಾವಂಚ (ಕಸ್ಸ್ ಗ್ರಾಸ್) ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ಕೆ ಜಿಲ್ಲಾ ಪಂಚಾಯಿತಿ ಸಿಇಓ ಡಾ. ಎಸ್. ಆಕಾಶ್ ಚಾಲನೆ ನೀಡಿದರು.

ಜಿಲ್ಲಾ ಪಂಚಾಯಿತಿ ಕಚೇರಿಯ ಗುಡ್ಡದ ಸುತ್ತಲಿನ ಇಳಿಜಾರು ಪ್ರದೇಶದಲ್ಲಿ ೧೬೦೦ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸುವ ಉದ್ದೇಶ ಹೊಂದಿರುವ ಸ್ಥಳದಲ್ಲಿ ಅಧಿಕಾರಿಗಳು, ಸ್ವಯಂಸೇವಕರು ಜತೆಗೂಡಿ ಸಸಿನೆಟ್ಟರು. ಈ ಸಂದರ್ಭ ಮಾತನಾಡಿದ ಜಿ.ಪಂ. ಸಿಇಓ ಡಾ. ಎಸ್. ಆಕಾಶ್, ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಹಸಿರು ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದರು. ನಾವು ಪರಿಸರವನ್ನು ಸಂರಕ್ಷಿಸಿದರೆ, ಪರಿಸರ ನಮ್ಮನ್ನು ಸಂರಕ್ಷಿಸುತ್ತದೆ ಎಂದರು.

ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಮಾತನಾಡಿ, ಪರಿಸರ ಸಮತೋಲನ ಕಾಪಾಡಿಕೊಳ್ಳುವ ದಿಸೆಯಲ್ಲಿ ನಾವು ಹೆಚ್ಚೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ಉತ್ತಮ ಪರಿಸರ ಕಾಪಾಡಿಕೊಳ್ಳಬೇಕು ಎಂದರು.

ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮಾಥ್ಯೂ, ಸಂಯೋಜಕಿ ಯು.ಸಿ. ದಮಯಂತಿ, ಜಿ.ಪಂ. ಉಪ ಕಾರ್ಯದರ್ಶಿ ಧನಂಜಯ್, ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಂಗಪ್ಪ, ವಲಯ ಅರಣ್ಯ ಅಧಿಕಾರಿ ಮಯೂರ್ ಕಾರವೇಕರ, ಉಪ ವಲಯ ಅರಣ್ಯ ಅಧಿಕಾರಿ ಎಂ.ಜಿ. ದರ್ಶಿ, ಗಸ್ತು ಅರಣ್ಯಪಾಲಕ ಬಿ.ಪಿ. ಚಂದ್ರಾವತಿ ಹಾಗೂ ಅರಣ್ಯ ಇಲಾಖೆಯ, ಜಿಲ್ಲಾ ಪಂಚಾಯಿತಿ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.